ಸಮಾಚಾರ ಸಣ್ಣದಲ್ಲ.. ಬೆಳಗಾವಿ ಜಿಲ್ಲಾ ಸುದ್ದಿಗಳು

0
61

ಆರ್‍ಸಿಯುನಿಂದ ನೆರೆ ಸಂತ್ರಸ್ತರಿಗೆ ಸಹಾಯ

 

 
ಬೆಳಗಾವಿ
ಪ್ರವಾಹ ಸಂತ್ರಸ್ತರ ನೆರವಿಗಾಗಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಿಬ್ಬಂದಿಗಳು ಒಂದು ದಿನದ ವೇತನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿದ್ದಾರೆ.
ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದಾಗಿ ಹಲವಾರು ಕುಟುಂಬಗಳು ಬಿದಿಗೆ ಬಂದಿದ್ದು, ಅಂತಹವರ ನೆರವಿಗೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಸಹಾಯ ಹಸ್ತ ಚಾಚಿದೆ.
ವಿಶ್ವವಿದ್ಯಾಲಯದಲ್ಲಿ ಖಾಯಂ ಸೇವೆ ಸಲ್ಲಿಸುತ್ತಿರುವ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ತಮ್ಮ ಒಂದು ದಿನದ ಸಂಬಳವನ್ನು ಮುಖ್ಯ ಮಂತ್ರಿ ಪರಿಹಾರ ನಿಧಿಗೆ ನೀಡಿದ್ದು, ಶುಕ್ರವಾರ (ಸೆ.13) ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರಿಗೆ ರು. 5,96,727 ಗಳ ಮೊತ್ತದ ಡಿ.ಡಿ ವಿತರಿಸಿದರು.
ಈ ಸಂದರ್ಭದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಎಮ್.ರಾಮಚಂದ್ರ ಗೌಡ, ಹಣಕಾಸು ಅಧಿಕಾರಿ ಶಂಕರಾನಂದ ಬನಶಂಕರಿ, ಕುಲಸಚಿವರಾದ ಪ್ರೋ. ಬಸವರಾಜ ಪದ್ಮಶಾಲಿ ಉಪಸ್ಥಿತರಿದ್ದರು.
————————-
ಅರ್ಜಿ ಆಹ್ವಾನ
ಬೆಳಗಾವಿ
ಪರಿಶಿಷ್ಟ ವರ್ಗದವರ ಅಭಿವೃದ್ಧಿ ಕಾರ್ಯಾಕ್ರಮಗಳ ಪೈಕಿ ಹಸಿರು ಮನೆ, ನೆರಳು ಮನೆ, ಹನಿ ನೀರಾವರಿ ಹಾಗೂ ಸಣ್ಣ ಪ್ರಮಾಣದ ಸರಕು ಸಾಗಾಣಿಕೆ ವಾಹನ ಖರೀದಿಸಲು ಹಾಗೂ ಹೈನುಗಾರಿಕೆ, ಹಸು, ಎಮ್ಮೆ, ಕರು ಘಟಕ, ಕುರಿ, ಮೇಕೆ ಘಟಕ ಯೋಜನೆಗಳಿಗೆ ಅರ್ಹ ಪರಿಶಿಷ್ಟ ವರ್ಗದ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಅಕ್ಟೋಬರ 5 ಕೊನೆಯ ದಿನವಾಗಿದೆ.
ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ನಮೂನೆಗಾಗಿ ಸಂಬಂಧಿಸಿದ ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಹಾಗೂ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳನ್ನು ಸಂಪರ್ಕಿಸಬೇಕು ಎಂದು ಬೆಳಗಾವಿ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
———————–

ನಾಳೆ ವಿದ್ಯುತ್ ನಿಲುಗಡೆ
ಬೆಳಗಾವಿ
ಹುವಿಸಕಂನಿ ವತಿಯಿಂದ ಯು.ಜಿ.ಕೇಬಲ್ ಹಾಗೂ ಇತರೆ ತುರ್ತು ನಿರ್ವಹಣಾ ಕೆಲಸ ಕೈಗೊಳ್ಳುತ್ತಿರುವುದರಿಂದ 110 ಕೆವಿ ಮಚ್ಚೆ ವಿತರಣಾ ಕೇಂದ್ರದಿಂದ ಹೊರಡುವ ಬೆಳಗಾವಿ ತಾಲೂಕಿನ ದತ್ತ ನಗರ, ನಾವೇಕರ ನಗರ, ಹವಳ ನಗರ, ಗೋಡಶೆ ಕಾಲನಿ, ಓಂಕಾರ ನಗರ, ಮಚ್ಚೆ, ಝಾಡಶಾಪೂರ, ದೇಸೂರ, ಸುಸ್ಗ್ಯಾನಟ್ಟಿ, ಸಂಭಾಜಿ ನಗರ, ಆರೋಗ್ಯ ಮಿಲ್ಕ್, ವೇಗಾ ಹೆಲ್ಮಟ್ಸ್, ಕೆ.ಎಸ್.ಆರ್.ಪಿ ವಸತಿ ಗೃಹಗಳು, ಪೀರಣವಾಡಿ, ಖಾದರವಾಡಿ, ಹುಂಚಾನಟ್ಟಿ ಗ್ರಾಮಗಳಿಗೆ ಹಾಗೂ ಮಚ್ಚೆ ಔದ್ಯೋಗಿಕ ಕ್ಷೇತ್ರಗಳಿಗೆ ಹಾಗೂ ಖಾಲಾಪೂರ ತಾಲೂಕಿನ ಕಾಟಗಾಳಿ, ಪ್ರಭು ನಗರ, ನಿಟ್ಟೂರ, ಗನೇಬೃಲ, ಮಾಳ ಅಂಕಲೆ, ಝಾಡ ಅಂಕಲೆ, ಇದ್ದಲಹೊಂಡ ಹಾಗೂ ಸಿಂಗ್ಯಾನಕೊಪ್ಪ ಗ್ರಾಮಗಳಿಗೆ ಸೆಪ್ಟೆಂಬರ 15 ರಂದು ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 6 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬೆಳಗಾವಿ ಕಾರ್ಯ ಮತ್ತು ಪಾಲನೆ, ನಗರ ವಿಭಾಗ, ಹುವಿಸಕಂನಿ, ಕಾರ್ಯನಿರ್ವಾಹಕ ಅಭಿಯಂತ (ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
————————-
ನ.5 ರಂದು ಸೇನಾ ರ್ಯಾಲಿ ಭರ್ತಿ

ಬೆಳಗಾವಿ
ಬೆಳಗಾವಿ ಸೇರಿದಂತೆ ಆರು ಜಿಲ್ಲೆಗಳ ಸೇನಾ ನೇಮಕಾತಿ ರ್ಯಾಲಿಯು ನವೆಂಬರ್ 5 ರಿಂದ 16 ರವರಿಗೆ ಕೊಪ್ಪಳದ ಸರಕಾರಿ ಯುವ ಮತ್ತು ಕ್ರೀಡಾ ಇಲಾಖೆ ಕ್ರೀಡಾಂಗಣದಲ್ಲಿ ನಡೆಯಲಿದೆ.
ಬೆಳಗಾವಿ ಸೇರಿದಂತೆ ಬೀದರ್, ಗುಲ್ಬರ್ಗಾ, ಕೊಪ್ಪಳ, ರಾಯಚೂರು ಮತ್ತು ಯಾದಗಿರಿ ಸೇರಿದಂತೆ 6 ಜಿಲ್ಲೆಗಳ ಸೇನಾ ನೇಮಕಾತಿ ಪ್ರಕ್ರೀಯೆ ಜರುಗಲಿದ್ದು, ಆಸಕ್ತ ಪುರುಷ ಅಭ್ಯರ್ಥಿಗಳು ರ್ಯಾಲಿಯಲ್ಲಿ ಭಾಗವಹಿಸಬಹುದಾಗಿದೆ.
ಇದೇ ಸಂಸರ್ಭದಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಆಸಕ್ತ ಅಭ್ಯರ್ಥಿಗಳು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿ ರ್ಯಾಲಿಯಲ್ಲಿ ಭಾಗವಹಿಸಬಹುದು.
ಆಸಕ್ತ ಅಭ್ಯರ್ಥಿಗಳು hಣಣಠಿ://ರಿoiಟಿiಟಿಜiಚಿಟಿಚಿಡಿmಥಿ.ಟಿiಛಿ.iಟಿ ವೆಬ್ ಸೈಟ್ ನಲ್ಲಿ ಹೆಸರು ನೊಂದಣಿ ಮಾಡಿಕೊಳ್ಳಬಹುದಾಗಿದೆ. ಸೆಪ್ಟೆಂಬರ್ 10 ರಿಂದ ನೋಂದಣಿ ಪ್ರಕ್ರಿಯೆ ಜರುಗಲಿದ್ದು ಅಕ್ಟೋಬರ್ 24 ನೋಂದಣಿ ಮಾಡಿಕೊಳ್ಳಲು ಕೊನೆಯ ದಿನವಾಗಿದ್ದು, ಅಡ್ಮಿಟ ಕಾರ್ಡನ್ನು ಇಮೇಲ್ ಮೂಲಕ ಅಕ್ಟೋಬರ್ 30 ಮತ್ತು 31 ರಂದು ಕಳುಹಿಸಲಾಗುತ್ತದೆ.
ವಿವಿಧ ಹುದ್ದೆಗಳಿಗೆ ಎಸ್.ಎಲ್.ಸಿ ಮತ್ತು ಪಿಯುಸಿ ಉತ್ತಿರ್ಣರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು. ಕಡ್ಡಾಯವಾಗಿ ನೋಂದಣಿ ಮಾಡಿಸಿದ ಅಭ್ಯರ್ಥಿಗಳಿಗೆ ಮಾತ್ರ ಆರ್ಮಿ ನೇಮಕಾತಿ ರ್ಯಾಲಿಯಲ್ಲಿ ಭಾಗವಹಿಸಲು ಅವಕಾಶವಿದೆ ಎಂದು ಆರ್ಮಿ ನೇಮಕಾತಿ ನಿರ್ದೇಶಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
———————
ಸೆ.21 ರಂದು ಹಿರಿಯ ನಾಗರಿಕರ ಕುಂದು ಕೊರತೆ ಸಭೆ
ಬೆಳಗಾವಿ
ಬೆಳಗಾವಿ ಉಪವಿಭಾಗದ ವ್ಯಾಪ್ತಿಯಲ್ಲಿನ ಹಿರಿಯ ನಾಗರಿಕರಿಗಾಗಿ ಇರುವ ಸ್ವಯಂ ಸೇವಾ ಸಂಸ್ಥೆಗಳು, ವಿವಿಧ ಇಲಾಖೆಗಳ ಮುಖ್ಯಸ್ಥರು ಹಾಗೂ ಹಿರಿಯ ನಾಗರಿಕರೊಂದಿಗೆ ಕುಂದುಕೊರತೆಗಳ ಬಗ್ಗೆ ಚರ್ಚಿಸಲು ಹಿರಿಯ ನಾಗರಿಕರ ಕುಂದು ಕೊರತೆ ಸಭೆಯನ್ನು ಸೆಪ್ಟೆಂಬರ 21 ರಂದು ಮಧ್ಯಾಹ್ನ 3 ಗಂಟೆಗೆ ಉಪವಿಭಾಗಾಧಿಕಾರಿಗಳು ಹಾಗೂ ಉಪದಂಡಾಧಿಕಾರಿಗಳ ಕಾರ್ಯಾಲಯದ ಸಭಾ ಭವನದಲ್ಲಿ ಆಯೋಜಿಸಲಾಗಿದೆ ಎಂದು ಬೆಳಗಾವಿ ಉಪವಿಭಾಗಾಧಿಕಾರಿ ಡಾ. ಕವಿತಾ ಯೋಗಪ್ಪನ್ನವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

—————————
ಲಂಚ ಪಡೆದ ನಿಂಗಪ್ಪ ಕುಂಬಾರಗೆ ಶಿಕ್ಷೆ
ಬೆಳಗಾವಿ
2014-15 ನೇ ಸಾಲಿನ ರಾಷ್ಟ್ರೀಯ ಕೌಟುಂಬಿಕ ನೆರವು ಯೋಜನೆಯಡಿಯಲ್ಲಿ ಮಂಜೂರಾಗಿದ್ದ ಹಣದ ಚೆಕ್ ನೀಡಲು ಲಂಚ ಸ್ವೀಕರಿಸಿದ ಗೋಕಾಕ ತಹಶೀಲ್ದಾರ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ನಿಂಗಪ್ಪ ಕರೆಪ್ಪ ಕುಂಬಾರ ಅವರಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
ದ್ವಿತೀಯ ದರ್ಜೆ ಸಹಾಯಕ ನಿಂಗಪ್ಪ ಕರೆಪ್ಪ ಕುಂಬಾರ ಅವರು ಬಾಳವ್ವ ಭೀಮಪ್ಪಾ ಮಳವಾಡ ಸಾ. ಮಾಮಲದಿನ್ನಿ, ತಾ. ಗೋಕಾಕ ಅವರಿಗೆ ಮಂಜೂರಾಗಿದ್ದ ರೂ 20,000 ರೂ ಹಣದ ಚೆಕ್ ನೀಡಲು ರೂ. 1000 ಲಂಚ ಪಡೆದುಕೊಂಡಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಲಂಚದ ಹಣವನ್ನು ವಶಪಡಿಸಿಕೊಂಡಿದ್ದರು.
ಏಪ್ರೀಲ್ 24, 2015 ರಂದು ದಾಖಲಾದ ಪ್ರಕರಣದ ವಿಚಾರಣೆಯನ್ನು ನಡೆಸಿದ 4ನೇ ಅಧಿಕ ಜಿಲ್ಲಾ ಸತ್ರ ಮತ್ತು ವಿಶೇಷ ನ್ಯಾಯಾಧೀಶರಾದ ಶಶಿಧರ ಶೆಟ್ಟಿ ಅವರು ಆಪಾದಿತ ನಿಂಗಪ್ಪ ಕರೆಪ್ಪ ಕುಂಬಾರ ದ್ವಿ.ದ.ಸ. ತಹಶೀಲ್ದಾರ ಕಛೇರಿ, ಗೋಕಾಕ ಇವರನ್ನು ಸೆಪ್ಟೆಂಬರ 13 ರಂದು ತಪ್ಪಿತಸ್ಥರೆಂದು ತೀರ್ಪು ನೀಡಿ ಕಲಂ 7, ಲಂಚ ಪ್ರತಿಬಂಧಕ ಕಾಯ್ದೆ 1988 ನೇದ್ದರಲ್ಲಿ ಆಪಾದಿತರಿಗೆ ತಲಾ ಮೂರು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ರೂ 7,000 ಗಳ ದಂಡ ವಿಧಿಸಿ ಆದೇಶ ಹೊರಡಿಸಿರುತ್ತಾರೆ.
ಕಲಂ 13(1) ಡಿ ಸಹ ಕಲಂ 13 (2) ಲಂಚ ಪ್ರತಿಬಂಧಕ ಕಾಯ್ದೆ 1988 ಲಂಚ ಪ್ರತಿಬಂಧಕ ಕಾಯ್ದೆ 1988 ನೇದ್ದರಲ್ಲಿ ಆಪಾದಿತರಿಗೆ ನಾಲ್ಕು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ರೂ 10,000 ಗಳ ದಂಡ ವಿಧಿಸಿ ಆದೇಶ ಹೊರಡಿಸಿರುತ್ತಾರೆ.
ಸದರಿ ಪ್ರಕರಣದ ತನಿಖೆಯನ್ನು ಲೋಕಾಯುಕ್ತ ಠಾಣೆಯ ಅಂದಿನ ನಿರೀಕ್ಷಕರಾದ ಬಿ.ಎಸ್.ಪಾಟೀಲ ರವರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ. ಸರಕಾರದ ಪರ ವಿಶೇಷ ಸರಕಾರಿ ಅಭಿಯೋಜಕರಾದ ಪ್ರವೀಣ ಅಗಸಗಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.
—————————–
ಅರ್ಜಿ ಆಹ್ವಾನ
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‍ಸೆಟ್ ಸಂಸ್ಥೆಯಲ್ಲಿ ಬರುವ ಸೆಪ್ಟೆಂಬರ 26 ರಂದು ಪ್ರಾರಂಭವಾಗಲಿರುವ 10 ದಿನಗಳ ಫಾಸ್ಟ್ ಫುಡ್ ಸ್ಟಾಲ್ ಉದ್ಯಮಿ ಹಾಗೂ ಅಕ್ಟೋಬರ್ 9 ರಂದು ಪ್ರಾರಂಭವಾಗಲಿರುವ 13 ದಿನಗಳ ಕ್ಯಾಮರಾ ಹಾಗೂ ಸೆಕ್ಯೂರೆಟಿ ಅಲಾರಾಂ ಇನಸ್ಟಾಲೇಷನ್ ಮತ್ತು ದುರಸ್ತಿಯ ಉಚಿತ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.
ತರಬೇತಿಯು ಊಟ, ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿದ್ದು 18 ರಿಂದ 45 ವರ್ಷ ವಯೋಮಿತಿಯ ಹಾಗೂ ಓದು ಬರಹ ತಿಳಿದಿರುವ ಸ್ವಉದ್ಯೋಗದಲ್ಲಿ ಆಸಕ್ತಿ ಇರುವ ಯುವಕರು ಅರ್ಜಿಯನ್ನು ಸಲ್ಲಿಸಬಹುದು. ತರಬೇತಿಯನ್ನು ಪೂರ್ಣಗೊಳಿಸಿದವರಿಗೆ ಪ್ರಮಾಣ ಪತ್ರ ವಿತರಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‍ಸೆಟ್ ಸಂಸ್ಥೆ, ಹಳಿಯಾಳ, ಉತ್ತರ ಕನ್ನಡ ಜಿಲ್ಲೆ ವಿಳಾಸಕ್ಕೆ ಹಾಗೂ ಸಂಸ್ಥೆಯ ದೂರವಾಣಿ ಸಂಖ್ಯೆ: 9483485489, 9482188780, 08284-220807 ನ್ನು ಸಂಪರ್ಕಿಸಲು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

loading...