ಸಚಿನ್ ಪೈಲಟ್ ನಿರ್ಗಮನ ಬೇಸರ: ಶಶಿ ತರೂರ್

0
18

ನವದೆಹಲಿ:- ರಾಜಸ್ಥಾನದ ರಾಜಕೀಯ ಬಿಕ್ಕಟ್ಟಿನಿಂದಾಗಿ ಸಚಿನ್ ಪೈಲಟ್ ಅವರಂತಹ ಯುವ, ಪ್ರಭಾವಿ ನಾಯಕ ಕಾಂಗ್ರೆಸ್ ಪಕ್ಷದಿಂದ ಹೊರಹೋದದ್ದು ಬೇಸರದ ಸಂಗತಿ ಎಂದು ಸಂಸದ ಶಶಿ ತರೂರ್ ಟ್ವೀಟ್ ಮೂಲಕ ನೋವು ತೋಡಿಕೊಂಡಿದ್ದಾರೆ .

ಪೈಲಟ್ ಉತ್ತಮ , ಕುಶಾಗ್ರಮತಿಯಾಗಿದ್ದಾರೆ ಎಂದು ಶಶಿ ತರೂರ್ ಟ್ವೀಟ್ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಾಜಸ್ಥಾನ್ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ನಡುವಿನ ರಾಜಕೀಯ ಜಿದ್ದಾಜಿದ್ದಿ ತಾರಕಕ್ಕೇರಿದ್ದ ಹಿನ್ನೆಲೆಯಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿತ್ತು. ಈ ನಡುವೆ ಶಾಸಕಾಂಗ ಸಭೆಗೆ ಗೈರು ಹಾಜರಿ ಎಂಬ ಕಾರಣಕ್ಕೆ ಅವರನ್ನು ಉಪಮುಖ್ಯಮಂತ್ರಿ ಹಾಗೂ ಪಿಸಿಸಿ ಹುದ್ದೆಯಿಂದ ಹೈಕಮಾಂಡ್ ವಜಾಗೊಳಿಸಿತ್ತು.

ಪೈಲಟ್ ಕುರಿತು ಟ್ವೀಟ್ ಮಾಡಿರುವ ತರೂರ್ ‘ಪೈಲಟ್ ಕಾಂಗ್ರೆಸ್ ನಿಂದ ಹೊರಹೋಗಿರುವುದು ಬೇಸರದ ಸಂಗತಿ. ಅವರು ಈ ಪಕ್ಷವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಕಟ್ಟಲು ನಮ್ಮೊಂದಿಗೆ ನಿಲ್ಲಬೇಕಿತ್ತು ಎಂದೂ ಹೇಳಿಕೊಂಡಿದ್ದಾರೆ.

loading...