ಸಮಾಜಮುಖಿಯಾಗಿ ಕಾರ್ಯ ಮಾಡಿ ಸಂತೃಪ್ತರಾಗಿ: ಸಿದ್ದು

0
12

ಕನ್ನಡಮ್ಮ ಸುದ್ದಿ-ಗದಗ: ವ್ಯಕ್ತಿ ಸಂಘ ಜೀವಿಯಾಗಿರಬೇಕು, ಸಾಮಾಜಿಕ ಸೇವಾ ಸಂಘಟನೆಗಳ ಮೂಲಕ ಸಮಾಜಮುಖಿಯಾಗಿ ಕಾರ್ಯ ಮಾಡಿ ಅದರಲ್ಲಿ ಸಂತೃಪ್ತಿಯನ್ನು ಕಾಣಬೇಕೆಂದು ಭಾವಸಾರ ವ್ಹಿಜನ್ ಇಂಡಿಯಾದ ಏರಿಯಾ 101ರ ಗವರ್ನರ್ ಸಿದ್ದು ಮಾಳದ್ಕರ್ ಅಭಿಪ್ರಾಯಪಟ್ಟರು.
ಗದಗ ರೋಟರಿ ಐಕೇರ್ ಸೆಂಟರ್‍ದಲ್ಲಿ ಗದಗ ಭಾವಸಾರ ವ್ಹಿಜನ್ ಇಂಡಿಯಾಕ್ಕೆ ಅಧಿಕೃತ ಭೇಟಿ ನೀಡಿ ಕ್ಲಬ್‍ನ ಕಾರ್ಯಚಟುವಟಿಕೆಗಳನ್ನು ಪರಿಶೀಲಿಸಿದ ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಇದ್ದುಳ್ಳವರು ಆರ್ಥಿಕವಾಗಿ ಹಿಂದುಳಿದ ಸಮುದಾಯಕ್ಕೆ ಸಹಾಯ ಮಾಡುವ ಮೂಲಕ ಅವರನ್ನೂ ಸಮಾಜ ಮುಖ್ಯವಾಹಿನಿಗೆ ಕರೆ ತರುವ ಕೆಲಸ ಮಾಡಬೇಕು ಅಂದಾಗ ಆರ್ಥಿಕ ವ್ಯವಸ್ಥೆಗೆ ಅರ್ಥ ಬರುವದು ಜೊತೆಗೆ ಇನ್ನೊಬ್ಬರಿಗೆ ಸಹಾಯ ಮಾಡಿದ ಸಂತೃಪ್ತಿಯೂ ದೊರೆಯುವದು ಎಂದರು. ಗದಗ ಭಾವಸಾರ ವ್ಹಿಜನ್ ಇಂಡಿಯಾ ಒಂದೇ ವರ್ಷದ ಅವಧಿಯೊಳಗೆ 60 ಕ್ಕೂ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕ್ರಿಯಾಶೀಲ ವ್ಹಿಜನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಉಚಿತ ಆರೋಗ್ಯ ತಪಾಸಣೆಯಂತಹ ಕಾರ್ಯಕ್ರಮಗಳನ್ನು ರೂಪಿಸಿ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ತನ್ನದೇ ಆದ ಇತಿಮಿತಿಯಲ್ಲಿ ಕಾರ್ಯ ಮಾಡಿದೆ ವಿಶೇಷವಾಗಿ ಡಾ.ದತ್ತಾತ್ರೇಯ ವೈಕುಂಠೆ ಅವರು ಉಚಿತ ರಕ್ತತಪಾಸಣೆಯಂತಹ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಈಗಾಗಲೇ ಒಂದು ಲಕ್ಷಕ್ಕೂ ಹೆಚ್ಚು ಜನರ ರಕ್ತ ತಪಾಸಣೆ ಮಾಡಿ ರಕ್ತದಾನದ ಮಹತ್ವವನ್ನು ತಿಳಿಸಿದ್ದಾರೆ ಜೊತೆಗೆ 60ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ ಶ್ರೇಯಸ್ಸು ಇವರದು ಎಂದರು.
ವ್ಹಿಜನ್ ಅಧ್ಯಕ್ಷೆ ಜಯಲಕ್ಷ್ಮೀ ಮಹೀಂದ್ರಕರ, ಕಾರ್ಯದರ್ಶಿ ಷಣ್ಮುಖ ಸುಲಾಖೆ ಅವರ ನೇತೃತ್ವದಲ್ಲಿ ವ್ಹಿಜನ್ ಕ್ರಿಯಾಶೀಲತೆಯಿಂದ ಕಾರ್ಯ ಮಾಡಿದೆ. ಇದಕ್ಕೆ ಸಹಕರಿಸಿದ ನಿರ್ದೆಶಕ ಮಂಡಳಿ, ಸದಸ್ಯರು ಹಾಗೂ ಸಮಾಜಬಾಂಧವರು ಅಭಿನಂದನಾರ್ಹರು ಎಂದರು. ಅಧ್ಯಕ್ಷತೆ ವಹಿಸಿದ್ದ ವ್ಹಿಜನ್ ಅಧ್ಯಕ್ಷೆ ಜಯಲಕ್ಷ್ಮೀ ಮಹೀಂದ್ರಕರ ಮಾತನಾಡಿ ಸರ್ವರ ಸಹಕಾರದಿಂದ ಜನಪರ ಕಾರ್ಯಗಳನ್ನು ಮಾಡಲು ಅನುಕೂಲವಾಯಿತು. ವ್ಹಿಜನ್ ಮೂಲಕ ಉತ್ತಮ ಕಾರ್ಯಗಳನ್ನು ಮಾಡಿದ ಸಂತೃಪ್ತಿ ಇದೆ ಎಂದರು.
ಡಾ. ದತ್ತಾತ್ರೇಯ ವೈಕುಂಠೆ, ಆರ್.ಎಸ್.ತ್ರಿಮಲ್ಲೆ, ಸುರೇಶ ಸರ್ವದೆ ಅವರನ್ನು ಸನ್ಮಾನಿಸಲಾಯಿತು. ಜನಾರ್ಧನ ಹವಳೆ, ಅಶ್ವತ್ ಸುಲಾಖೆ ಸಂದರ್ಭೋಚಿತವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಸ್ಕಾಲರ್‍ಶಿಫ್‍ಗಳ ಚೆಕ್‍ಗಳನ್ನು ವ್ಹಿಜನ್ ಗವರ್ನರ್ ವಿತರಿಸಿದರು. ವೇದಿಕೆಯ ಮೇಲೆ ವ್ಹಿಜನ್‍ದ ಡೆಪ್ಯೂಟಿ ಗವರ್ನರ್ ಸುರೇಂದ್ರ ಜಾಧವ, ಅನಂತರಾವ್ ಸುಲಾಖೆ ಇದ್ದರು. ಪ್ರಾರಂಭದಲ್ಲಿ ಸಗುಣ ಬೇದ್ರೆ ಪ್ರಾರ್ಥಿಸಿದರು, ವ್ಹಿಜನ್ ಅಧ್ಯಕ್ಷೆ ಜಯಲಕ್ಷ್ಮೀ ಮಹೀಂದ್ರಕರ ಸ್ವಾಗತಿಸಿದರು ಕಾರ್ಯದರ್ಶಿ ಷಣ್ಮುಖ ಸುಲಾಖೆ ವರದಿ ವಾಚಿಸಿ ವಂದಿಸಿದರು. ಕೃಷ್ಣಪ್ರಸಾದ ಜಾಧವ ಪರಿಚಯಿಸಿದರು ಮಂಜುನಾಥ ಉತ್ತರಕರ ನಿರೂಪಿಸಿದರು.
ನಾಗರಾಜ ವಾದೋನೆ, ಜ್ಞಾನೇಶ್ವರ ಉತ್ತರಕರ, ಪಾಂಡುರಂಗ ಮಾಂಡ್ರೆ, ರಮೇಶ ವಾದೋನೆ, ವೀರಣ್ಣ ಬೆಳಮಕರ, ರಾಜು ಕಪಟಕರ ಇದ್ದರು.

loading...