ಸದ್ಭಾವಣಾ ಪಾದಯಾತ್ರೆ

0
14

ನರಗುಂದ: ವಿರಕ್ತಮಠದ ಚನ್ನಬಸವ ಮಹಾಶಿವಯೋಗಿಗಳ ೧೫೦ ನೇ ಪುಣಸ್ಮರಣೆ ನಿಮಿತ್ತ ಶುಕ್ರವಾರ ಪಟ್ಟಣದಲ್ಲಿ ಹಮ್ಮಿಕೊಂಡ ೨ ನೇ ದಿನದ ಸದ್ಭಾವಣಾ ಪಾದಯಾತ್ರೆ ವಿರಕ್ತಮಠದ ಶಿವಕುಮಾರ ಸ್ವಾಮಿಗಳ ನೇತೃತ್ವದಲ್ಲಿ ಪಟ್ಟಣದ ಕುಂಬಾರ ಓಣಿ, ಬಸವೇಶ್ವರ ದೇವಸ್ಥಾನ, ಬೀರಲಿಂಗೇಶ್ವರ ದೇವಸ್ಥಾನ, ಶಂಕರಲಿಂಗನ ಓಣಿಯಲ್ಲಿ ಜರುಗಿತು.

ಶಂಕರಲಿಂಗ ದೇವಸ್ಥಾನದಲ್ಲಿ ನಡೆದ ಧರ್ಮ ಜಾಗೃತಿ ಸಭೆಯಲ್ಲಿ ವಿರಕ್ತಮಠದ ಶಿವಕುಮಾರ ಶ್ರಿÃಗಳು ಮಾತನಾಡಿ, ಸಮಾಜದಲ್ಲಿರುವ ಕಲ್ಮಶ ವಾತಾವರಣವನ್ನು ಶುದ್ದಿಕರಣಗೊಳಿಸುವುದೇ ಪಾದಯಾತ್ರೆಯ ಮುಖ್ಯ ಉದ್ದೆÃಶ. ಜನರು ಸ್ವಾರ್ಥದ ಬದುಕಿಗಾಗಿ ಬದುಕುವುದನ್ನು ಬೀಡಬೇಕು. ಯುವಕರು ದುಶ್ಚಟಗಳನ್ನು ತೊಡೆದು ಹಾಕಬೇಕು. ತಂದೆ,ತಾಯಿಗಳನ್ನು ಗೌರವದಿಂದ ಕಾಣುವ ಮೂಲಕ ಸಮಾಜದ ಉತ್ತಮ ಸತ್ಪçಜೆಗಳಾಗಿ ಬದುಕು ಸಾಗಿಸುವಂತಾಗಬೇಕು ಎಂದು ತಿಳಿಸಿದರು.

ಮಡಿವಾಳಯ್ಯ ಶಾಸ್ತಿçಗಳು, ಶಿವಾನಂದ ದೇವರು, ಚನ್ನವೀರ ದೇವರು, ಅನ್ನದಾನಿ ದೇವರು, ಗುರುದೇವ ದೇವರು, ಪ್ರಭುಲಿಂಗ ಸ್ವಾಮಿಗಳು, ಮಲ್ಲೆÃಶಪ್ಪ ಪಿಡ್ನಾಯ್ಕರ್, ಅಶೋಕ ನರಗುಂದ, ಕಿರಣ ಮುಧೋಳೆ, ಶಂಕರ ಕಾಂಬಳೆ, ಸುರೇಶ ಪಟ್ಟೆÃದ, ಭಿಮಪ್ಪ ಮಾನೆ, ಶೈಲಾ ನರಗುಂದ, ನಿರ್ಮಲಾ ಅಪ್ಪೊÃಜಿ, ಈರಮ್ಮ ಸಂಬಳ, ಅಂಬವ್ವ ಮಾನೆ ಅನೇಕ ಭಕ್ತರು ಉಪಸ್ಥಿತರಿದ್ದರು.

loading...