ಸರಕಾರವನ್ನೇ ಕೆಡವಿಬಿಡುತ್ತೇನೆ: ಶಾಸಕ ಬಾಲಚಂದ್ರ ಜಾರಕಿಹೊಳಿ

0
86

ಸರಕಾರವನ್ನೇ ಕೆಡವಿಬಿಡುತ್ತೇನೆ: ಶಾಸಕ ಬಾಲಚಂದ್ರ ಜಾರಕಿಹೊಳಿ

ಬೆಳಗಾವಿ: ಉತ್ತರ ಕರ್ನಾಟಕದಾದ್ಯಂತ ಪ್ರವಾಹದಿಂದಾಗಿ ಮನೆ ಕಳೆದುಕೊಂಡಿರುವ ನಿರಾಶ್ರಿತರಿಗೆ ಮನೆ ನಿರ್ಮಿಸಿ ಕೊಡಬೇಕು.ಇಲ್ಲವಾದರೆ ಸರಕಾರವನ್ನೇ ಉರುಳಿಸುವೆ ಎಂದು ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.

ನೆರೆ ಪೀಡಿತ ಅರಭಾವಿ ಮತಕ್ಷೇತ್ರದ ವಿವಿಧ ಗ್ರಾಮಗಳಿಗೆ ಪ್ರವಾಸದ ವೇಳೆ ಸಂತ್ರಸ್ತರೊಂದಿಗೆ ಸಾಂತ್ವನ ಹೇಳುವ ವೇಳೆ ತಿಳಿಸಿದ್ದಾರೆ.

ಉತ್ತರ ಕರ್ನಾಟಕದಲ್ಲಿ ಭೀಕರ ಪ್ರವಾಹವಾಗಿದೆ. ಮನೆ ಕಳೆದುಕೊಂಡಿರುವ ಸಂತ್ರಸ್ತರಿಗೆ ಮನೆ ನಿರ್ಮಿಸಿಕೊಡಲೇಬೇಕು. ಇಲ್ಲವಾದರೆ ಈ ಸರ್ಕಾರವನ್ನೇ ಕೆಡವಿಬಿಡುತ್ತೇನೆ. ನಿಮಗೆ ಮನೆ ಕಟ್ಟಿಸಿಕೊಡುವ ಜವಾಬ್ದಾರಿ ನಮ್ಮದಾಗಿದೆ ಎಂದು ನೆರೆ ಸಂತ್ರಸ್ತರಿಗೆ ಭರವಸೆ ನೀಡಿದರು.

ಇದಕ್ಕೆ ಮೆನೆ ಕಳೆದುಕೊಂಡ ಹಾಗೂ ಗ್ರಾಮಸ್ಥರು ಕೊಂಚ ದೈರ್ಯ ಬಂದಂತಾಗಿದೆ. ಅವರು ಹೇಳಿರುವ ವಿಡಿಯೋ ರಾಜ್ಯಾದ್ಯಂತ ಸಾಮಾಜಿಕ ಜಾಲತಾಣದಲ್ಲಿ ಪುಲ್ ವೈರಲ್ ಆಗುತ್ತಿದೆ.

loading...