ಸಜ್ಜನರ ಸಂಗ, ದಾನ ಧರ್ಮ, ಪರೋಪಕಾರ ಮಾಡಿದರೆ ಜನ್ಮ ಸಾರ್ಥಕ: ಶಾಸಕ ಡಿ.ಎಂ.ಐಹೊಳೆ

0
86

ಪಾಲಬಾವಿ: ಮಾನವ ಜನ್ಮ ಶ್ರೆÃಷ್ಠವಾದ್ದು ಎಲ್ಲರು ಸುಖ-ಸಂತೋಷದಿಂದ ಇರಬೇಕಾದರೆ ನಿತ್ಯ ದೇವರ ನಾಮಸ್ಮರಣೆ, ಸಜ್ಜನರ ಸಂಗ, ದಾನ-ಧರ್ಮ, ಪರೋಪಕಾರ ಮಾಡಿದರೇ ಜನ್ಮ ಸಾರ್ಥಕವಾಗುವದು ಎಂದು ರಾಯಬಾಗ ಶಾಸಕ ಡಿ.ಎಂ.ಐಹೊಳೆ ಹೇಳಿದರು. ಅವರು ಗ್ರಾಮದಲ್ಲಿ ಶುಕ್ರವಾರ ದಿ.೨೬ರಂದು ಮುಂಜಾನೆ ೧೨ಗಂಟೆಗೆ ಮಾದಾರ ಚನ್ನಯ್ಯ ನಗರದಲ್ಲಿರುವ ಮಡ್ಡಿ ಶ್ರಿÃ ದುರ್ಗಾದೇವಿ ಜಾತ್ರಾ ಮಹೋತ್ಸವದ ಮಂಗಲೋತ್ಸವದಲ್ಲಿ ಮಾತನಾಡಿದರು. ದೇವಋಷಿ ಶ್ರಿÃ ಮುರುಗೆಪ್ಪ ಪೂಜೇರಿ ದಿವ್ಯ ಸನ್ನಿದಾನವಹಿಸಿ ಭಕ್ತರುನ್ನದ್ದೆÃಶಿಸಿ ಆಶೀರ್ವಚನ ನೀಡಿದರು.
ಮುಂಜಾನೆ ೬ಗಂಟೆಗೆ ದೇವಿಯ ಕರ್ತುಗದ್ದುಗೆಗೆ ಅಭಿಷೇಕ, ವಿಶೇಷ ಪೂಜೆ, ಕುಂಕುಮ, ಅರಿಶಿಣ, ಚಂಧನ, ಬಂಢಾರ ಸಮರ್ಪಣೆ, ಬಗೆಬಗೆಯ ಹೂಗಳಿಂದ ದೇವಿ ಮೂರ್ತಿ ಅಲಂಕೃತಗೊಂಡಿತು. ಮಹಾಲಿಂಗಪೂರ ಶ್ರಿÃಶೈಲಯ್ಯ ವಿರಕ್ತಮಠ ಹಾಗೂ ಬೆಳಗಲಿಯ ರಮೇಶ ರಾವಳ ಶರಣ ಅವರು ಹೊಮ ಶಾಸತ್ರೊತ್ವವಾಗಿ ಮಂತ್ರ ಪಠಿಸಿ ಪೂಜೆಯನ್ನು ಸಲ್ಲಿಸಿದರು

ಜಿ.ಪಂ.ಮಾಜಿ ಸದಸ್ಯೆ ಸುಶೀಲಾ ಐಹೊಳೆ, ಮಾತೋಶ್ರಿÃ ಮಾಯವ್ವ ಐಹೊಳೆ, ಗ್ರಾ.ಪಂ.ಸದಸ್ಯೆ ಮಹಾದೇವಿ ಮಾನಶೆಟ್ಟಿ, ನಾಗಪ್ಪ ಮೆಕ್ಕಳಕಿ, ಸದಾಶಿವ ಸತ್ತಿ, ಅಡಿವೆಪ್ಪ ದೊಡವಾಡ, ಕಲ್ಲಪ್ಪ ಮರಡಿ, ಲಕ್ಷö್ಮಣ ಕರೋಶಿ, ಯಲ್ಲಪ್ಪ ಬಬಲಿ, ಯಮನಪ್ಪ ಮಲ್ಲಣ್ಣವರ, ಶಿವಪ್ಪ ಶೆಗುಣಶಿ, ಶಿವಪ್ಪ ಮಾದರ, ಮುತ್ತಪ್ಪ ಮಾದರ, ಚನ್ನಪ್ಪ ಬಳಗಾರ, ಶ್ರಿÃಶೈಲ ನಿಂಗನುರ, ರಾಮಪ್ಪ ಹೆಗಡೆ, ಮಹೇಶ ಕುರಬೆಟ್ಟ ಮತ್ತಿತರರು ಇದ್ದರು.

loading...