ಸಂವಿಧಾನ ಬಿಕ್ಕಟ್ಟಿನತ್ತ

0
31

ಲೋಕಾಯುಕ್ತರ ನೇಮಕದ ವಿಷಯದಲ್ಲಿ ರಾಜ್ಯಪಾಲ ಎಚ್. ಆರ್. ಭಾರದ್ವಾಜ ಮತ್ತು ಸರಕಾರದ ನಡುವಿನ ಜನರ ತಾರಕಕ್ಕೆ  ಏರಿದೆ.  ಗುರುವಾರ ನಡೆದ  ಭಾಜಪ ಶಾಸಕಾಂಗ ಪಕ್ಷದ ಸಭೆಯಲ್ಲಿ  ಲೋಕಯುಕ್ತರನ್ನಾಗಿ  ನ್ಯಾಯಮೂರ್ತಿ ಬನ್ನೂರಮಠ ಅವರನ್ನು ನೇಮಕ ಮಾಡಬೇಕು ಇಲ್ಲವೇ ರಾಜ್ಯಪಾಲರ ತಮ್ಮ ಹುದ್ದೆಗೆ  ರಾಜೀನಾಮೆ ನೀಡಬೇಕು ಎಂಬ ಗೊತ್ತುವಳಿಯನ್ನು ಸ್ವೀಕರಿಸಲಾಗಿದೆ. ಇದೇ ರೀತಿಯ ಗೊತ್ತುವಳಿಯನ್ನು ವಿಧಾನ ಸಭೆಯಲ್ಲಿ ಮಂಡಿಸುವ ಉದ್ದೇಶವನ್ನು ಭಾಜಪ ಹೊಂದಿದೆ.  ಜೊತೆಗೆ ಈ ರಾಜ್ಯಪಾಲರನ್ನು ಮರಳಿ ಕರೆಸಿಕೊಳ್ಲಬೇಕು ಎಂದು ರಾಷ್ಟ್ತ್ರಪತಿಗಳನ್ನು ಆಗ್ರಹ ಪಡಿಸಲು ಸಧ್ಯದಲ್ಲಿ ನಿಯೋಗವೊಂದನ್ನು ದೆಹಲಿಗೆ ಕಳಿಸಲು ನಿರ್ಧರಿಸಲಾಗಿದೆ. ಇವೆಲ್ಲ ಬೆಳವಣಿಗೆಗಳಿಂದಾಗಿ ರಾಜ್ಯದ ರಾಜಕೀಯದಲ್ಲಿ ಸಂವಿಧಾನಿಕ ಬಿಕ್ಕಟ್ಟು ಉಂಟಾಗುವ ಸಾಧ್ಯತೆ ಇದೆ.

ಭಾಜಪದವರು ರಾಜ್ಯಪಾಲರ ಬುಡಕ್ಕೆ ಪೆಟ್ಟು ನೀಡುವ ಕಾರ್ಯದಲ್ಲಿ ನಿರತವಾಗಿರುವಾಗ ರಾಜ್ಯಪಾಲರು ಅಷ್ಟೇ ದಿಟ್ಟತನದಿಂದ  ಉತ್ತರ ನೀಡಿದ್ದಾರೆ. ನೈತಿಕತೆ ಇರುವ ಸಾಮಾನ್ಯ ವ್ಯಕ್ತಿ ನನ್ನ ರಾಜೀನಾಮೆ ಕೇಳದೆ ಈ ಕ್ಷಣದಲ್ಲಿಯೇ ರಾಜೀನಾಮೆ ನೀಡುತ್ತೇನೆ ಆದರೆ ರಾಜಕೀಯ ನೈತಿಕತೆ ಇಲ್ಲದವರೆಲ್ಲ ನನ್ನ ರಾಜಿನಾಮೆ ಕೇಲೀದರೆ ನಾನು ಕೊಡುವುದಕ್ಕೆ ಸಾಧ್ಯವಾಗುವುದಿಲ್ಲ. ಜನರ ಮುಂದೆ   ತಲೆ ಎತ್ತಿಕೊಂಡು ತಿರುಗಾಡದಷ್ಟು ಭ್ರಷ್ಟರಾಗಿರುವ ಅವರು ಮೊದಲು ರಾಜೀನಾಮೆ ನೀಡಲಿ ಆಮೇಲೆ ನನ್ನ ರಾಜೀನಾಮೆ ಕೇಳಲಿ ಎಂದು ಹೇಳಿದ್ದಾರೆ.

ಈಗಾಗಲೇ ಬುಧವಾರದಿಂದ ವಿಧಾನ ಸಭೆಯಲ್ಲಿ ಈ ವಿಷಯವಾಗಿಯೇ ಗದ್ದಲ ಗೊಂದಲ ಮುಂದುವರೆದು ಎರಡು ದಿನದ ಕಲಾಪ ಹಾಳಾಗಿದೆ. ಗುರುವಾರ ದಿನ ಈ ಸರಕಾರ ಯುಸ್ಲೆಸ್ ಫೆಲೋ ಆಗಿದೆ. ಎಂದು ಪದ ಬಳಕೆಯನ್ನು ವಿಧಾನ ಸಭೆಯ ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ಬಳಕೆ ಮಾಡಿದ್ದರಿಂದ ಸಿದರಾಮಯ್ಯ ಹಾಗೂ ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ನಡುವೆ  ತೀವ್ರ ಮಾತಿನ ಚಕಮಕಿ ನಡೆಯಿತು. ಹೀಗಾಗಿ ಈ ವಿವಾದ ಪರಿಹಾರಗೊಳ್ಳುವವರೆಗೆ ವಿಧಾನ ಸಭೆಯ ಕಲಾಪ ನಡೆಯುವುದು ಅಸಾಧ್ಯ ಎಂಬ ಪರಿಸ್ಥಿತಿ ಈಗ ಉಂಟಾಗಿದೆ.  ಮುಂದಿನ 16ರ ವರೆಗೆ ಅಧಿವೇಶನ ನಡೆಯಲಿದ್ದು, ವಿಧಾನ ಸಭೆಯಲ್ಲಿ ಸುಗಮ ಕಲಾಪ ನಡೆಯುವುದೇ ಅಥವಾ ಇಲ್ಲವೇ ಎಂಬುದು ಡೋಲಾಯಮಾನವಾದ ಸಂಗತಿಯಾಗಿದೆ.

ರಾಜ್ಯಪಾಲರು ಹಾಗೂ ಸರಕಾರ ತಮ್ಮ ತಮ್ಮ ನಿಲುವಿಗೆ ಬದ್ಧವಾಗಿರುವುದರಿಂದ ಈ ವ್ಯವಹಾರ ಸಧ್ಯಕ್ಕೆ ಪರಿಹಾರಗೊಳ್ಳುವ ಯಾವುದೇ ಲಕ್ಷಣಗಳು ಕಂಡು ಬರುತ್ತಿಲ್ಲ ಹೀಗಾಗಿ ಈ ವಿವಾದ ಸಂವಿಧಾನ  ಬಿಕ್ಕಟ್ಟಿಗೆ ಕಾರಣವಾಗಬಹುದೇ  ಎಂಬ ಶಂಕೆ  ಉಂಟಾಗಿದೆ. ನ್ಯಾಯಮೂರ್ತಿ ಬನ್ನೂರಮಠ ಅವರು ಅಕ್ರಮ ನಿವೇಶನ ಹೊಂದಿರುವುದರಿಂದ ಅವರ ನೇಮಕ ಸಾಧ್ಯವಿಲ್ಲ ಎಂಬುದು ರಾಜ್ಯಪಾಲರ ಅಭಿಮತವಾಗಿದೆ. ಬೇರೆ ಯೋಗ್ಯ ನ್ಯಾಯಮೂರ್ತಿಗಳ ಹೆಸರನ್ನು ಲೋಕಾಯುಕ್ತರ ನೆೇಮಕಕ್ಕೆ ಸೂಚನೆ ಮಾಡಿದರೆ  ಒಂದೇ ನಿಮಿಷದಲ್ಲಿ ಅದಕ್ಕೆ ಸಹಿ ಹಾಕುತ್ತೇನೆ ಎಂಬುದು ರಾಜ್ಯಪಾಲರ ನಿಲುವಾಗಿದೆ. ಆದರೆ ಯಾವುದೇ ಕಾರಣಕ್ಕೂ ನಾವು ನ್ಯಾಯ ಮೂರ್ತಿ ಬನ್ನೂರ ಮಠ ಅವರ ಹೆಸರನ್ನು ಮರಳಿ ಪಡೆಯುವುದಿಲ್ಲ. ಅವರನ್ನೇ ಲೋಕಾಯುಕ್ತರನ್ನಾಗಿ ಮಾಡಬೇಕು ಸರಕಾರದ ಶಿಫಾರಸ್ಸನ್ನು ತಳ್ಳಿ ಹಾಕುವ ಅಧಿಕಾರ ರಾಜ್ಯಪಾಲರಿಗೆ ಇರುವುದಿಲ್ಲ ಎಂಬುದು ಸರಕಾರದ ನಿಲುವಾಗಿದೆ. ಇದೇ ಕಾರಣದಿಂದ ಈ ಜಗಳ ಉಂಟಾಗಿ ಈಗ ವಿಕೋಪಕ್ಕೆ ತಿರುಗಿದೆ. ಈ ಮಧ್ಯೆ ಪ್ರತಿಪಕ್ಷಗಳ ನಾಯಕರು  ರಾಜ್ಯಪಾಲರ ಬೆನ್ನಿಗೆ ನಿಂತಿರುವುದರಿಂದ ಸಮಸ್ಯೆ ಮತ್ತಷ್ಟು  ಜಟಿಲವಾಗಿದೆ. ಈ ಎಲ್ಲ ಗೊಂದಲಗಳನ್ನು ನೋಡಿದರೆ ಈ ಸರಕಾರ ಅಬೀವೃದ್ದಿ ಕಾರ್ಯಗಳ ಬಗ್ಗೆ ಯಾವುದೇ ರೀತಿಯಲ್ಲಿ ಗಮನವನ್ನು ಹರಿಸದೆ ಕೇವಲ  ವಿವಾದಗಳಲ್ಲಿ  ಸಮಯವನ್ನು   ಹಾಳು ಮಾಡುತ್ತಿರುವಂತೆ ಕಂಡು ಬರುತ್ತದೆ. ಹೀಗಾಗಿ ರಾಜ್ಯದ ರಾಜಕೀಯದಲ್ಲಿ ಈಗ ಅಯೋ ಮಯೋ ವಾತಾವರಣ  ಉಂಟಾದಂತೆ ಕಂಡು ಬರುತ್ತದೆ. ಇದು ಯಾವ ರೀತಿಯಲ್ಲಿ  ಪರಿಹಾರಗೊಳ್ಲುತ್ತದೆ. ಎಂಬುದನ್ನು  ಈಗಲೇ ಹೇಳುವುದಕ್ಕೆ  ಸಾಧ್ಯವಾವುದಿಲ್ಲ.

 

 

loading...

LEAVE A REPLY

Please enter your comment!
Please enter your name here