ಸಂಸ್ಕೃತಿ ಉತ್ಸವ ರಥಕ್ಕೆ ಶ್ರಿÃಗಳಿಂದ ಚಾಲನೆ

0
3

ಗುಳೇದಗುಡ್ಡ: ವಿಜಯಪುರದ ಸಮೀಪದ ಕಗ್ಗೊÃಡು ಗ್ರಾಮದಲ್ಲಿ ಡಿ.೨೪ ರಿಂದ ೩೧ರವರೆಗೆ ಅದ್ಧೂರಿಯಿಂದ ನಡೆಯಲಿರುವ ಭಾರತ ವಿಕಾಸ ಸಂಗಮದ ಭಾರತೀಯ ಸಂಸ್ಕೃತಿ ಉತ್ಸವದ ರಥ ಗುರುವಾರ ನಗರಕ್ಕೆ ಆಗಮಿಸಿದಾಗ ಸ್ಥಳೀಯ ಶ್ರಿÃ ಜಗದ್ಗುರು ಗುರುಸಿದ್ದೆÃಶ್ವರ ಬೃಹನ್ಮಠದ ಶ್ರಿÃ.ಜ. ಬಸವರಾಜ ಪಟ್ಟದಾರ್ಯ ಮಹಾಸ್ವಾಮಿಗಳು ರಥಕ್ಕೆ ಚಾಲನೆ ನೀಡಿದರು.
ಭಾರತ ವಿಕಾಸ ಸಂಗಮದ ಭಾರತೀಯ ಸಂಸ್ಕೃತಿ ಉತ್ಸವದ ಗುಳೇದಗುಡ್ಡ ತಾಲೂಕು ಸಂಚಾಲಕ ರಂಗಪ್ಪ ಶೇಬಿನಕಟ್ಟಿ, ಅಶೋಕ ಹೆಗಡೆ, ಕಮಲಕಿಶೋರ ಮಾಲಪಾಣಿ, ಮಧಸೂದನ ರಾಂದಡ, ಮಹಾದೇವ ಜಗತಾಪ, ಸಿದ್ದು ಅರಕಾಲಚಿಟ್ಟಿ, ದೀಪಕ ನೇಮದಿ, ಪುರುಷೋತ್ತಮ ಪಸಾರಿ, ಮಹಾಲಿಂಗ ನಾಡಗೌಡ, ರಮೇಶ ಮತ್ತಿತರರು ಇದ್ದರು. ಸಂಚಾರ: ಪಟ್ಟಣದ ಪ್ರಮುಖ ಬೀದಿಗಳಲ್ಲಿ ಈ ರಥ ಸಂಚರಿಸಿ ಬಳಿಕ ಮುರುಡಿ, ಹಾನಾಪೂರ, ಖಾನಾಪೂರ, ಪರ್ವತಿ, ಪಾದನಕಟ್ಟಿ, ಅಲ್ಲೂರ, ಹಳದೂರ ಮಾರ್ಗವಾಗಿ ಇಂಜಿನವಾರಿ, ಕಮತಗಿ ಮೂಲಕ ಹುನಗುಂದ ತಾಲೂಕು ಕೇಂದ್ರಕ್ಕೆ ಈ ರಥ ಸಂಚರಿಸಿತು.

loading...