ಸಂಭ್ರಮದ ನೀರೋಕುಳಿಗೆ ಸಾಕ್ಷಿಯಾದ ಕಾಲತಿಪ್ಪಿ ಗ್ರಾಮ

0
2

ಕನ್ನಡಮ್ಮ ಸುದ್ದಿ-ತೇರದಾಳ: ಸಮೀಪದ ಕಾಲತಿಪ್ಪಿ ಗ್ರಾಮದ ಆರಾಧ್ಯ ದೈವ ಹನುಮಾನ ನೀರೋಕಳಿ ಕಳೆದ ಮೂರು ದಿನಗಳಿಂದ ಸಂಭ್ರಮ ಸಡಗರದಿಂದ ನಡೆದಕೊಂಡು ಬಂದಿದ್ದು, ಸೋಮವಾರ ಸಂಜೆ ಕಡಿಯೊಕಳಿಯೊಂದಿಗೆ ಕೊನೆಗೊಂಡಿತು.
ಮೊದಲ ದಿನ ಶನಿವಾರ ದೇವಸ್ಥಾನಲ್ಲಿ ಹೊಡಕ್ಕೆ ಪೂಜೆ ಸಲ್ಲಿಸುವ ಮೂಲಕ ಓಕುಳಿಗೆ ಚಾಲನೆ ನೀಡಲಾಯಿತು.

ಎರಡನೇ ದಿನ ರವಿವಾರ ಸಂಜೆ ಗ್ರಾಮದಲ್ಲಿ ನೀರೋಕುಳಿಯನ್ನು ಆಡಲು ಪ್ರಾರಂಭಿಸಿದರು. ಕೊನೆಯ ದಿನವಾದ ಸೋಮವಾರ ಬೆಳಿಗ್ಗೆ ಹನುಮಾನ ದೇವಸ್ಥಾನದಲ್ಲಿ ರುದ್ರಾಭಿಷೇಕ, ವಿಶೇಷ ಪೂಜೆ, ಅಲಂಕಾರ ಪೂಜೆ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳು ಅರ್ಚಕರಾದ ಚಂದು ನಾಯಕ ಅವರಿಂದ ನೆರವೇರಿದವು. ನಂತರ ಗ್ರಾಮದ ಎಲ್ಲ ಸಮುದಾಯದವರು ಟ್ರಾö್ಯಕ್ಟರ್‌ನಲ್ಲಿ ಕೊಡಗಳನ್ನು ಇಟ್ಟುಕೊಂಡು ಬಂದು, ದೇವಸ್ಥಾನದಲ್ಲಿನ ಹೊಂಡ(ಕೊಂಡ)ವನ್ನು ನೀರಿನಿಂದ ತುಂಬಿಸಿದರು. ಸಂಜೆ ಗ್ರಾಮದ ಲಕ್ಷಿö್ಮ ದೇವಿ ದೇವಸ್ಥಾನದಿಂದ ಪಲ್ಲಕ್ಕಿಯನ್ನು ಸಕಲ ವಾಧ್ಯಮೇಳಗಳೊಂದಿಗೆ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಕರೆತಂದ ಬಳಿಕ ಮತ್ತೆ ಓಕುಳಿ ಆಟಕ್ಕೆ ಚಾಲನೆ ನೀಡಲಾಯಿತು. ಪರಸ್ಪರ ನೀರು ಎರಚಾಡುವುದು, ನೀರು ಎರಚಲು ಬಂದವರಿಗೆ ಮಹಿಳೆಯರ ವೇಷ ಧರಿಸಿದ ಪುರಷರಿಂದ ತಪ್ಪಿಸಿಕೊಳ್ಳುವುದು ನೋಡುಗರನ್ನು ರಂಜಿಸಿತು. ಸುಮಾರು ಒಂದು ಗಂಟೆಗೂ ಅಧಿಕ ಕಾಲ ನಡೆದ ನೀರೋಕುಳಿಯನ್ನು ಗ್ರಾಮದ ಮಹಿಳೆಯರು ಸೇರಿದಂತೆ ಬೇರೆ ಬೇರೆ ಗ್ರಾಮಗಳ ನೂರಾರು ಜನರು ಆಗಮಿಸಿ ವಿಕ್ಷಿಸಿದರು. ಓಕುಳಿ ನಿಮಿತ್ಯ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ರಾತ್ರಿ ಮೊರಟಗಿಯ ಭಾಗ್ಯವಂತಿ ದೇವಿ ನಾಟ್ಯ ಸಂಘದ ಕಲಾವಿದರಿಂದ ಹಾಸ್ಯಮಯ ನಾಟಕ ಜರುಗಿತು.
ಮಹಾದೇವ ನಾಯಕ, ಕಲ್ಲಪ್ಪ ನಾಯಕ, ಪರಪ್ಪ ನಾಯಕ, ಶೇಖರ ನಾಯಕ, ಕುಬೇರ ನಾಯಕ, ಸದಾಶಿವ ನಾಯಕ, ಹನಮಂತ ನಾಯಕ, ಲಕ್ಷö್ಮಣ ನಾಯಕ, ಮಲ್ಲಪ್ಪ ನಾಯಕ, ಯಮನಪ್ಪ ನಾಯಕ ಸೇರಿದಂತೆ ಗ್ರಾಮ ಪಂಚಾಯ್ತಿ ಸದಸ್ಯರು, ಮುಖಂಡರು, ಕಮೀಟಿ ಸದಸ್ಯರು ಪಾಲ್ಗೊಂಡಿದ್ದರು.

loading...