ಸಚಿವ ಶೆಟ್ಟರ್ ಗೆ ಸವಾಲ್ ಹಾಕಿದ ಎಂಬಿಪಿ

0
34

 

ಬೆಳಗಾವಿ

ಕಾಂಗ್ರೆಸ್ ಚಿಲ್ಲರೆ ರಾಜಕಾರಣ ಮಾಡುತ್ತಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಜಗದೀಶ್ ‌ಶೆಟ್ಟರ್ ಹೇಳಿಕೆಗೆ‌ ತಿರುಗೇಟು‌ ನೀಡಿದ ಮಾಜಿ‌ ಸಚಿವ ಎಂ.ಬಿ.ಪಾಟೀಲ ಶೆಟ್ಟರ್ ಗೆ ತಾಕತ್ತಿದ್ದರೆ ಅವರು ಸಿಎಂಗೆ ಹೇಳಿ ವಿಧಾನಸಭೆ ವಿಸರ್ಜನೆ ಮಾಡಲು ಹೇಳಲಿ ಎಂದು ಸವಾಲ್ ಹಾಕಿದರು.

ಸೋಮವಾರ ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಬೆಲೆ‌ ಏರಿಕೆ ಬಗ್ಗೆ ಮಾತನಾಡುವುದಿಲ್ಲ. ಅವರು ಮೊದಲು ಇಂಥ ರಾಜಕಾರಣ ಮಾಡುವುದನ್ನು ಬಿಡಬೇಕು ಎಂದು ಹರಿಹಾಯ್ದರು.
ಗೋಕಾಕ ವಿಚಾರದಲ್ಲಿ ಸತೀಶ ಜಾರಕಿಹೊಳಿ ಸಮರ್ಥರಿದ್ದಾರೆ. ಲಖನ್ ಗಿಂತ ಸತೀಶ ಪ್ರಭಾವಿ ಇದ್ದಾರೆ. ಚುನಾವಣೆ ಎದುರಿಸಲು ಕಾಂಗ್ರೆಸ್ ಸನ್ನದ್ದವಾಗಿದೆ ಎಂದರು.

ಮಾಜಿ ಸಚಿವ ಆರ್.ವಿ.ದೇಶಪಾಂಡೆ ಮಾತನಾಡಿ, ಬಿಜೆಪಿ ಸರಕಾರದಲ್ಲಿ ಕೇವಲ ಘೋಷಣೆ ಮಾಡುವುದಾಯಿತು. ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಸಾಕಷ್ಟು ಕೆಲಸಗಳು ಬೆಳಗಾವಿ,‌ ಹುಬ್ಬಳ್ಳಿಯಲ್ಲಿ ಆಗಿವೆ ಇದನ್ನು‌ ಶೆಟ್ಟರ್ ತಿಳಿದುಕೊಳ್ಳಲಿ ಎಂದು ಹರಿಹಾಯ್ದರು.

loading...