ಸಂಶಿ ಗ್ರಾಮ ರಸ್ತೆ ಕಾಮಗಾರಿಗೆ ಸಿ.ಎಸ್.ಶಿವಳ್ಳಿ ಚಾಲನೆ

0
24

 

ಕುಂದಗೋಳ27,: ತಾಲೂಕಿನ ಸಂಶಿ ಗ್ರಾಮದಿಂದ ಚಾಕಲಬ್ಬಿ ಗ್ರಾಮಕ್ಕೆ ಹೋಗುವ 4.25 ಕೀ,ಮೀ ರಸ್ತೆಯ ಡಾಂಬರೀಕರರಣ ಹಾಗೂ ಗ್ರಾಮದ ಸುತ್ತಲಿನ 4.50 ಮೀ. ರಸ್ತೆಯ ಒಟ್ಟು 3.50 ಲಕ್ಷ ರೂ. ರಸ್ತೆ ಕಾಮಗಾರಿಗೆ ಶಾಸಕ ಸಿ.ಎಸ್.ಶಿವಳ್ಳಿ ಸೋಮವಾರ ಭೂಮಿ ಪೂಜೆ ನೆರವೇರಿಸಿದರು.
ಸಂಶಿಯಿಂದ ನಲವಡಿ ಮಾರ್ಗದ ಚಾಕಲಬ್ಬಿ ಮಾರ್ಗದ ಒಟ್ಟು 8 ಕೀಮೀ. ರಸ್ತೆಯಲ್ಲಿ 0.3 ಕೀ.ಮೀ ನಿಂದ ಗ್ರಾಮದವರೆಗಿನ ಒಟ್ಟು 4.25 ಕೀ.ಮೀ ರ್ಸತೆಯ ಡಾಂಬರೀಕರಣ ಹಾಗೂ ಗ್ರಾಮದ ಸುತ್ತಲಿನ 4.50 ಮೀಟರ್ ಪ್ರತ್ಯೇಕ ಕಾಂಕ್ರೀಟ್ ರಸ್ತೆಗೆ ಬಸ್ ನಿಲ್ದಾಣದ ಬಳಿ ಚಾಲನೆ ನೀಡಿ ಮಾತನಾಡಿದ ಅವರು, ತಾಲೂಕ ಕೆಂಧ್ರದಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆ ಕಾಮಗಾರಿಯು ಅಪ್ಪೆಂಡೆಕ್ಷ್-ಇ, ಅನುದಾನದ ಒಟ್ಟು 3ಕೋಟಿ 50 ಲಕ್ಷ ರೂ.ಅನುದಾನದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಆದಷ್ಟು ಶೀಘ್ರವೇ ರಸ್ತೆ ನಿರ್ಮಾಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಿದರು.
ಕಾಂಗ್ರೆಸ್ ಮುಖಂಡರಾದ ಎನ್.ಎಪ್.ನದಾಪ್,ಲೋಕೋಪಯೋಗಿ ಇಲಾಖೆಯ ಅಭಿಯಂತರ ಚಿದಂಬರ ಜೋಶಿ, ಮಾಲತೇಶ ಕಲ್ಲಮ್ಮನವರ, ಗುತ್ತಿಗೆದಾರ ಚಿನ್ನಪ್ಪ ಮೊರಬದ, ಗ್ರಾಮಸ್ಥರಾದ ಚನ್ನವೀರಪ್ಪ ಅಂಗಡಿ, ಬಸವರಡ್ಡಿ ಇಟಗಿ, ಶೇಖಪ್ಪ ಪೂಜಾರ, ನಿಂಗಪ್ಪ ಪೂಜಾರ ವಿರುಪಾಕ್ಷ ಮಸಾಲಿ, ಈರಪ್ಪ ಮಾವಿನಕಾಯಿ, ಮಂಜುನಾಥ ಕಟಗಿ ಮತ್ತಿತರರು ಈ ಸಂದಬ್ದಲ್ಲಿ ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here