ಸಬ್ನಿಸ್, ಠಾಕೂರ್ ಮೇಲೆ‌ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಒತ್ತಾಯ

0
39


ಬೆಳಗಾವಿ

ಕನ್ನಡ ಹಾಗೂ ಕರ್ನಾಟಕವನ್ನು ನಿಂದಿಸಿದ ಮಹಾರಾಷ್ಟ್ರದ ಸಾಹಿತಿಗೆ ವೇದಿಕೆ ಕಲ್ಪಿಸಿಕೊಟ್ಟ ನಾಡದ್ರೋಹಿ ಕಿರಣ ಠಾಕೂರ ಮೇಲೆ ಕ್ರಮಿನಲ್ ಪ್ರಕರಣ ದಾಖಲಿಸುವಂತೆ ಆಗ್ರಹಿಸಿ ಕರ್ನಾಟಕ ನವ ನಿರ್ಮಾಣ ಸೇನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಹಾಗೂ ನಗರ ಪೊಲೀಸ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಭಾನುವಾರ ಮಹಾರಾಷ್ಟ್ರದಿಂದ ಬೆಳಗಾವಿಗೆ ಬಂದಿದ್ದ ಅಲ್ಲಿನ ಸಾಹಿತಿ ಹೆಸರಿನ ಭಯೋತ್ಪಾದಕ ಡಾ. ಶ್ರೀಪಾಲ ಸಬ್ನಿಸ್ ಮರಾಠಿ ಪತ್ರಿಕೆಯ ಕಚೇರಿಯಲ್ಲಿ ಕನ್ನಡ ಬಸವಣ್ಣನವರ ಭಾಷೆಯಾಗಿರಲಿಲ್ಲ ಎಂದು ಹೇಳಿ ತನ್ನ ಸಾಹಿತಿಕ ಅಪ್ರಬುದ್ದತೆಯನ್ನು ತೋರಿದ್ದಾರೆ. ಬೆಳಗಾವಿ ನೆಲದ ವೀರತ್ವವನ್ನು ಅಪಮಾನಿಸಿ ಮಾತನಾಡಿದ ಸಬ್ನಿಸ್ ಗೆ ಬೆಳಗಾವಿ ಇತಿಹಾಸದ ಬಗ್ಗೆ ಅರಿವಿಲ್ಲ ಎಂದು ಮನವಿಯಲ್ಲಿ ಆರೋಪಿಸಿದ್ದಾರೆ.

ಬ್ರಿಟಿಷ್ ಅಧಿಕಾರಿ ಥ್ಯಾಕರೆ ರೂಂಡ ಚೆಂಡಾಡಿದ ವೀರ ರಾಣಿ ಕಿತ್ತೂರು ಚನಮ್ಮಾಜಿ,ಶೂರ ಸಂಗೊಳ್ಳಿ ರಾಯಣ್ಣ ಮರಾಠಾ ಪೇಶ್ವೆಗಳಿಗೆ ಸೋಲಿನ ರುಚಿ ತೋರಿಸಿದ ಬೆಳವಡಿ ಮಲ್ಲಮ್ಮ ರಾಣಿ ಹುಟ್ಟಿದ್ದು ಬೆಳಗಾವಿಯ ನೆಲದಲ್ಲಿ ಎನ್ನುವ ಸಾಮಾನ್ಯ ಅರಿವು ಸಬ್ನಿಸ್ ಗೆ ಇಲ್ಲ. ಅವನ ಹಾಗೂ ಮರಾಠಿ ಪತ್ರಿಕೆಯ ಸಂಪಾದಕ ಕಿರಣ ಠಾಕೂರ್ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಆಗ್ರಹಿಸಿದರು.
ಬಾಬು ಸಂಗೋಡಿ, ಆನಂದ ಶಿರೂರ, ಆಕಾಶ ನಂದಿ, ಮಂಜುನಾಥ ಬಡಿಗೇರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

loading...