ಸಣಪಾಗೆ ಯುವ ಕಲಾರತ್ನ ಪ್ರಶಸ್ತಿ

0
4

ಗುಳೇದಗುಡ್ಡ : ಬೆಂಗಳೂರಿನ ಕಲಾವಿದರ ರಕ್ಷಣಾ ವೇದಿಕೆ ವತಿಯಿಂದ ನಗರದ ಸಂಗೀತ ಕಲಾವಿದ ಶಂಕರ ಸಣಪಾ ಅವರಿಗೆ ಕರ್ನಾಟಕ ಯುವ ಕಲಾರತ್ನ ರಾಜ್ಯಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕಲಾವಿದ ಶಂಕರ ಅವರು ನಗರದ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು, ಜನಪದ ಸಂಗೀತ, ವಚನಗಾಯನ, ರಂಗಗೀತೆಗಳನ್ನು ಹಾಡುಗಳನ್ನು ಚಾಲುಕ್ಯ ಉತ್ಸವ, ರನ್ನ ಉತ್ಸವ ಸೇರಿದಂತೆ ಹಲವಾರು ಕಾರ್ಯಕ್ರಮಗಳಲ್ಲಿ ಹಾಡಿದ್ದಾರೆ. ಜೂ.೩೦ ರಂದು ವಿಜಯಪುರದ ಶ್ರಿÃ ಕಂದಗಲ್ಲ ಹನಮಂತರಾಯರ ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗುವ ಕಾರ್ಯಕ್ರಮದಲ್ಲಿ ಶಂಕರ ಸಣಪಾ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.

loading...