ಸರಕಾರಿ ನೌಕರರ ಕ್ಷೇಮಾಭಿವೃದ್ಧಿಗೆ ಪಣ

0
7

ಸರಕಾರಿ ನೌಕರರ, ಶಿಕ್ಷಕರೊಂದಿಗೆ ಸಂವಾದದಲ್ಲಿ ಷಡಾಕ್ಷರಿ ಹೇಳಿಕೆ
 ಸರಕಾರಿ ನೌಕರರ ಕ್ಷೇಮಾಭಿವೃದ್ಧಿಗೆ ಪಣ

ಬೆಳಗಾವಿ:
ಸರಕಾರ ಲಕ್ಷಾಂತರ ಕೋಟಿ ರೂ. ಬಜೆಟ್ ಘೋಷಣೆ ಮಾಡಲಿಕ್ಕೆ ಮುಂದಾಗಬೇಕಾದರೆ, ಇದರ ಹಿಂದೇ ಸರಕಾರಿ ನೌಕರರ ಸಂಘಟನೆ ಶ್ರಮವಿದೆ. ಎನ್‌ಪಿಎಸ್ ರದ್ದತಿ ಹಾಗೂ ಕೇಂದ್ರ ಸರಕಾರದ ಸಮಾನ ವೇತನ ರಾಜ್ಯ ಸರಕಾರ ನೌಕಕರಿಗೆ ನೀಡಬೇಕಿದೆ. ಸಂಘಟನೆಯನ್ನು ಸದೃಢ, ಪ್ರಬಲತೆ ಕಾಯ್ದುಕೊಂಡು ಹೋದರೆ ಇವೆಲ್ಲವೂ ಈಡೇರಿಸಿಕೊಳ್ಳಬಹುದು ಎಂದು ಕರ್ನಾಟಕ ರಾಜ್ಯ ನೌಕರರ ಕೇಂದ್ರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಹೇಳಿದರು.
ಇಲ್ಲಿನ ಸಿಪಿಇಡ್ ಆವರಣದಲ್ಲಿ ಶನಿವಾರ ಕರ್ನಾಟಕ ರಾಜ್ಯ ನೌಕರರ ಕೇಂದ್ರ ಸಂಘದ ಜಿಲ್ಲಾ ಶಾಖೆಯಿಂದ ಆಯೋಜಿಸಿದ ಸರಕಾರಿ ನೌಕರರ ಹಾಗೂ ಶಿಕ್ಷಕರೊಂದಿಗೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ,
ನಾಡಿನಲ್ಲಿ ನೂರಾರು ಸಂಘಟನೆಗಳಿವೆ ಆದರೆ, ಸರಕಾರ ಮಾತ್ರ ಸರಕಾರಿ ನೌಕರರ ಸಂಘಟನೆಗೆ ಮಾತ್ರ ಗೌರವ, ಸ್ಪಂದನೆ ನೀಡುತ್ತದೆ ಅದಕ್ಕಾಗಿ ಸರಕಾರದ ವಿಶ್ವಾಸ, ಗೌರವವನ್ನು ಬೆಳೆಸಿಕೊಂಡು ಹೋಗುವುದು ಸಂಘಟನೆ ಮೇಲಿನ ಜವಾಬ್ದಾರಿ. ಸರಕಾರ ಈಗಾಗಲೇ ನೌಕರರ ಸೌಲಭ್ಯಗಳನ್ನು ಕಲ್ಪಿಸುವ ಕಾರ್ಯಮಾಡುತ್ತಿದೆ. ನಮ್ಮ ಬೇಡಿಕೆ, ಹಿತಾಸಕ್ತಿ ಕಲ್ಯಾಣ ಕರ್ನಾಟಕಕ್ಕೆ ಮುಡಿಪಾಡಿಗಿರಬೇಕು. ನಮ್ಮ ಸಂಘಟನೆ ಸದೃಢವಾದಾಗ ಮಾತ್ರ ಸೌಲಭ್ಯಗಳನ್ನು ನೇರವೇರಿಸಿಕೊಳ್ಳಲು ಸಾಧ್ಯ ಕೊಂಚ ಹಿನ್ನಡೆ ಕಂಡರು ಕೆಳಾಧಿಕಾರಿಗಳು ಗೌರವ ನೀಡುವುದಿಲ್ಲ ಎಂದು ಸೂಚನೆ ನೀಡಿದರು.
ರಾಜ್ಯದಲ್ಲಿ ಬಲಿಷ್ಠವಾಗಿ ಬೆಳೆದ ಸಂಘನೆ ನೌಕರರ ಸಂಘ ಇದರ ಸದುಪಯೋಗ ಪಡೆದು ಸರಕಾರ ನೌಕರರ ಕ್ಷೇಮಾಭಿವೃದ್ಧಿಗೆ ಶ್ರಮಿಸಬೇಕಾಗಿದೆ.
ಸರಕಾರ ೭೮ ಇಲಾಖೆಯಲ್ಲಿ ಲಕ್ಷಾಂತರ ನೌಕರರು ಸೇವೆ ಸಲ್ಲಿಸುತ್ತಿದ್ದಾರೆ. ಇವರ ಕಷ್ಟ, ವಿವಿಧ ಬೇಡಿಕೆ ಈಡೇರಿಸುವ ಹೊಣೆ ನಮ್ಮದು.
ಕೇವಲ ಒಂದು ವರ್ಷದಲ್ಲಿ ರಾಜ್ಯವನ್ನು ಎರಡು ಬಾರಿ ಪ್ರವಾಸ ಮಾಡಲಾಗಿದೆ. ಮೂರನೇ ಬಾರಿ ಪ್ರವಾಸದಿಂದ ನೌಕರರಲ್ಲಿ ನೂತನ ಮಂದಹಾಸ ಮೂಡಿದೆ.
ರಾಜ್ಯ ಸರಕಾರಿ ನೌಕರರ ಬದುಕನ್ನು ಹಸನಾಗಿಸಿ, ಭವಿಷ್ಯಕ್ಕೆ ಬೆಳಕಾಗುವ ನಿಟ್ಟಿನಲ್ಲಿ ಹಗಳಿರುಳು ಕೆಲಸ ಮಾಡುತ್ತಿದ್ದೆವೆ. ಸರಕಾರ ೪೦ ವರ್ಷಗಳ ಆದೇಶ ನೆನಗುದಿಗೆ ಬಿದ್ದಿತ್ತು ಅದನ್ನು ಕಾರ್ಯರೂಪಕ್ಕೆ ತರಲು ಈ ಸಂಘನೆ ಛಲಸಾಕ್ಷಿ ಎಂದರು.
ವಿವಿಧ ಇಲಾಖೆ ನೌಕರರಿಗೆ ಪ್ರಮೋಶನ್ ಇರಲಿಲ್ಲ. ಒಂದು ವರ್ಷದಲ್ಲಿ ೫೦ ಸಾವಿರ ಜನ ಸರಕಾರಿ ನೌಕರರಿಗೆ ಮುಂಬಡ್ತಿ ಕೊಡಲಾಗಿದೆ. ಎಲ್ಲಾ ಸಚಿವ,ಅಧಿಕಾರಿಗಳತ್ತ ನೌಕರರ ಸಮಸ್ಯೆಗೆ ಸ್ಪಂದಿಸುವ ಕಾರ್ಯದಲ್ಲಿ ತೊಡಗಿದ್ದವೆ ಇನ್ನು ಹೆಚ್ಚಿನ ಸೌಲಭ್ಯಕ್ಕಾಗಿ ಕಾರ್ಯಗತವಾಗಿ ಮುನ್ನಡೆ ಸಾಗೋಣ ಅದಕ್ಕೆ ನಿಮ್ಮ ಬೆಂಬಲ, ವಿಶ್ವಾಸ ಅಗತ್ಯ ಎಂದು ಮನವಿ ಮಾಡಿಕೊಂಡರು.
ಜಯಕುಮಾರ ಹೆಬಳಿ, ಜಗದೀಶಗೌಡಪ್ಪ ಪಾಟೀಲ,  ವಿವಿ ಶಿವರುದ್ರಯ್ಯ, ಆರ್ ಶ್ರೀನಿವಾಸ್, ಮಲ್ಲಿಕಾರ್ಜುನ ಬಳ್ಳಾರಿ, ಸುರೇಶ ಶೆಡಶ್ಯಾಳ, ಶಂಭುಲಿAಗನೌಡ ಪಾಟೀಲ, ಪ್ರಾರ್ಥನೆ, ನಾಡಗೀತೆ ಶಿಕ್ಷಕಿ ಎಮ್ ಸುಧಾ, ಮಹೇಶ ಚನ್ನಂಗಿ ನಿರೂಪಿಸಿದರು. ಶಂಕರ ಗೋಕಾವಿ ವಂದಿಸಿದರು. ಹಾಗೂ ಇತರರು ಇದ್ದರು.

loading...