ಸತೀಶ ನನ್ನ ಗುರುಗಳು:ಸತೀಶಗೆ ಟಾಂಗ್ ಕೊಟ್ಟ ಹೆಬ್ಬಾಳಕರ್

0
63

ಸತೀಶ ನನ್ನ ಗುರುಗಳು:ಸತೀಶಗೆ ಟಾಂಗ್ ಕೊಟ್ಟ ಹೆಬ್ಬಾಳಕರ್

ಕನ್ನಡಮ್ಮ ಸುದ್ದಿ-ಬೆಳಗಾವಿ:ವಿಧಾನ ಸಬೆ ಚುನಾವಣೆಯಲ್ಲಿ ಕಷ್ಟ ನೀಡಿದ್ದಾರೆ .ನಾನು ಬಹಳ ಚಿಕ್ಕವಳು ,ಸತೀಶ ಜಾರಕಿಹೊಳಿಗೆ ಅವರ ನನ್ನ ಗುರುಗಳು ,ಸತೀಶ ಜಾರಕಿಹೋಳಿವರಿಂದ ಬಹಳ ಕಲಿಯುತ್ತಿದ್ದೆನೆ ಎಂದು ಶಾಸಕಿ ಹೆಬ್ಬಾಳಕರ್ ಹೇಳಿದರು .

ಮಂಗಳವಾರ ನಗರದಲ್ಲಿ ಸುದ್ದಿ ಗೊಷ್ಠಿ ನಡೆಸಿ ಮಾತನಾಡಿದ ಅವರು ನನ್ನ ಬೆಳಸಿದವರೆ ಯಾಕೆ ಈ ರೀತಿ ಮಾಡುತ್ತದ್ದಾರೆ ಗೊತ್ತಲ್ಲ.ತಹಶಿಲ್ದಾರರ ತಪ್ಪು ಮಾಡಿದ್ದರೆ ಅವರನ್ನು ಅಮಾನತ್ತು ಮಾಡಬೇಕು ಎಂದರು .

ಜಿಲ್ಲೆಯಲ್ಲಿ ಯಾರ ಯಾರು ಎಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಗೊತ್ತು .
ಜಯ ಸಿಗುವವರೆಗೂ ನಾನು ಸುಮ್ಮನಿರಲ್ಲ .

ನ್ಯಾಯ ಸಿಗದಿದ್ದರೆ ಪ್ರತಿಭಟನೆ ಅನಿವಾರ್ಯ,ಯಾರನ್ನು ಒತ್ತಾಯ ಪೂರ್ವಕವಾಗಿ ಯಾರನ್ನು ಅಪಹರಣ ಮಾಡಿಲ್ಲ ಇದು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಕಳೆದ ಬೆಳಗಾವಿ ಎಪಿಎಂಸಿ ಚುನಾವಣೆಯಲ್ಲಿ ಸ್ವತ ಸತೀಶ ಜಾರಕಿಹೋಳಿ ಅವರೆ ನಿರ್ದೇಶಕರನ್ನು ಅಪಹರಣ ಮಾಡಿದ್ದು ಮರೆತ್ತಿದ್ದಾರೆ ಎಂದು ಸತೀಶ ವಿರುದ್ದ ಸಮಾಧಾನ ಹೊರಹಾಕಿದಳು.

ನಾನು ಲಿಂಗಾಯತ ಸಮುದಾಯದಿಂದ ಬಂದಿರ ಬಹುದು ಆದರೆ ನಾನು ಎಂದು ಜಾತಿ ರಾಜಕಾರಣ ಮಾಡಿಲ್ಲ .ಜಾರಕಿಹೋಳಿ ಕುಟುಂಬದ ಎಲ್ಲರೂ ಮತ್ತು ಜನರು ನನ್ನನ್ನು ಬೆಳಸಿದ್ದಾರೆ .ನಮ್ಮ ಕಾರ್ಯಕರ್ತರು ಸಲುವಾಗಿ ಇದೊಂದು ಚುನಾವಣೆ ಪ್ರಕ್ರಿಯೆ ಇದೆನು ಹೊಸದಲ್ಲ.
ಸತೀಶ ಜಾರಕಿಹೋಳಿ ಅವರು ನನ್ನು ಬೆಳೆಸುತ್ತಿದ್ದಾರೆ ಅದಕ್ಕೆ ಸ್ವಾಗತವಿದೆ ಎಂದು ಸತೀಶ ಜಾರಕಿಹೋಳಿ ಟಾಂಗ್ ನೀಡಿದರು.

ನನಗೆ ನನ್ನ ಚೌಕಟು ಗೊತ್ತು .ನನ್ನ ತುಳಿಯಲು ಎಷ್ಟು ಪ್ರಯತ್ನ ನಡೆಸಿದರು ನನನ್ನು ಜನರು ಬೆಳೆಸುತ್ತಾರೆ .ನಾನು ಮಹಿಳೆಯನ್ನು ಎಂಬ ಕಾರಣಕ್ಕೆ ನನನ್ನು ಮುಗಿಸುವ ಪ್ರಯತ್ನ ನಡೆಯುತ್ತಿದೆ ಎಂದರು.

loading...