ಸಚಿವ ರೇವಣ್ಣ ರಾಜೀನಾಮೆ ನೀಡುವ ಸರದಿ: ಅನೀಲ

0
1

ಗದಗ: ೨೦೧೯ ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ದೇಶದ ಪ್ರದಾನಿಯಾದರೇ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸವಾಲು ಹಾಕಿದ್ದರು, ಆ ಹಿನ್ನಲೆಯಲ್ಲಿ ಮೊದಲು ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಜನರಿಗೆ ಕೊಟ್ಟ ಮಾತು ಉಳಿಸಿಕೊಳ್ಳಲಿ ಎಂದು ಬಿಜೆಪಿ ಯುವ ನಾಯಕ ಅನೀಲ ಮೆಣಸಿನಕಾಯಿ ಹೇಳಿದ್ದಾರೆ.
ಪತ್ರಿಕೆಗೆ ಹೇಳಿಕೆ ನೀಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಬಾರಿ ನೀಡಿದ ಜನಪರ ಆಡಳಿತದ ಹಿನ್ನಲೆಯಲ್ಲಿ ಬಿಜೆಪಿ ೩೦೦ ಕ್ಕೂ ಹೆಚ್ಚು ಸ್ಥಾನ ಪಡೆದಿದೆ. ಎನ್.ಡಿ.ಎ ೩೫೪ ಸ್ಥಾನ, ರಾಜ್ಯದಲ್ಲಿ ೨೪ ಸ್ಥಾನಗಳನ್ನು ಗೆಲ್ಲಲು ಅನುಕೂಲವಾಯಿತು. ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮಸ್ಥೆöÊರ್ಯ ಮೆಚ್ಚಿಲೇಬೇಕು.

ಚುನಾವಣೆ ಮುನ್ನವೇ ಅವರು ನಾನೇ ಪ್ರಧಾನಿ ಆಗುತ್ತೆÃನೆ ಎಂಬ ವಿಶ್ವಾಸದಲ್ಲಿ ೧೦೦ ದಿನಗಳಲ್ಲಿ ೧೦೦ ಕಾರ್ಯಸೂಚಿಗಳ ಯೋಜನೆಯನ್ನು ಮೊದಲೇ ರೂಪಿಸಿದ್ದನ್ನು ಸ್ಮರಿಸಬಹುದು. ಹಾವೇರಿ ಕ್ಷೆÃತ್ರದ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಅವರ ಐತಿಹಾಸಿಕ ಹ್ಯಾಟ್ರಿಕ್ ಗೆಲುವಿನ ಪರಿಣಾಮದಿಂದಾಗಿ ನರೇಂದ್ರ ಮೋದಿ ನೇತ್ರತ್ವದ ಕೇಂದ್ರ ಸರಕಾರದಲ್ಲಿ ಉನ್ನತ ಸ್ಥಾನಮಾನ ಪಡೆಯುವ ನಿರೀಕ್ಷೆಯಿದೆ.
ಚಿಂಚೊಳ್ಳಿ ವಿಧಾನಸಭಾ ಉಪ ಚುನಾವಣೆಯಲ್ಲಿ ಜನ ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಲೋಕಸಭಾ ಮತ್ತು ಉಪಚುನಾವಣೆ ಹಿನ್ನಲೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆಯಾಗುವ ಸಾದ್ಯತೆಯಿದೆ. ಬಿಜೆಪಿ ರಾಜ್ಯಾದ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಬಿಜೆಪಿ ಯುವನಾಯಕ ಅನೀಲ ಮೆಣಸಿನಕಾಯಿ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

loading...