ಸಚಿವ ಸ್ಥಾನ ಕೈ ತಪ್ಪುವ ಭೀತಿಯಲ್ಲಿ ಶ್ರೀಮಂತ ಪಾಟೀಲ ?

0
47

ಬೆಳಗಾವಿ
ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಹಿನ್ನಲೆಯಲ್ಲಿ ಸಚಿವ ಸ್ಥಾನ ಕೈ ತಪ್ಪುವ ಭೀತಿಯಲ್ಲಿ ಸಚಿವ ಶ್ರೀಮಂತ ಪಾಟೀಲ ಪ್ರವಾಸವನ್ನು ರದ್ದು ಮಾಡಿ ಬೆಂಗಳೂರಿಗೆ ತೆರಳಿದರು.
ಸಮ್ಮಿಶ್ರ ಸರಕಾರ ಪತನಗೊಳಿಸಿ ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆಯಾಗಲು ಶ್ರೀಮಂತ ಪಾಟೀಲ ಶ್ರಮಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಸರಕಾರದಲ್ಲಿ ಶ್ರೀಮಂತ ಪಾಟೀಲರಿಗೆ ಜವಳಿ ಖಾತೆ ಸಚಿವರಾಗಿದ್ದರು. ಆದರೆ ಇಂದು ಸಚಿವ ಸಂಪುಟ ವಿಸ್ತರಣೆಯ ಕಾರಣ ಕೆಲ ಹಾಲಿ ಸಚಿವರನ್ನು ಕೈ ಬಿಟ್ಟು ಹೊಸ ಶಾಸಕರಿಗೆ ಸಚಿವ ಸ್ಥಾನ ಕಲ್ಪಿಸುವ ನಿಟ್ಟಿನಲ್ಲಿ ಸಚಿವ ಶ್ರೀಮಂತ ಪಾಟೀಲರನ್ನು ಕೈ ಬಿಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದ್ದರಿಂದ ತಮ್ಮ ಪ್ರವಾಸವನ್ನು ಅರ್ಥಕ್ಕೆ ಮೊಕಟುಗೊಳಿಸಿ ಸಿಎಂ ಭೇಟಿಯಾಗಿ ಬೆಂಗಳೂರಿಗೆ ತೆರಳಿದ್ದಾರೆ ಎನ್ನಲಾಗಿದೆ.
ಬೆಂಗಳೂರು ಹಾಗೂ ಬೆಳಗಾವಿಗೆ ಮಾತ್ರ ಅತೀ ಹೆಚ್ಚು ಸಚಿವ ಸ್ಥಾನ ಸಿಕ್ಕಿದೆ. ಆದ್ದರಿಂದ ದಕ್ಷಿಣ ಕನ್ನಡ, ಹೈದ್ರಾಬಾದ್ ಕರ್ನಾಟಕದಲ್ಲಿ ಸಚಿವ ಸ್ಥಾನ ನೀಡದೆ ಇರುವುದರಿಂದ ಸಚಿವಾಕಾಂಕ್ಷಿಗಳು ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ಬೆಳಗಾವಿ ಜಿಲ್ಲೆಯಲ್ಲಿ ಡಿಸಿಎಂ ಲಕ್ಷö್ಮಣ ಸವದಿ, ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ, ಜವಳಿ ಖಾತೆ ಸಚಿವ ಶ್ರೀಮಂತ ಪಾಟೀಲ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆಗೆ ಸಚಿವ ಸ್ಥಾನ ನೀಡಲಾಗಿದೆ. ಅಲ್ಲದೆ ಬುಧವಾರ ವಿಸ್ತರಣೆಯಾಗಲಿರುವ ಸಚಿವ ಸಂಪುಟದಲ್ಲಿ ಹುಕ್ಕೇರಿ ಶಾಸಕ ಉಮೇಶ ಕತ್ತಿಗೂ ಸಚಿವ ಸ್ಥಾನ ಪಕ್ಕಾ ಎಂದು ಹೇಳಲಾಗುತ್ತಿದೆ. ಆದ್ದರಿಂದ ಸಚಿವ ಶ್ರೀಮಂತ ಪಾಟೀಲರನ್ನು ಕೈ ಬಿಡುವ ಆತಂಕದಲ್ಲಿದ್ದು, ತಮ್ಮ ಪ್ರವಾಸ ಮೊಕಟುಗೊಳಿಸಿ ಸಿಎಂ ಭೇಟಿಗೆ ಬೆಂಗಳೂರಿಗೆ ತೆರಳದಿದ್ದಾರೆ ಎನ್ನಲಾಗುತ್ತಿದೆ.

loading...