ಸರಕಾರಿ ಇಲಾಖೆಗಳ ನಡುವೆ ಪರಸ್ಪರ ಹೊಂದಾಣಿಕೆಯ ಕೊರತೆ: ಹರೀಶಕುಮಾರ

0
11

 

ಮುಂಡಗೋಡ: ಸರಕಾರಿ ಇಲಾಖೆಗಳ ನಡುವೆ ಪರಸ್ಪರ ಹೊಂದಾಣಿಕೆಯ ಕೊರತೆಯಿಂದ ಯಾವುದೇ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಪರಿಹರಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಯಾವುದೇ ಅನಾಹುತಗಳು ನಡೆಯುವ ಮುನ್ನ ಜಾಗೃತರಾಗಿ ಕಾರ್ಯನಿರ್ವಹಿಸುವಂತೆ ಉತ್ತರಕನ್ನಡ ಜಿಲ್ಲಾಧಿಕಾರಿ ಕೆ. ಹರೀಶಕುಮಾರ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗುರುವಾರ ಇಲ್ಲಿಯ ಮಿನಿ ವಿಧಾನಸೌಧ ಸಭಾಂಗಣದಲ್ಲಿ ಇಲಾಖಾ ಪ್ರಗತಿ ಪರಿಶಿಲನಾ ಸಭೆ ಮತ್ತು ಕುಡಿಯುವ ನೀರು ಹಾಗೂ ಬರ ಪೀಡಿತ ತಾಲೂಕಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಗೆಲುವಿಗೆ ನಾವು ಅಪ್ಪ ಆಗುವುದಾದರೆ ಸೋಲಿಗೂ ನಾವೇ ಹೊಣೆಯಾಗುತ್ತೆÃವೆ ಸಾರ್ವಜನಿಕರ ನಿರಕ್ಷೆಯಂತೆ ಕೆಲಸ ಮಾಡುವುದು ನಮ್ಮ ಕರ್ತವ್ಯ. ಸರಕಾರಿ ಕೆಲಸವೆಂದರೆ ಜನರಿಗೆ ನೀಡುವ ಸೇವೆ ಅದಕ್ಕೆ ಅಗತ್ಯ ಅನುದಾನ ನೀಡುವುದು ಜನಪ್ರತಿನಿಧಿಗಳು ಹಾಗೂ ಸರ್ಕಾರ ಇದನ್ನು ಪ್ರತಿಯೊಬ್ಬ ಸರಕಾರಿ ನೌಕರರು ಅರ್ಥ ಮಾಡಿಕೊಂಡು ಸೇವಾ ಮನೋಭಾವನೆಯಿಂದ ಕಾರ್ಯನಿರ್ವಹಿಸಬೇಕಿದೆ. ಸರಕಾರಿ ಕೆಲಸವನ್ನು ವೈಯಕ್ತಿಕ ಲಾಭಕ್ಕಾಗಿ ಯಾರು ಕೂಡ ನಿರ್ವಹಿಸಬಾರದು. ಜನರು ನಮ್ಮ ನಿಷ್ಟೆಯ ಬಗ್ಗೆ ಹಿಂದಿನಿಂದ ಗುಣಗಾನ ಮಾಡುತ್ತಾರೆ. ಕೆಳ ಮಟ್ಟದ ಸಮಸ್ಯೆಗಳು ಸ್ಥಳಕ್ಕೆ ಹೋಗಿ ನೋಡಿದರೆ ಮಾತ್ರ ತಿಳಿಯುತ್ತದೆ. ಕಾಟಾಚಾರಕ್ಕೆ ಸಭೆ ನಡೆಸುವುದರಿಂದ ಏನು ಪ್ರಯೋಜನವಿಲ್ಲ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ ಎಂದ ಅವರು, ಕುಡಿಯುವ ನೀರಿನ ಸಮಸ್ಯೆಗೆ ತಕ್ಷಣ ಪರಿಹಾರ ಕ್ರಮ ಕೈಗೊಳ್ಳಲು ಉಪ ವಿಭಾಗಾಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ. ಯಾವುದೇ ರೀತಿ ಹಣದ ಕೊರತೆ ಇಲ್ಲ.

ಮಳೆಗಾಲದಲ್ಲಿ ಅನಾಹುತಗಳು ನಡೆದ ನಂತರ ಕ್ರಮಕ್ಕೆ ಮುಂದಾÀಗುವ ಬದಲು ಪೂರ್ವದಲ್ಲಿಯೇ ಮುಂಜಾಗ್ರತಾ ಕ್ರಮ ಕೈಗೊಳ್ಳುವುದರಿಂದ ಮುಂದಾಗಬಹುದಾದ ಅನಾಗುತಗಳನ್ನು ತಪ್ಪಿಸಬಹುದು. ಹಿಂದೆ ಅರ್ಧ ಘಂಟೆಯಲ್ಲಿ ರಸ್ತೆ ಮೇಲಿನ ಮರವನ್ನು ತೆರವು ಮಾಡಿದರೂ ಜನರು ತೃಪ್ತಿಪಡುತ್ತಿದ್ದರು. ಆದರೆ ಇಂದಿನ ಆದುನಿಕ ಯುಗದಲ್ಲಿ ತಕ್ಷಣ ಪರಿಹಾರ ಬಯಸುತ್ತಾರೆ. ಅಧಿಕಾರಿ ಹಾಗೂ ಸಿಬ್ಬದಿಗಳು ಕೂಡ ಜನರಿಗೆ ಅನುಗುಣವಾಗಿ ಕಾರ್ಯನಿರ್ವಹಿಸಬೇಕಿರುವುದು ಅನಿವಾರ್ಯವಾಗಿದೆ. ಆಡಳಿತ ಅಧಿಕಾರಿಯಾಗಿ ಸಬೂಬು ನೀಡುವುದೇ ಜವಾಬ್ದಾರಿಯಲ್ಲ. ಜನರಿಗೆ ನಮ್ಮ ಮೇಲೆ ವಿಶ್ವಾಸ ಬರಬೇಕಾದರೆ ಪ್ರತಿಯೊಬ್ಬರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕಿದೆ. ಕೇವಲ ನಗರ ಪ್ರದೇಶ ಮಾತ್ರವಲ್ಲದೇ ಗ್ರಾಮೀಣ ಭಾಗದ ಬಗ್ಗೆ ಕೂಡ ಹೆಚ್ಚಿನ ಆಸಕ್ತಿವಹಿಸಿ ಕಾರ್ಯನಿರ್ವಹಿಸಬೇಕು. ನೋಡಲ್ ಅಧಿಕಾರಿಗಳು ಗ್ರಾಮಗಳನ್ನು ದತ್ತು ತೆಗೆದುಕೊಂಡಂತೆ ಕೆಲಸ ಮಾಡಬೇಕು. ೧ ತಿಂಗಳು ಕುಡಿಯುವ ನೀರಿನ ಸಮಸ್ಯೆ ನೀಗಿಸುವ ಕೆಲಸ ಮುಗಿಸಿ ನಂತರ ಮಳೆಗಾಲ ಸಮಸ್ಯೆ ಎದುರಿಸಲು ಅಧಿಕಾರಿಗಳು ಸಿದ್ದರಾಗಿರಬೇಕು. ಮುಂಗಾರು ಹಂಗಾಮಿಗೆ ರೈತರಿಗೆ ಬೇಕಾದ ಅಗತ್ಯ ಬಿತ್ತನೆ ಬೀಜ ರಸಗೊಬ್ಬರ ಸೇರಿದಂತೆ ಅಗತ್ಯ ವಸ್ತುಗಳನ್ನು ದಾಸ್ತಾನು ಮಾಡಿಡುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಯಿತು.
ಮುಂಡಗೋಡ ಅಗ್ನಿಶಾಮಕ ದಳದ ಬೆಂಕಿ ನಂದಿಸುವ ವಾಹನ ತುಂಬಿಸಲು ನೀರಿನ ವ್ಯವಸ್ಥೆ ಇಲ್ಲದ ಕಾರಣ ಸಮಸ್ಯೆಯಾಗುತ್ತಿದೆ ಎಂಬ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಲೋಕೋಪಯೋಗಿ, ಪ.ಪಂ ಹಾಗೂ ಕೃಷಿ ಮಾರುಕಟ್ಟೆ ಸಮಿತಿಯವರು ನೀರಿನ ವ್ಯವಸ್ಥೆ ಮಾಡಲು ಸಭೆಯಲ್ಲಿ ಒಪ್ಪಿಕೊಂಡರು.

ಪಟ್ಟಣದಲ್ಲಿ ೩ ದಿನಕ್ಕೊಂದು ಬಾರಿ ನೀರು ಪೂರೈಸುವ ಬದಲು ೨ ದಿನಕ್ಕೊಂದು ಬಾರಿ ಪೂರೈಸಿ ನೀರನ್ನು ಮಿತವಾಗಿ ಬಳಸುವಂತೆ ಜನರಲ್ಲಿ ಮನವರಿಕೆ ಮಾಡಿಕೊಡುವಂತೆ ಜಿಲ್ಲಾಧಿಕಾರಿಗಳು ಪ.ಪಂ ಮುಖ್ಯಾಧಿಕಾರಿಗೆ ಸೂಚಿಸಿದರು. ಗುಣಮಟ್ಟ ಶಿಕ್ಷಣ ನೀಡುವುದು ಶಿಕ್ಷಣ ಇಲಾಖೆ ಹಾಗೂ ಶಿಕ್ಷಕರ ಹೊಣೆಗಾರಿಕೆಯಾಗಿರುತ್ತದೆ. ಮಕ್ಕಳಿಗೆ ಶಿಕ್ಷಣದೊಂದಿಗೆ ಆಚಾರ ವಿಚಾರ ಸಂಸ್ಕಾರವನ್ನು ಬಿತ್ತುವ ಮೂಲಕ ಸೇವಾ ಮನೋಭಾನೆ ಬಗ್ಗೆ ಕೂಡ ಅಳವಡಿಸಬೇಕು ಎಂದರು. ಉಪವಿಭಾಗಾಧಿಕಾರಿ ಈಶ್ವರ ಉಳ್ಳಾಗಡ್ಡಿ, ತಹಸೀಲ್ದಾರ ಶಂಕರ ಗೌಡಿ, ಲೋಕೋಪಯೋಗಿ ಇಲಾಖೆ ಅಧಿಕಾರಿ ದಯಾನಂದ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಪ್ರವೀಣ ಕಟ್ಟಿಮನಿ, ಅಕ್ಷರದಾಸೋಹ ಅಧಿಕಾರಿ ಮಂಜುನಾಥ ಸಾಳುಂಕೆ, ಸಹಾಯಕ ಕೃಷಿ ನಿರ್ದೇಶಕ ಎಮ್.ಎಸ್ ಕುಲಕರ್ಣಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಶಿಧರ ಮುಂತಾದವರಿದ್ದರು.

loading...