ಸರಕಾರದಿಂದ ರೇಣುಕಾಚಾರ್ಯರ ಜಯಂತಿ ಆಚರಿಸಲು ಮನವಿ

0
55

ಕನ್ನಡಮ್ಮ ಸುದ್ದಿ-ಗುಳೇದಗುಡ್ಡ: ವೀರಶೈವ ಧರ್ಮ ಸಂಸ್ಥಾಪಕ ರೇಣುಕಾಚಾರ್ಯರರ ಜಯಂತಿಯನ್ನು ಸರಕಾರದ ವತಿಯಿಂದ ಆಚರಿಸುವಂತೆ ಆಗ್ರಹಿಸಿ ಇಲ್ಲಿನ ಜಂಗಮ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಬುಧವಾರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು. ಉಪತಹಶೀಲ್ದಾರ ಮಹಾಂತೇಶ ಅಂಗಡಿ ಮನವಿ ಸ್ವೀಕರಿಸಿದರು.
ವೀರಶೈವ ಧರ್ಮವನ್ನು ಸಂಸ್ಥಾಪಿಸಿ, ಜಾತಿಗಿಂತ ನೀತಿ ಮೇಲು, ತತ್ವಕ್ಕಿಂತ ಆಚರಣೆ ಮೇಲು, ಬೋಧನೆಗಿಂತ ಸಾಧನೆ ಮೇಲು, ದಾನಕ್ಕಿಂತ ದಾಸೋಹ ಮೇಲು, ಮನುಷ್ಯನ ಜೀವನದಲ್ಲಿ ಗುರು, ಗುರಿ ಮುಖ್ಯ, ಪರಂಪರೆಯ ಜೊತೆಗೆ ಗುರು,ಸಂಸ್ಕೃತಿ, ಸಂಸ್ಕಾರ ಮನುಷ್ಯನ ಬಾಳಿಗೆ ಅತಿ ಮುಖ್ಯ ಎಂಬ ಧಾರ್ಮಿಕ ಸಂವಿಧಾನವನ್ನು ನೀಡಿದಂತಹ ರೇಣುಕಾಚಾರ್ಯ ಜಗತ್ತಿಗೆ ಸಮಾನತೆ ಸಾರಿದವರು. ಭಾರತ ಮತ ಸಾಮರಸ್ಯ ಸಾಂಸ್ಕೃತಿಕ ಸಹಿಷ್ಣತೆ ಕಾಪಾಡುವಲ್ಲಿ ವೀರಶೈವ ಧರ್ಮ ಸಂಸ್ಥಾಪಕ ರೇಣುಕಾಚಾರ್ಯರ ಸಿದ್ಧಾಂತಗಳು ಪ್ರೇರಣೆಯಾಗಿದ್ದು, ರೇಣುಕಾಚಾರ್ಯರ ಜಯಂತಿಯನ್ನು ಸರಕಾರದ ವತಿಯಿಂದ ಆಚರಿಸುವುದು ಅಗತ್ಯವಿದೆ. ಆದ್ದರಿಂದ ಪ್ರತಿವರ್ಷ ಫೆ.28ರಂದು ಶ್ರೀಮದ್‌ ರೇಣುಕಾಚಾರ್ಯರ ಜಯಂತಿಯನ್ನು ಆಚರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಮರಡಿಮಠದ ಅಭಿನವ ಕಾಡಸಿದ್ದೇಶ್ವರ ಸ್ವಾಮಿಗಳು, ಸಮಾಜದ ಅಧ್ಯಕ್ಷ ಶಿವನಯ್ಯ ಮಳ್ಳಿಮಠ, ನೀಲಕಂಠಯ್ಯ ಸಿಂದಗಿಮಠ, ವೀರಯ್ಯ ಸಾವಳಗಿಮಠ, ಸಿದ್ಧಯ್ಯ ರೇವಣಸಿದ್ಧೇಶ್ವರ ಮಠ, ಪ್ರಭು ತಟ್ಟಿಮಠ, ಉಮೇಶ ಶಿವನಗೌಡರ, ಭುವನ ಪೂಜಾರಿ, ವಿರೂಪಾಕ್ಷ ಚಿಕ್ಕಮಠ, ಮರುಳುರಾಧ್ಯ ಮರಡಿಮಠ, ಶಾಂತವೀರಯ್ಯ ಹುಚ್ಚೇಶ್ವರಮಠ, ಬಸವರಾಜ ಸಿಂದಗಿಮಠ, ಮಂಜು ಹಿರೇಮಠ, ಚಂದ್ರ ಸಾರಂಗಮಠ, ಶಿವನಯ್ಯ ಕಕ್ಕಯ್ಯನಮಠ, ಈರಯ್ಯ ಚನಸಂಗಮಠ ಮತ್ತಿತರರು ಇದ್ದರು.

loading...