ಸರಕಾರಿ ನೌಕರರು ವೇತನ ತಕ್ಕ ಕಾರ್ಯನಿರ್ವಸಲಿ: ಷಡಕ್ಷರಿ

0
17

ಸರಕಾರಿ ನೌಕರರು ವೇತನ ತಕ್ಕ ಕಾರ್ಯನಿರ್ವಸಲಿ: ಷಡಕ್ಷರಿ
ಚನ್ನಮ್ಮನ ಕಿತ್ತೂರು: ಸರಕಾರಿ ನೌಕರರು ಸೇವಾ ಮನೋಭಾವನೆಯಿಂದ ಕಾರ್ಯ ನಿರ್ವಹಿಸಬೇಕು ಸರಕಾರವು ತಕ್ಕ ಸಂಬಳ ನೀಡುತ್ತಿದೆ. ಸಂಬಳ ತೆಗೆದುಕೊಂಡವರು ಪ್ರಜಾ ಸ್ನೇಹಿಗಳಾಗಬೇಕು. ಮುಖ್ಯವಾಗಿ ಬದ್ಧತೆ ಇರಬೇಕು ಎಂದು ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ ಎಸ್ ಷಡಕ್ಷರಿ ಹೇಳಿದರು.

ಸ್ಥಳೀಯ ಡೊಂಬರಕೊಪ್ಪ ಪ್ರವಾಸಿ ಮಂದಿರದಲ್ಲಿ ರವಿವಾರ ಪತ್ರಕರ್ತರ ಗೋಷ್ಠಿ ನಡೆಸಿ ಮಾತನಾಡುತ್ತ, ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸರಕಾರ ಬೋಧನೆ ಕೆಲಸಕ್ಕಿಂತ ಗುಮಾಸ್ತಿಕೆ ಕೆಲಸವನ್ನು ಹೆಚ್ಚಾಗಿ ವಹಿಸಿದ್ದರಿಂದ ಶಿಕ್ಷಕರಿಗೆ ಪಾಠ ಮಾಡುವಲ್ಲಿ ತೊಂದರೆಯಾಗುತ್ತಿದೆ. ಇದರಿಂದ ಕಲಿಕೆಯಲ್ಲಿ ವಿದ್ಯಾರ್ಥಿಗಳು ಕುಂಠಿತಗೊಳ್ಳುತ್ತಿದ್ದಾರೆ.
ಸರಕಾರವೇ ಶಿಕ್ಷಣದ ವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದು ಶಿಕ್ಷಕರಿಗೆ ಬೋಧನೆಯೇ ಹೊರೆಯಾಗುತ್ತಿದೆ ಎಂದು ಹೇಳಿದರು.
ಕೇಂದ್ರ ಸರಕಾರಿ ನೌಕರರು ಪಡೆಯುವ ವೇತನವನ್ನೇ ರಾಜ್ಯ ಸರಕಾರ ನೌಕರ ಪಡೆಯುವಂತಾಗಬೇಕು. ಹೊಸ ಪಿಂಚಣಿ ಯೋಜನೆ ಅಭದ್ರತೆಯಿಂದ ಕೂಡಿದ್ದು ಹಳೆ ಪಿಂಚಣಿ ಯೋಜನೆಯನ್ನು ಮರಳಿ ಜಾರಿಗೆ ತರುವಂತಾಗಬೇಕು. ರಾಜ್ಯದಲ್ಲಿ ಒಟ್ಟು ಸರಕಾರಿ ನೌಕರರ ಸಂಖ್ಯೆ ೭ ಲಕ್ಷ ಹುದ್ದೆಗಳಿವೆ.

ಆರೋಗ್ಯ ಭಾಗ್ಯ ಯೋಜನೆ ಅಡಿಯಲ್ಲಿ ತಿದ್ದುಪಡೆ ತಂದು ಸರಕಾರವೇ ರೋಗಿಯ ಎಲ್ಲ ವೆಚ್ಚವನ್ನು ಭರಿಸುವಂತಾಗಬೇಕು. ಶಿಕ್ಷಕರ ಅವೈಜ್ಞಾನಿಕ ವರ್ಗಾವಣೆಯನ್ನು ಹೋಗಲಾಡಿಸಲು ಶಿಕ್ಷಕ ಸ್ನೇಹಿ ಎಂಬ ಯೋಜನೆಯನ್ನು ಜಾರಿಗೆ ತರುವಂತೆ ಸರಕಾರಕ್ಕೆ ಒತ್ತಾಯಿಸಲಾಗಿದೆ. ಹೀಗೆ ಹತ್ತು ಹಲವಾರು ಯೋಜನೆಗಳನ್ನು ಜಾರಿಗೆಗೊಳಿಸುವಂತೆ ಸರಕಾರಕ್ಕೆ ನಾವು ಒತ್ತಾಯಿಸುತ್ತಿದ್ದೇವೆ. ಎಲ್ಲ ಸರಕಾರಿ ನೌಕರರು ಬದ್ಧತೆಯಿಂದ ಕೆಲಸ ಮಾಡಿದರೆ ಮಾತ್ರ ಈ ಎಲ್ಲ ಬೇಡಿಕೆಗಳು ಈಡೇರಲು ಸಾಧ್ಯ ಎಂದು ಹೇಳಿದರು.

ರಾಜ್ಯ ಸರಕಾರಿ ನೌಕರರ ಸಂಘದ ಖಜಾಂಚಿ ಕೆ ಶ್ರೀನಿವಾಸ, ತಾಲೂಕಾ ಶಿಕ್ಷಕರ ಸಂಘದ ಅಧ್ಯಕ್ಷ ಎಮ್ ಎಫ್ ಜಕಾತಿ, ರಾಜ್ಯ ಪರಿಷತ್ ಸದಸ್ಯ ರವೀಂದ್ರ ಜಾಧವ ಉಪಸ್ಥಿತರಿದ್ದರು.

loading...