ಸಚಿವ ಸ್ಥಾನ ನೀಡದಿದ್ದಕ್ಕೆ ಯಾವುದೇ ಮುನಿಸಿಲ್ಲ – ಹುಕ್ಕೇರಿ ಬಿಜೆಪಿ ಶಾಸಕ ಉಮೇಶ ಕತ್ತಿ ಸ್ಪಷ್ಟನೆ

0
85

ಸಚಿವ ಸ್ಥಾನ ನೀಡದಿದ್ದಕ್ಕೆ ಯಾವುದೇ ಮುನಿಸಿಲ್ಲ – ಹುಕ್ಕೇರಿ ಬಿಜೆಪಿ ಶಾಸಕ ಉಮೇಶ ಕತ್ತಿ ಸ್ಪಷ್ಟನೆ

ಕನ್ನಡಮ್ಮ ಸುದ್ದಿ -ಹುಕ್ಕೇರಿ : ರಾಜ್ಯದಲ್ಲಿ ಬಿಜೆಪಿ ಸರಕಾರ ಇದೆ ಯಡಿಯೂರಪ್ಪ ಒಳ್ಳೆಯ ಸರಕಾರ ಕೊಡುತ್ತಿದ್ದಾರೆ ,
ಈಗಾಗಲೇ 13 ವರ್ಷ ಮಂತ್ರಿಯಾಗಿದ್ದೇನೆ ಹೀಗಾಗಿ ಹೊಸಬರಿಗೆ ಸಚಿವ ಕೊಟ್ಟಿದ್ದಾರೆ ತಪ್ಪೇನಿದೆ ,
ಖಾತೆ ಕೊಡದೆ ಇದ್ದುದ್ದಕ್ಕೆ ಮುನಿಸಿಲ್ಲ ಎಂದು ಸಚಿವ ಸ್ಥಾನ ವಂಚಿತ ಹುಕ್ಕೇರಿ ಬಿಜೆಪಿ ಶಾಸಕ ಉಮೇಶ ಕತ್ತಿ ಹೇಳಿದ್ದಾರೆ .
ಇಂದು  ಹುಕ್ಕೇರಿ ಪಟ್ಟಣದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು .
ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆ ,ನನ್ನ ಹೆಂಡತಿ ಜೊತೆಗೆ ನಾನು ಮುನಿಸ್ಕೊಳ್ಳುವದಿಲ್ಲ ಹೀಗಾಗಿ ಯಡಿಯೂರಪ್ಪ ಜೊತೆ ಮುನಿಸಿಕೊಳ್ಳುವ ಪ್ರಶ್ನೆ ಇಲ್ಲ
ನನ್ನ ನಸೀಬಿನಲ್ಲಿಲ್ಲ ಹೀಗಾಗಿ ಸಚಿವ ಸ್ಥಾನ ಸಿಕ್ಕಿಲ್ಲ ,
ನನ್ನ ಯೋಗ್ಯತೆಗೆ ಸಿಎಂ ಸ್ಥಾನ ಸಿಗಲೇ ಬೇಕು ,
ಆ ದಿಸೆಯಲ್ಲಿ ನನ್ನ ಪ್ರಯತ್ನ ಇದೆ ,
ದೇವರು ಆಶೀರ್ವಾದ ಮಾಡಿದರೆ ಸಿಎಂ ಆಗುತ್ತೇನೆ,ಸವದಿ ಹಾಗು ಶ್ರೀಮಂತ ಪಾಟೀಲರಿಗೆ ಸಚಿವ ಸ್ಥಾನ ನೀಡಿದರ ಬಗ್ಗೆ ಮಾತನಾಡಿದ ಅವರು
ಅವರಿಗೆ ಅನುಭವ ಹೆಚ್ಚಿದೆ ನನಗೆ ಅನುಭವ ಕಡಿಮೆಯಿದೆ , ಮುಂದೆ ಮಂತ್ರಿ ಸ್ಥಾನ ಸಿಕ್ಕರೆ ನೋಡೋಣ ಜಿಲ್ಲಾ ಮಂತ್ರಿ ಯಾರೇ ಬಂದರೂ ಸ್ವಾಗತಿಸೋಣ ಎಂದು ಹುಕ್ಕೇರಿ ಶಾಸಕ ಕತ್ತಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

loading...