ಸಮಾಜಮುಖಿ ಸಾಹಿತ್ಯ ರಚನೆಯಾಗಲಿ : ಬೀಳಗಿ

0
12

ಗುಳೇದಗುಡ್ಡ: ಇಂದಿನ ತಂತ್ರಜ್ಞಾನ ಯುಗದಲ್ಲಿ ಪುಸ್ತಕ ಓದುವ ಸಂಸ್ಕೃತಿ ಕಡಿಮೆಯಾಗಿದ್ದರೂ ಪುಸ್ತಕ ಓದುಗರು ಇನ್ನೂ ಇದ್ದಾರೆ. ಆದರೆ ಓದುಗರನ್ನು ಸೃಷ್ಟಿಸುವಂತಹ ಸಾಹಿತ್ಯ ಇಂದು ರಚನೆಯಾಗಬೇಕಾಗಿದೆ. ಇಂದಿನ ಸಮಯಕ್ಕೆ ತಕ್ಕಂತೆ ಸಮಾಜಮುಖಿ ಸಾಹಿತ್ಯ ರಚನೆಯಾದಲ್ಲಿ ಅದನ್ನು ಓದುಗ ಸ್ವಿÃಕರಿಸುತ್ತಾನೆ. ಸಾಹಿತ್ಯವನ್ನು ಓದುಗನಿಗೆ ತಲುಪಿಸುವ ಸಾಕಷ್ಟು ತಂತ್ರಜ್ಞಾನ ಇಂದು ನಮ್ಮ ಕೈಯಲ್ಲಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಸಿದ್ದಲಿಂಗಪ್ಪ ಬೀಳಗಿ ಹೇಳಿದರು.
ಅವರು ಶನಿವಾರ ಸ್ಥಳೀಯ ಸರಸ್ವತಿ ವಿದ್ಯಾಸಂಸ್ಥೆಯ ಪಾರ್ವತಿಬಾಯಿ ಪವಾರ ಸಭಾಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್, ಕರ್ನಾಟಕ ಜಾನಪದ ಪರಿಷತ್ತು, ವಚನ ಸಾಹಿತ್ಯ ಪರಿಷತ್ತು, ಕರವೇ ಹಾಗೂ ಸೃಜನಶೀಲ ಸಾಹಿತ್ಯ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಡಾ. ಚಂದ್ರಶೇಖರ ಹೆಗಡೆ ಸಂಪಾದಿತ ಬರಹವೆಂಬ ನಿತ್ಯ ಧ್ಯಾನ ಕೃತಿಯ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿ, ಸಾಹಿತ್ಯ ಎಲ್ಲರಿಗೂ ಅಲ್ಲ. ಸಾಹಿತ್ಯವನ್ನು ಒಲಿಸಿಕೊಳ್ಳಲು ನಮ್ಮಲ್ಲಿ ಶ್ರದ್ಧೆ, ಏಕಾಗ್ರತೆ, ತಪಸ್ಸು ಇರಬೇಕು. ಸಾಧನೆಯಿಂದ ಮಾತ್ರ ಸಾಹಿತ್ಯವನ್ನು ಸೃಷ್ಟಿಸಲು ಸಾಧ್ಯವಾಗುತ್ತದೆ ಎಂದರು.
ಕರ್ನಾಟಕ ನೆಪೋಲಿಯನ್ ಸೊಸೈಟಿ ಅಧ್ಯಕ್ಷ ಡಾ. ವಿಜಯಕುಮಾರ ವೈದ್ಯ ಕೃತಿಯ ಕುರಿತು ಮಾತನಾಡಿ, ಪ್ರೊ. ಚಂದ್ರಶೇಖರ ಹೆಗಡೆ ಅವರು ಸಂಪಾದಿಸಿದ ಬರಹವೆಂಬ ನಿತ್ಯ ಧ್ಯಾನ ಕೃತಿ ರಾಗಂ ಅವರ ಸಾಹಿತ್ಯದ ಶಕ್ತಿಯ ತೋರಿಸುತ್ತದೆ. ಪುಸ್ತಕದಲ್ಲಿನ ಒಂದೊಂದು ಅಕ್ಷರವೂ ಸತ್ವಯುತವಾಗಿವೆ. ಇಲ್ಲಿನ ಲೇಖನಗಳು ನಮ್ಮನ್ನು ಜಾಗೃತಗೊಳಿಸುತ್ತವೆ, ಮನಸ್ಸನ್ನು ಹಗರುಗೊಳಿಸುತ್ತವೆ. ಅತ್ಯಂತ ಅದ್ಭುತವಾಗಿ ಪುಸ್ತಕ ಮೂಡಿಬಂದಿದೆ ಎಂದರು.
ಸಾಹಿತಿ, ಡಾ.ರಾಜಶೇಖರ ಮಠಪತಿ ಮಾತನಾಡಿ, ಸಾಹಿತ್ಯ ವ್ಯಾಪಾರವೂ ಅಲ್ಲ. ಜಾಹೀರಾತೂ ಅಲ್ಲ. ಸಾಹಿತ್ಯ ಒಂದು ಧ್ಯಾನ. ದುರ್ಬಲರಿಗೆ ಸಾಹಿತ್ಯದಲ್ಲಿ ಅವಕಾಶವಿಲ್ಲ. ಸಾಧನೆ ಮಾಡಿದವನಿಂದ ಮಾತ್ರ ಉತ್ತಮ ಸಾಹಿತ್ಯ ರಚನೆಯಾಗುತ್ತದೆ ಎಂದರು.
ಕೋಟೆಕೆಲ್ಲ ಹೊಳೆಹುಚ್ಚೆÃಶ್ವರ ಮಠದ ಶ್ರಿÃ ಹೊಳೆಹುಚ್ಚೆÃಶ್ವರ ಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯ ವಹಿಸಿ ಕೃತಿಯನ್ನು ಲೋಕಾರ್ಪಣೆ ಮಾಡಿದರು.
ಪ್ರಾಚಾರ್ಯ ಡಾ.ಎಸ್.ಎಚ್. ತೆಕ್ಕೆನ್ನವರ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಲೇಖಕ ಪ್ರೊ. ಚಂದ್ರಶೇಖರ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಮಲ್ಲಿಕಾರ್ಜುನ ಬನ್ನಿ, ಡಾ.ರಾಜಶೇಖರ ಬಸುಪಟ್ಟದ, ಬಸವರಾಜ ಯಂಡಿಗೇರಿ, ಪ್ರಕಾಶ ಮುರಗೋಡ, ರವಿ ಅಂಗಡಿ, ಶಿವಕುಮಾರ ಕರನಂದಿ, ಸಂಗಮೇಶ ಚಿಕ್ಕಾಡಿ, ಎಂ.ಓ. ಸುರಪೂರ, ಮೋಹನ ಕರನಂದಿ ಮತ್ತಿತರರು ಉಪಸ್ಥಿತರಿದ್ದರು.

loading...