ಸತೀಶ ಲೀಡರ್‌ಶಿಪ್ ಕೊಲ್ಯಾಪ್ಸ್ ಆಗುತ್ತಿದೆ: ಸಚಿವ ಜಾರಕಿಹೊಳಿ

0
50

ಬೆಳಗಾವಿ
ನಮ್ಮ ತಂದೆ ಲಕ್ಷ್ಮಣ್ ಜಾರಕಿಹೊಳಿ ಸಂಘದಲ್ಲಿ ಇದ್ದರೋ ಇಲ್ಲವೋ ಎಂಬುದಕ್ಕೆ ಬೇಕಾದರೆ ಗೋಕಾಕಗೆ ಹೋಗಿ ಸರ್ವೇ ಮಾಡಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿಕೆ ನೀಡಿರುವುದಕ್ಕೆ ನಗು ಬರುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಸಹೋದರ ಸತೀಶಗೆ ಪ್ರತ್ಯುತ್ತರ ನೀಡಿದರು.
ಶುಕ್ರವಾರ ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ತಂದೆ ಲಕ್ಷö್ಮಣ ಜಾರಕಿಹೊಳಿ ಅವರು, ಜಗನ್ನಾಥ್ ಜೋಶಿ ನೇತೃತ್ವದಲ್ಲಿ ಗೋವಾ ವಿಮೋಚನೆ ಚಳವಳಿ ಆರಂಭವಾಗಿತ್ತು. ಅದು ಸಂಘ ಪರಿವಾರ ಹೌದೋ ಅಲ್ವೋ ಎಂದು ಪ್ರಶ್ನಿಸಿದ ಅವರು, ನಾನು ಜನಸಂಘ ಮೂಲದಿಂದ ಬಂದಿದ್ದು ನಿಜ. ಬಳಿಕ ಕಾಂಗ್ರೆಸ್ ಪಕ್ಷಕ್ಕೆ ಹೋಗಿ ಜಾತ್ಯಾತೀತನಾಗಿದ್ದು ನಿಜ. ಅಜ್ಮೇರ್ ದರ್ಗಾಗೆ ಹೋಗಿ ಟೋಪಿ ಹಾಕಿದ್ದು ನಿಜ, ಮುಸ್ಲಿಂ ಕಾರ್ಯಕ್ರಮಕ್ಕೆ ಹೋದರೆ ಟೋಪಿ ಹಾಕಿ ಅತ್ತರ್ ಹಚ್ಚುತ್ತಾರೆ. ಹಿಂದೂ ಕಾರ್ಯಕ್ರಮಕ್ಕೆ ಹೋದರೆ ಪಟಗೆ ಸುತ್ತುತ್ತಾರೆ. ಅದರಲ್ಲಿ ನೀವು ರಾಜಕಾರಣ ಮಾಡಿದರೆ ನಿಮ್ಮಂತ ಮೂರ್ಖರಿಲ್ಲ. ಈಗಲೂ ನಾವು ಮುಸಲ್ಮಾನ, ಎಸ್‌ಸಿ, ಹಿಂದುಳಿದ ಪರವಾಗಿ ಇದ್ದೇವೆ. ಆದರೆ ಪಾಕಿಸ್ತಾನ ಜಿಂದಾಬಾದ್ ಅನ್ನೋ ದೇಶದ್ರೋಹಿ ಪರವಾಗಿಲ್ಲ ನಾನು ಬಿಜೆಪಿ. ಮುಸ್ಲಿಂ ವಿರೋಧಿ ಅಲ್ಲ ಎಂದು ಸತೀಶ ಜಾರಕಿಹೊಳಿಗೆ ಟಾಂಗ್ ನೀಡಿದರು.
ರಮೇಶ್ ಕರಿ ಟೋಪಿ ಹಾಕಿದ್ದು ನೋಡಿಲ್ಲ ಎಂಬ ಸತೀಶ್ ಹೇಳಿಕೆ ವಿಚಾರಕ್ಕೆ ಸಂಬAಧಿಸಿದAತೆ ಮಾತನಾಡಿದ ಅವರು, ಸತೀಶ್ ಜಾರಕಿಹೊಳಿ ಬಾಲ್ಯ ಜೀವನ ನಿಮಗೆ ಗೊತ್ತಿಲ್ಲ. ಕಾಲೇಜು ಚುನಾವಣೆಯ ವೇಳೆ ನಾನು ಬೋರ್ಡ್ ಬರೆಯಲು ಕಲಿಸುತ್ತಿದ್ದೆ. ಅಬ್ದುಲ್ ದೇಸಾಯಿ ಅಂತಾ ಸ್ನೇಹಿತ ಇದ್ದಾನೆ ಅವನನ್ನ ಕೇಳಿ ಎಂದು ಮಾಧ್ಯಮದವರಿಗೆ ಪ್ರಶ್ನಿಸಿದ ಅವರು, ಸತೀಶ್ ಜಾರಕಿಹೊಳಿ ಏನು ದೊಡ್ಡ ಲೀಡರಾ? ಸತೀಶ್ ಜಾರಕಿಹೊಳಿ ಹತಾಶರಾಗಿದ್ದಾರೆ. ಸತೀಶ್ ಜಾರಕಿಹೊಳಿ ಲೀಡರ್‌ಶಿಪ್ ಕೊಲ್ಯಾಪ್ಸ್ ಆಗುತ್ತಿದೆ. ಸತೀಶ್ ಜಾರಕಿಹೊಳಿ ಏಳು ವರ್ಷ ಅರಾಮ ತಗೋದು ಒಳ್ಳೆಯದು. ಈಗ ಎರಡು ವರ್ಷ, ಮುಂದಿನ ಐದು ವರ್ಷ ಕಾಂಗ್ರೆಸ್ ಪಕ್ಷಕ್ಕೆ ಕೆಲಸ ಇಲ್ಲ. ಸಿಎಂ ಅಲ್ಲ ಮಾಜಿ ಆಗುತ್ತಾನೆ. ಯಮಕನಮರಡಿಯಲ್ಲಿ ಎಂಎಲ್‌ಎ ಆಗಿ ಆರಿಸಿ ಬರಲಿ ಮೊದಲು. ಜಾರಕಿಹೊಳಿ ಕುಟುಂಬದಲ್ಲಿ ದೊಡ್ಡವನಾಗಿ ನಾನು ತ್ಯಾಗ ಮಾಡುತ್ತಿದ್ದೇನೆ. ಅವನು ಎಷ್ಟೋ ಹತಾಶರಾಗಿ ಮಾತನಾಡಿದರೂ ಉತ್ತರ ಕೊಟ್ಟಿಲ್ಲ. ನಿಜವಾಗಿಯೂ ಜಾರಕಿಹೊಳಿ ಮನುಷ್ಯ ಆಗಿದ್ದರೆ ವೈಯಕ್ತಿಕವಾಗಿ ಕೇಳಿ ಅನ್ನಬೇಕಿತ್ತು. ಸತೀಶ್ ಜಾರಕಿಹೊಳಿ ಎಲ್ಲಾ ಹಂತದಲ್ಲಿ ಫೇಲ್ ಆಗಿದ್ದಾನೆ. ಅದಕ್ಕೆ ಹತಾಶರಾಗಿ ಮಾತನಾಡುತ್ತಿದ್ದಾನೆ ಎಂದು ಸಿಡಿಮಿಡಿಗೊಂಡರು.

ಸತೀಶ್ ಜಾರಕಿಹೊಳಿ ಆರ್ಟಿಫಿಶಿಯಲ್ ರಾಜಕಾರಣಿ ಅವನು ಮೊದಲ ಬಾರಿ ದೆಹಲಿಗೆ ಶಂಕರಾನAದ ಮನೆಗೆ ಹೋಗಿ ಬಂದು ಗನ್‌ಮ್ಯಾನ್ ಇಟ್ಟುಕೊಂಡ. ಸಾಮಾನ್ಯ ಮನುಷ್ಯ ಇದ್ದಾಗ ಗನ್‌ಮ್ಯಾನ್ ಇಟ್ಟುಕೊಂಡಿದ್ದ. ಅವನು ಆರ್ಟಿಫಿಷಿಯಲ್ ರಾಜಕಾರಣಿ ಅವನ ಬಗ್ಗೆ ಮಾತನಾಡಬೇಡಿ ಎಂದು ಗರಂ ಆದರು.

loading...