ಸರಕಾರದ ನಿಲುವನ್ನು ಖಂಡಿಸಿ ಮನವಿ

0
43

ಸಿಂದಗಿ: ಕಲಬುರ್ಗಿ ವಿಮಾನ ನಿಲ್ದಾಣ ಅವರಣದಲ್ಲಿದ್ದ ಸಂತ ಸೇವಾಲಾಲ ಮತ್ತು ಮರಿಯಮ್ಮದೇವಿ ದೇವಸ್ಥಾನದ ಕಟ್ಟಡವನ್ನು ಹಾಗೂ ದೇವರ ಮೂರ್ತಿಗಳನ್ನು ಧ್ವಂಸಗೊಳಿಸಿದ ಸರಕಾರದ ನಿಲುವನ್ನು ಖಂಡಿಸಿ ತಾಲೂಕಾ ಬಂಜಾರ ಸಮಾಜದ ಮುಖಂಡರು ಗುರುವಾರ ತಹಶೀಲ್ದಾರ ಕಛೇರಿಯ ಮುಂದೆ ಪ್ರತಿಭಟಿಸಿ ತಹಶೀಲ್ದಾರ ಬಿ.ಎಸ್.ಕಡಕಬಾವಿ ಅವರಿಗೆ ಮನವಿ ಸಲ್ಲಿಸಿದರು.
ತಾಲೂಕು ಅಧ್ಯಕ್ಷ ಮಹಾದೇವ ರಾಠೋಡ ಮಾತನಾಡಿ, ದೇವಸ್ಥಾನವನ್ನು ಧ್ವಂಸಗೊಳಿಸಿದ್ದು ವಿಕೃತಿಯಾಗಿದೆ. ಇದರಿಂದ ಧರ್ಮಕ್ಕೆ ಮತ್ತು ಬಂಜಾರಾ ಸಮೂದಾಯಕ್ಕೆ ಮಾಡಿದ ಅಪಮಾನವಾಗಿದೆ. ಭಾರತದೇಶ ಸಂಸ್ಕೃತಿ ಭರಿತವಾದ ದೇಶ ಇಲ್ಲಿ ಆಚಾರ-ವಿಚಾರಗಳಿಗೆ ಯೋಗ್ಯವಾದ ಮಾನ್ಯತೆಯಿದೆ. ಇದಕ್ಕೆ ಸಮಾಜ ಮುಂದಿನ ದಿನಮಾನಗಳಲ್ಲಿ ಯೋಗ್ಯ ಉತ್ತರ ನೀಡಲಿದೆ. ವಿಮಾನ ನಿಲ್ದಾಣಕ್ಕೆ ಭೂಮಿ ನೀಡಿದ ರೈತರಿಗೆ ಸರಕಾರ ನೀಡಿದ ವಾಗ್ದಾನವನ್ನು ಈಡೇರಿಸಿಲ್ಲ. ಪ್ರತಿಯೊಂದಕ್ಕೂ ವಿಮಾನ ಇಲಾಖೆ ಕಡೆಗೆ ಬೊಟ್ಟು ಮಾಡಿ ತೊರಿಸುತ್ತಿದೆ. ನಿಲ್ದಾಣಕ್ಕಾಗಿ ಭೂಮಿ ಕಳೆದುಕೊಂಡ ರೈತರ ಸ್ಥಿತಿ ಅದರಲ್ಲಿ ಹೆಚ್ಚು ಜನ ಲಂಬಾಣಿಗರಿದ್ದಾರೆ. ಅವರ ಸ್ಥಿತಿ ಚಿಂತಾಜನಕವಾಗಿದೆ ಕೂಡಲೇ ಸರಕಾರ ಎಚ್ಚೆತ್ತು ಕೊಳ್ಳಬೇಕು ಮತ್ತು ಧ್ವಂಸ ಮಾಡಿದ ದೇವಸ್ಥಾನವನ್ನು ಅದೇ ಜಾಗಾದಲ್ಲಿ ಮರು ಸ್ಥಾಪಿಸಿ ನಿಲ್ದಾಣಕ್ಕೆ ಸಂತ ಸೇವಾಲಾಲರ ಹೆಸರಿಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕೆ.ಜೆ ರಾಠೋಡ, ಶಂಕರ ಚವ್ಹಾಣ, ಪುಂಡಲೀಕ ರಾಠೋಡ, ಟಿ.ಟಿ.ರಾಠೋಡ, ಬುದ್ದು ರಾಠೋಡ, ಕಿಶನ ಜಾಧವ, ದಿಲೀಪ ಚವ್ಹಾಣ, ಬಾಬು ಚವ್ಹಾಣ, ಶಿವಾಜಿ ಜಾಧವ, ಸಂತೋಷ ರಾಠೋಡ, ವಸಂತ ಪವಾರ, ರಮೇಶ ಚವ್ಹಾಣ, ಮನೋಹರ ಚವ್ಹಾಣ, ಗೋವಿಂದ ರಾಠೋಡ, ರಮೇಶ ಜಾಧವ, ಅಶೋಕ ಚವ್ಹಾಣ, ಮನೋಹರ ಚವ್ಹಾಣ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಇದ್ದರು.

loading...