ಸಮಾಜ ಘಾತುಕರ ವಿರುದ್ಧ ನಿರ್ಧಾಕ್ಷಣ್ಯ ಕ್ರಮ: ಮುಲ್ಲಾ

0
39

ಕೋಹಳ್ಳಿ: ಚುನಾವಣೆಯಲ್ಲಿ ಯಾವುದೇ ಅಹಿತಕರ ಘಟನೆಗೆ ಕಾರಣರಾದವರನ್ನು ಇಲಾಖೆ ಎಂದಿಗೂ ಸಹಿಸುವುದಿಲ್ಲ, ಸಮಾಜ ಘಾತುಕ ಕೆಲಸ ಮಾಡುವ ಹಾಗೂ ಸಮಾಜದ ಸ್ವಾಸ್ಥ್ಯಕ್ಕೆ ದಕ್ಕೆ ತರುವವರ ವಿರುದ್ದ ನಿರ್ಧಾಕ್ಷಣ ಕ್ರಮಕೈಗೊಳ್ಳಲಾಗುವುದು ಎಂದು ಐಗಳಿ ಪಿಎಸ್‍ಐ ಎಚ್.ಡಿ ಮುಲ್ಲಾ ಹೇಳಿದರು. ಅವರು ಗುರುವಾರ ಗ್ರಾಮದಲ್ಲಿ ಪೋಲಿಸ್ ಇಲಾಖೆ ಸಿಬ್ಬಂದಿ ಮೂಲಕ ಜರುಗಿದ ವಿಶೇಷ ಜನಜಾಗೃತಿ ಪರೇಡ್ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿಧಾನಸಭೆ ಚುನಾವಣೆ ನಿಮಿತ್ಯ ಇಲಾಖೆಯಿಂದ ಎಲ್ಲ ಪೂರ್ವ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಚುನಾವಣೆಯಲ್ಲಿ ಯಾವುದೇ ಅಕ್ರಮ ನಡೆಯದಂತೆ ಇಲಾಖೆಯೂ ಕಣ್ಣುಗಾವಲು ಇಟ್ಟಿದೆ. ಮತದಾರರು ಚುನಾವಣೆಯಲ್ಲಿ ಯಾವುದೇ ಭಯ ಪಡುವ ಅವಶ್ಯಕತೆ ಇಲ್ಲ, ಯಾವುದೇ ಆತಂಕ, ಭಯವಿದ್ದಲ್ಲಿ ತಕ್ಷಣ ಪೋಲಿಸರನ್ನು ಸಂPಪರ್ಕಿಸಬೇಕು. ಶಾಂತಿಯುತ ಮತದಾನ ನಡೆಯಲು ಪೋಲಿಸರೊಂದಿಗೆ ಎಲ್ಲ ಗ್ರಾಮಸ್ಥರು ಸಹಕರಿಸಬೇಕೆಂದು ಹೇಳಿದರು. ಜನಜಾಗೃತಿಯಲ್ಲಿ ಎಎಸ್‍ಐ ದೇವರಮನಿ, ಎಸ್ ಡಿ ಕುಂಬಾರ, ಮೇತ್ರಿ, ಗ್ರಾಪಂ ಉಪಾಧ್ಯಕ್ಷ ಶ್ರೀಕಾಂತ ಆಲಗೂರ, ಗ್ರಾಪಂ ಕಾರ್ಯದರ್ಶಿ ಈರಪ್ಪ ತಮದಡ್ಡಿ, ಗ್ರಾಮಲೆಕ್ಕಾಧಿಕಾರಿ ಎಂ ಎ ಮುಜಾವರ ಸೇರಿದಂತೆ ಇತರ ಅಧಿಕಾರಿಗಳು ಇದ್ದರು.

loading...