ಸಂಸತ್ ಭವನದ ಒಳಗೆ ಮತ್ತು ಸುತ್ತಮುತ್ತ ಭದ್ರತೆ ಹೆಚ್ಚಳ

0
2

ನವದೆಹಲಿ- ಲೋಕಸಭೆಯಲ್ಲಿ ಮಂಗಳವಾರ ಪೌರತ್ವ ತಿದ್ದುಪಡಿ ಮಸೂದೆಯ ಅಂಗೀಕಾರಕ್ಕೂ ಮುನ್ನ ಭಾರಿ ಚರ್ಚೆ ನಡೆಯುತ್ತಿದ್ದ ವೇಳೆ, ವ್ಯಕ್ತಿಯೊಬ್ಬ ಸಂಸದನೆಂದು ಹೇಳಿಕೊಂಡು ಸಂಸತ್ ಭವನ ಕಟ್ಟಡ ಪ್ರವೇಶಿಸಿದ ಹಿನ್ನಲೆಯಲ್ಲಿ ಸಂಸತ್ ಭವನದ ಒಳಗೆ ಮತ್ತು ಸುತ್ತಮುತ್ತ ಭದ್ರತೆಯನ್ನು ಹೆಚ್ಚಿಸಲಾಗಿದೆ.
ವರುಣ್ ಮಾಥುರ್ ಎಂಬ ವ್ಯಕ್ತಿ ಸಂಸತ್ ಭವನದ ಕೇಂದ್ರ ಗ್ರಂಥಾಲಯಕ್ಕೆ ಪ್ರವೇಶಿಸಲು ಯತ್ನಿಸಿದಾಗ ಸ್ವಾಗತಕಾರರ ವಿಭಾಗದಲ್ಲಿ ತಡೆಯಲಾಗಿದೆ.
ಭದ್ರತೆ ಸಿಬ್ಬಂದಿ ವ್ಯಕ್ತಿಯನ್ನು ಶೋಧಿಸಿ, ವಿಚಾರಿಸಿದಾಗ ಆತ ಅನುಮಾನಾಸ್ಪದ ಹೇಳಿಕೆ ನೀಡಿದ್ದಾನೆ. ತಕ್ಷಣವೇ ಎಚ್ಚರಿಕೆ ಸಂದೇಶ ನೀಡಲಾಗಿದೆ.
ಸದನದಲ್ಲಿ ನಿನ್ನೆ ಮಧ್ಯರಾತ್ರಿ ಬಿಸಿ ಚರ್ಚೆಯ ಮಧ್ಯೆ ಲೋಕಸಭೆ ಪೌರತ್ವ ತಿದ್ದುಪಡಿ ಮಸೂದೆಯನ್ನು ಲೋಕಸಭೆ ಅಂಗೀಕರಿಸಿತ್ತು.

loading...