ಸರಕಾರ ರಚನೆಗೆ ಕಾರಣರಾದ ಶಾಸಕರನ್ನು ಸಚಿವ ಸ್ಥಾನದಿಂದ ಕೈ ಬಿಡಲ್ಲ: ಸಚಿವ ಜಾರಕಿಹೊಳಿ

0
46

 

ಬೆಳಗಾವಿ

ಸರಕಾರದ ರಚನೆಗೆ ಕಾರಣರಾದ ಯಾವುದೇ ಶಾಸಕರನ್ನು ಸಚಿವ ಸ್ಥಾನದಿಂದ ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.

ಬುಧವಾರ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಲಿರುವ ಜನಸೇವಕ ಸಮಾವೇಶದ ಪೂರ್ವ ಸಿದ್ದತೆಯನ್ನು ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.

ಹುಕ್ಕೇರಿಯ ಹಿರಿಯ ಶಾಸಕ ಉಮೇಶ ಕತ್ತಿಗೆ ಸಚಿವ ಸಿಕ್ಕಿದು ಸಂತೋಷವಾಗಿದೆ. ಸಂದರ್ಭ ಅನುಗುಣವಾಗಿ ಬೆಳಗಾವಿ ಜಿಲ್ಲೆಗೆ ಹೆಚ್ಚಿನ ಸಚಿವ ಸ್ಥಾನ ಸಿಕ್ಕಿದೆ ಸಹಕರಿಸಬೇಕು ಎಂದು ಶಾಸಕ ರೇಣುಕಾಚಾರ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು‌.

ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆಗೆ ಕಾರಣರಾದ ಯಾವುದೇ ಶಾಸಕರನ್ನು ಸಚಿವ ಸ್ಥಾಮದಿಂದ ಕೈ ಬಿಡಲ್ಲ.
ಆದರೆ ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ ಗೆ ಕಾನೂನು ತೊಡಕು ಇದೆ. ಅವರು ಸಹಕರಿಸಬೇಕು.
-ಕಲಬುರ್ಗಿ ಪ್ರಭಾವಿ ನಾಯಕ ಮಾಲೀಕಯ್ಯ ಗುತ್ತಿಗೆದಾರರ ಅವರಿಗೆ ಇನ್ನಷ್ಟು ಸ್ಥಾನಮಾನ ಸಿಗಬೇಕು. ಅವರು ನನಗಿಂತ ಬಲಿಷ್ಠರಿದ್ದಾರೆ ಅವರಿಗೆ ಸಚಿವ ಸ್ಥಾನ ನೀಡಿದರೆ ತುಂಬಾ ಸಂತೋಷ ವಿಷಯ. ನಮಗಿಂತಲೂ ಬಲಿಷ್ಠ ನಾಯಕ ಗುತ್ತೆದಾರ ಎಂದರು.
ಜಿಪಂ,ತಾಪಂ ಚುನಾವಣೆ ಬಳಿಕ ಸಚಿವ ಸಂಪುಟ ಮತ್ತೊಮ್ಮೆ ವಿಸ್ತರಣೆ ಆಗಲಿದೆ. ಆ ವೇಳೆ ವಂಚಿತರಿಗೆ ಸಚಿವ ಸ್ಥಾನ ಸಿಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಿಡಿಸಿದರು.

ಬಿಜೆಪಿ ಪಕ್ಷಕ್ಕೆ ಬಂದ ಬಳಿಕ ಹೊಸ ಅನುಭವ ಉಂಟಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಪ್ರತಿಯೊಂದು ಸಭೆ, ಸಮಾರಂಭಗಳನ್ನು ನಡೆಸಬೇಕಾದರೆ ನಾವೆ ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡಬೇಕಾಗಿತ್ತು.ಆದರೆ ಬಿಜೆಪಿ ಪಕ್ಷದಲ್ಲಿ ಕಾರ್ಯಕರ್ತರೇ ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡುತ್ತಾರೆ. ಹಾಗಾಗಿ ಇಲ್ಲಿ ಯಾವುದೇ ಸಮಸ್ಯೆ ಇಲ್ಲ. ಇದೊಂದು ರೀತಿ ಹೊಸ ಅನುಭವ ತಂದಿದೆ.
ಪಕ್ಷ ಸಂಘಟನೆ ಇರುವುದರಿಂದ ಸಮಾರಂಭಗಳ ಆಯೋಜಿಸಲು ಯಾವುದೇ ಸಮಸ್ಯೆ ಇಲ್ಲ. ಇದೊಂದು ಖಷಿ ತಂದಿದೆ ಎಂದರು.
ಜ.17 ರಂದು ಜನಸೇವಕ ಸಮಾವೇಶದ ಮುಖ್ಯ ಅತಿಥಿಯಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯದ ಜನತೆಗೆ ಸಂದೇಶ ನೀಡಲು ಆಗಮಿಸಲಿದ್ದಾರೆ. ಆದ್ದರಿಂದ ನಾಲ್ಕು ಲಕ್ಷ ಜನ ಕಾರ್ಯಕರ್ತರು ಆಗಮಿಸಲಿದ್ದಾರೆ. ಅಲ್ಲದೆ ಸಿಎಂ, ಸಚಿವ,‌ಶಾಸಕರು ಆಗಮಿಸಲಿದ್ದಾರೆ ಎಂದು ಹೇಳಿದರು.
ಶಾಸಕ ಮಹೇಶ ಕುಮಠಳ್ಳಿ, ಬೆಳಗಾವಿ ಬಿಜೆಪಿ ಗ್ರಾಮೀಣ ಘಟಕದ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ, ನಗರ ಘಟಕದ ಜಿಲ್ಲಾಧ್ಯಕ್ಷ ಶಶಿ ಪಾಟೀಲ, ಧನಂಜಯ ಜಾಧವ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

 

loading...