ಸದ್ಗುರುಗಳ ಸದುಪದೇಶಕ್ಕಿಂತ ಶ್ರೇಷ್ಠ ಅಮೃತವಿಲ್ಲ- ಸುತಾರ

0
32

ಮಹಾಲಿಂಗಪುರ 18; ಸದ್ಗುರಗಳ ಸದುಪದೇಶಕ್ಕಿಂತ ಶ್ರೇಷ್ಠ

ಅಮೃತವಿಲ್ಲ ಎಂದು ಕನ್ನಡದ ಕಬೀರ ಇಬ್ರಾಹಿಂ ಸುತಾರ ಹೇಳಿದರು.

ಇವರು ಜ.16 ರಂದು ಗುರುವಾರ ಸಂಜೆ ಸ್ಥಳೀಯ

ಬನಶಂಕರಿದೇವಿ ಸಾಂಸ್ಕ್ಕತಿಕ ಭವನದಲ್ಲಿ ಪ್ರಕರಣ ಪ್ರವೀಣ ಶ್ರೀ

ಬಸವಾನಂದ ಸ್ವಾಮಿಗಳ 40 ನೇ ವರ್ಷದ ಪುಣ್ಯಾರಾದನೆಯ

ನಿಮಿತ್ಯ ಹಮ್ಮಿಕೊಳ್ಳಲಾದ ವೇದಾಂತ ಪರಿಷತ್ತ ಕಾರ್ಯಕ್ರಮದ

ಉದ್ಘಾಟನಾ ಸಮರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು

ಶ್ರೀಗುರು ವಚನದಿಂದ ಸುಧೆಯುಂಟೆ ? ಎಂಬ ವಿಷಯದ ಕುರಿತು

ಮಾತನಾಡಿದ ಅವರು ನಿಜಗುಣರ ಕೈವಲ್ಯ ಪದ್ದತಿಯಲ್ಲಿಯ ಒಂದು

ಸಾಲಿನ ಮೇಲೆ ವಿಷಯ ಮಂಡನೆ ಮಾಡಿ ಮಾತನಾಡಿ, ನರ ಜನ್ಮವ

ತೊರೆದ, ಹರ ಜನ್ಮವನ್ನು ಮಾಡುವ ಸಾಮರ್ಥ್ಯ ವಿರುವುದು

ಗುರುವಿನ ವಾಕ್ ಶಕ್ತಿಯಲ್ಲಿ ಮಾತ್ರ ಇದೆ, ಹರ ಮುನಿದರೆ ಗುರು

ಕಾಯುವನು, ಗುರುವಿನ ಉಪದೇಶಾಮೃತದಂತ ಶ್ರೇಷ್ಟವಾದದ್ದು,

ಜಗತ್ತಿನಲ್ಲಿ ಯಾವುದು ಇಲ್ಲ ಎಂದರು.

ಸ್ಥಳೀಯ ಸಿದ್ದಾರೂಢ ಬ್ರಹ್ಮ ವಿದ್ಯಾಶ್ರಮದ ಪೂಜ್ಯ

ಸಹಜಾನಂದ ಸ್ವಾಮಿಗಳು ನೇತ್ರತ್ವ ವಹಿಸಿದರು. ಹಿಪ್ಪರಗಿಯ

ಸಿದ್ದಾರೂಢ ಅಡಿವೆಪ್ಪ ಶಾಸ್ತ್ತ್ರಿಗಳು ಪ್ರವಚಣದಲ್ಲಿ ಭಾಗವಹಿಸಿ

ಗುರುವಿನ ಮಹಿಮೆ, ಮಹತ್ವದ ಕುರಿತು ಪ್ರವಚನ ನೀಡಿದರು.

ಬಸವಕಲ್ಯಾಣದ ಪ್ರಣವಾನಂದ ಸ್ವಾಮೀಜಿಗಳು ವೇದಾಂತ ಪರಿಷತ್ತಿನ

ಅಧ್ಯಕ್ಷತೆ ವಹಿಸಿ ಮಾತನಾಡಿ ಸಾಗರದಲ್ಲಿ, ಚಂದ್ರನಲ್ಲಿ, ಪರವಧುವಿನ

ತುಟಿಗಳಲ್ಲಿ, ನಾಗಲೋಕದಲ್ಲಿ ಅಮೃತವಿದೆ ಎಂದು ಪುರಾಣಕಥೆಗಳಲ್ಲಿ

ಹೇಳಿದ್ದೆಲ್ಲಾ ಸುಳ್ಳು, ಸಾಗರದಲ್ಲಿ ಉಪ್ಪು ಇದೆ, ಚಂದ್ರನಲ್ಲಿ ಕ್ಷಯ್ ಇದೆ

ನಾಗಗಳಲ್ಲಿ ವಿಷ ಇದೆ, ಮಾನಿನಿಯರ ಅದರದಲ್ಲಿ ಎಡ್ಸ ಇದೆ, ಆದರೆ

ಗುರುವಿನ ಜ್ಞಾನಾಮೃತದಿಂದ ಪರತರ, ಮುಕ್ತಿ, ಸಾಧ್ಯ, ಗುರುವಚನವು

ಆಲಿದಾತರಿಗೆ ದೊರಕುವುದು, ನರರಿಗೆ ಮುಕುತಿ ಎಂಬ ನಿಜಗುಣರ

ಸಂದೇಶವನ್ನು ಅರಿತುಕೊಂಡು ಮನುಷ್ಯ ನಡೆಯಬೇಕು ಎಂದು

ಹೇಳಿದರು.

loading...

LEAVE A REPLY

Please enter your comment!
Please enter your name here