ಸಂಪುಟ ಪುನಾರಚನೆ ಮುಖ್ಯಮಂತ್ರಿಯವರ ವಿವೇಚನೆಗೆ ಬಿಟ್ಟದ್ದು – ಉಮೇಶ ಕತ್ತಿ

0
66

ಸಂಪುಟ ಪುನಾರಚನೆ ಮುಖ್ಯಮಂತ್ರಿಯವರ ವಿವೇಚನೆಗೆ ಬಿಟ್ಟದ್ದು – ಉಮೇಶ ಕತ್ತಿ

ಕನ್ನಡಮ್ಮ ಸುದ್ದಿ-ಹುಕ್ಕೇರಿ : ಸಂಪುಟ ಪುನರಚನೆ ಸಿಎಂ ಅವರ ವಿವೇಚನೆಗೆ ಬಿಟ್ಟದ್ದು ,ಮುಂದಿನ ಹತ್ತು ವರ್ಷ ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರಕಾರ ನಡೆಸಲಿದೆ ,
ಸಿಎಂ ಯಡಿಯೂರಪ್ಪ ನಮ್ಮ ನಾಯಕರು,ಮುಂದಿನ ದಿನಗಳಲ್ಲಿ ಸಚಿವ ಸಂಪುಟ ಪುನಾರಚನೆ ಆಗಲಿದೆ .ನಾನು ಯಡಿಯೂರಪ್ಪನವರ ಸರ್ಕಾರದಲ್ಲಿ ಈ ಹಿಂದೆ ಮಂತ್ರಿಯಾಗಿ ಕೆಲಸ ಮಾಡಿದ್ದೆನೆ ,ಮುಂದಿನ ದಿನಗಳಲ್ಲಿ ಮಂತ್ರಿಯಾಗುವೆ ಎಂದು ಶಾಸಕ ಉಮೇಶ ಕತ್ತಿ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ .

ಇಂದು ಹುಕ್ಕೇರಿ ಪಟ್ಟಣದ ಕೋರ್ಟ್ ಸರ್ಕಲ್ ದಲ್ಲಿರುವ ಈಶ್ವರಲಿಂಗ ದೇವಸ್ಥಾನ ಕಟ್ಟಡ ಅಡಿಗಲ್ಲು ನೇರವೆರಿಸಿ ಮಾತನಾಡಿದರು . ಸಂಪುಟ ವಿಸ್ತರಣೆ ಸಿಎಂ ಅವರ ವಿವೇಚನೆಗೆ ಬಿಟ್ಟದ್ದು , ಮುಂದಿನ ಒಂದು ವಾರದಲ್ಲಿ ಸಂಪುಟ ವಿಸ್ತರಣೆಯಾಗಲಿದೆ ಎಂದು ಉಮೇಶ ಕತ್ತಿ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ .

ಇನ್ನು ವೇಳೆ ಮಾತನಾಡಿದ ರಾಜ್ಯ ಸಭೆ ಸದಸ್ಯ ಈರಣ್ಣ ಕಡಾಡಿ ಹಿರಿಯ ಶಾಸಕರಾದ ಉಮೇಶ ಕತ್ತಿ ಅವರು ಸಚಿವರಾಗಬೇಕೆಂಬುವುದು ಈ ಭಾಗದ ಜನರ ಕೂಗಿದೆ. ಬರುವ ದಿನಗಳಲ್ಲಿ ಒಳ್ಳೆಯ ಸಂದೇಶ ಅವರಿಗೆ ಬರಲಿದೆ ,ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹುಕ್ಕೇರಿ ತಾಲೂಕಿಗೆ ಅತಿ ಹೆಚ್ಚು ಹಣ ತಂದ ಕೀರ್ತಿ ಶಾಸಕರಾದ ಉಮೇಶ ಕತ್ತಿ ಅವರಿಗೆ ಸಲ್ಲುತ್ತದೆ.ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ಇಲ್ಲ ಅದರ ಬಗ್ಗೆ ಮಾತನಾಡುವಷ್ಟು ದೊಡ್ಡ ನಾಯಕ ನಾನಲ್ಲ ಎಂದರು .

ಈ ಸಂದರ್ಭದಲ್ಲಿ ಸಿಪಿಐ ಗುರುರಾಜ್ ಕಲ್ಯಾಣಶೆಟ್ಟಿ , ತಾ.ಪಂ ಎಒ ಲಾಳಿ , ಮುಖಂಡರಾದ ರಾಜು ಮುನ್ನೋಳಿ ,ಮಲ್ಲಪ್ಪ ಬಿಸಿರೋಟ್ಟಿ ,ಸೇರಿದಂತೆ ಇತರರು ಇದ್ದರು .

loading...