ಸಂಭ್ರಮದಿಂದ ಬಕ್ರೀದ್ ಹಬ್ಬ ಆಚರಣೆ

0
42

ಕನ್ನಡಮ್ಮ ಸುದ್ದಿ-ಗಜೇಂದ್ರಗಡ: ಮನದ ಅಹಂಭಾವ ತ್ಯಾಗಮಾಡಿ ಶ್ರದ್ಧೆ, ಭಕ್ತಿಯ ಪರಿಪಾಲನೆಯೊಂದಿಗೆ ಸೃಷ್ಠಿಕರ್ತನಲ್ಲಿ ಶರಣಾಗಿ ಇಸ್ಲಾಮಿನ ಮೂಲ ಭಾವೈಕ್ಯೆತಾ ಸಂದೇಶ ಬದುಕಿನಲ್ಲಿ ಅಳವಡಿಸಿಕೊಂಡು ಬಾಳಿದಾಗ ಮಾತ್ರ ಅಲ್ಲಾಹನ ಕೃಪೆಗೆ ಪಾತ್ರರಾಗಲು ಸಾಧ್ಯ ಎಂದು ಮೌಲಾನಾ ಖುಶತ್ತಾರ್ ನೂರಾನಿ ಹೇಳಿದರು.
ಸ್ಥಳೀಯ ಈದ್ಗಾ ಮೈದಾನದಲ್ಲಿ ಬಕ್ರೀದ್ ಹಬ್ಬದ ಆಚರಣೆ ನಿಮಿತ್ಯ ಬುಧವಾರ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಧರ್ಮಗ್ರಂಥ ಕುರಾನ್ ಪಟಿಸಿ ಮಾತನಾಡಿದರು.ಇದಕ್ಕೂ ಮುನ್ನ ಬೆಳಗ್ಗೆ ಎಲ್ಲ ಮುಸಲ್ಮಾನ ಬಂಧುಗಳು ಜುಮ್ಮಾ ಮಸೀದಿಯಿಂದ ಜೂಲುಸ್ ಮೂಲಕ ಸಾಮೂಹಿಕ ಮೆರಣಿಗೆಯಲ್ಲಿ ಅಲ್ಹಾಹನ ನಾಮಸ್ಮರಣೆ ಮಡುತ್ತಾ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ
ಸಲ್ಲಿಸಿದರು.ಈ ವೇಳೆ ಮೌಲಾನಾ ಖಲೀಲ ಅಶ್ರಫಿ, ಮೌಲಾನಾ ರಫೀಕ್ ಅಶ್ರಫಿ, ಹಜರತ್ ನಿಜಾಮುದ್ದಿನಶಹಾ ಮಕಾನದಾರ, ಸಂಸ್ಥೆಯ ಚೇರಮನ್ ಎಂ.ಬಿ.ಒಂಟಿ, ಸುಬಾನಸಾಬ ಆರಗಿದ್ದಿ, ಎಂ.ಎಚ್ ಕೋಲಕಾರ, ಮಕ್ತುಂಸಾಬ ಮುಧೋಳ, ಹಸನಸಾಬ ತಟಗಾರ, ಮಾಸೂಮಲಿ ಮದಗಾರ, ರಾಜು ಸಾಂಗ್ಲಿಕಾರ, ಡಿ.ಜಿ ಮೋಮಿನ್, ಇರ್ಫಾನ್ ಮುದಗಲ್ಲ, ಎಂ.ಎಸ್.ಮಕಾನದಾರ, ಅಬ್ದುಲ್ ಮನಿಯಾರ ಸೇರಿ ಸಮಾಜದ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಬಳಿಕ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

loading...