ಸರಕಾರ ಲಿಂಗಾಯತರ ಋಣಬಾರ ಇಳಿಸಲಿ: ಶ್ರೀ

0
10

೨ಎ ಮೀಸಲಾತಿಗಾಗಿ ಲಿಂಗಾಯತರಿAದ ಸತ್ಯಾಗ್ರಹ ನಾಳೆ
ಸರಕಾರ ಲಿಂಗಾಯತರ ಋಣಬಾರ ಇಳಿಸಲಿ: ಶ್ರೀ
ಬೆಳಗಾವಿ:
ಕೃಷಿ ಕಾರ್ಮಿಕ ಲಿಂಗಾಯತ ಸಮುದಾಯಕ್ಕೆ ಮೀಸಲಾತಿ ಒದಗಿಸಿ, ೨ಎಗೆ ಸೇರ್ಪಡೆ ಮಾಡುವಂತೆ ಬುಧವಾರ ೨೮ ರಂದು ಸುವರ್ಣ ಸೌಧ ಎದುರು ಸತ್ಯಾಗ್ರಹ ಮಾಡಲಾಗುವುದು ಪಂಚಮ ಪೀಠದ ಶ್ರೀ ಬಸವ ಜಯಮೃತುಂಜಯ ಮಹಾಸ್ವಾಮಿಗಳು ಹೇಳಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ದಿವ್ಯ ಸಾನಿದ್ಯ ವಹಿಸಿ ಅವರು ಮಾತನಾಡಿ, ಕೃಷಿ ಕಾಯಕ ಮೇಲೆ ಅವಲಂಬಿತವಾಗಿರುವ ಲಿಂಗಾಯತ ಸಮುದಾಯವರು ಇಲ್ಲಿವರೆಗೂ ಸರಕಾರದಿಂದ ಯಾವುದೇ ಸೌಲಭ್ಯ ಹಾಗೂ ಮೀಸಲಾತಿ ಪಡೆದಿಲ್ಲ, ಉದ್ಯೋಗ, ಮಕ್ಕಳ ಭವಿಷ್ಯಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರಕಾರ ಲಿಂಗಾಯತ ಸಮುದಾಯವನ್ನು ೨ಎಗೆ ಸೇರಿಸಬೇಕೆಂದು ಶಾಂತಿಯುತ ಹೋರಾಟ ಮಾಡಲಾಗುವುದು ಎಂದರು.
ಹೆಸರಿಗೆ ಮಾತ್ರ ದೊಡ್ಡ ಜನಸಂಖ್ಯೆ ಒಳಗೊಂಡಿರುವ ಲಿಂಗಾಯತ ಜನರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಇವರ, ಏಳಿಗೆಗಾಗಿ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ ಆಗಬೇಕು.
ಲಿಂಗಾಯತ ಉಪ ಪಂಗಡಗಳನ್ನು ೨ಎ ಮೀಸಲಾತಿ ಪಡೆದುಕೊಂಡು ಅಭಿವೃದ್ದಿಯಾಗಿವೆ. ಮೊದಲ ಅಧಿವೇಶನದಲ್ಲಿ ಆಗಿನ ಮುಖ್ಯಮಂತ್ರಿಯಾಗಿದ್ದ ವೀರಪ್ಪ ಮೂಯಲಿವಯರಿಗೆ ಲಿಂಗಾಯತ ಮೀಸಲಾತಿ ಸಂಭAದಿಸಿದAತೆ ಮನವಿ ಸಲ್ಲಿಸಲಾಯಿತು.
ಪಂಚಮಸಾಲಿ ಸಮಾಜವರಿಗೂ ರಾಜ್ಯ ಸರಕಾರದ ೧೫ ರ ಪ್ರವರ್ಗ ೨ಎ ಮೀಸಲಾತಿ ಬೇಕೆಂದು ಶ್ರೀ ಪಿಠದಿಂದ ಕಳೆದ ಎರಡು ದಶಕದಿಂದ ನಿರಂತರ ಹೋರಾಟ ಮಾಡಿ, ಹಕ್ಕೊತ್ತಾಯನ್ನು ವೇದಿಕೆ ಕೇಳಲಾಗಿದೆ.
ಪಂಚಮ ಪಿಠದಿಂದ ಉಗ್ರಹೋರಾಟ ಮಾಡುವ ಮೂಲಕ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲಾಗಿತ್ತು. ಆಗಿನ ಸಿಎಂ ಜಗದೀಶ ಶೆಟ್ಟರ್ ಸರಕಾರ ಲಿಂಗಾಯತರಿಗೆ ೨ಎ ಮೀಸಲಾತಿ ಒಗದಿಸಲು ಕ್ಯಾಬಿನೆಟ್ ರಚನೆಯಾಗಿ ಸರಕಾರ ಶಿಪಾರಸು ಮಾಡಿತ್ತು. ಎಂಟು ವರ್ಷ ಕಳೆದರೂ ಬೇಡಿಕೆ ನೆನಗುದ್ದಿಗೆ ಬಿದ್ದಿದೆ. ಮೀಸಲಾತಿ ನೀಡುವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದರು.
೨೦೦೯ ರಲ್ಲಿ ಸಿಎಂ ಆಗಿದ್ದ ಯಡಿಯೂರಪ್ಪನವರು ಲಿಂಗಾಯತ ಸಮುದಾಯವನ್ನು ೩ಬಿ ಪಟ್ಟಿಯಲ್ಲಿ ಸೇರ್ಪಡೆ ಮಾಡಿದರು. ಆದರೂ ಸರಕಾರ ಇಲ್ಲಿವರೆಗೂ ಸುತ್ತೋಲೆ ಹೊರಡಿಸಿಲ್ಲ. ಎಲ್ಲಾ ಸರಕಾರ ಲಿಂಗಾಯರನ್ನು ಗಡೆಗಣಿಸಿವೆ ಎಂದು ಅಸಮಾದಾನ ವ್ಯಕ್ತಪಡಿಸಿದರು.
ಜಿಲ್ಲೆ, ರಾಜ್ಯದಲ್ಲಿ ಸುಮಾರು ಶೇ ೭೦ ರಷ್ಟು ಲಿಂಗಾಯತ ಸಮುದಾಯವಿದೆ. ರಾಜ್ಯ ಸರಕಾರದ ೨ಎ ಮೀಸಲಾತಿ, ಹಾಗೂ ಕೇಂದ್ರದಲ್ಲಿ ಓಬಿಸಿ ಮೀಸಲಾತಿಗೆ ಸೇರ್ಪಡೆಗೊಳಿಸಬೇಕೆಂದು ಲಕ್ಷಾಂತರ ಲಿಂಗಾಯತ ಸಮುದಾಯ ಸರಕಾರಕ್ಕೆ ಆಗ್ರಹ ಮಾಡಲಾಗುವುದು ಎಂದರು.
ಲಿAಗಾಯತ ಧರ್ಮದರ್ಶಿ ಹಾಗೂ ನ್ಯಾಯವಾದಿಗಳಾದ ಬಸವರಾಜ ರೊಟ್ಟಿ, ರೋಹಿಣಿ ಪಾಟೀಲ, ಡಿ ಆರ್.ಪಾಟೀಲ, ರಾಜು ಮಗದುಮ್ಮ, ಎಮ್ ಎಸ್ ವಾಲಿ, ಈಶ್ವರ ಬಾಗೋಜಿ, ಸೋಮಶೇಖರ್ ಅಲಿಯಾಳ, ರುದ್ರಣ್ಣ ಚಂದರಗಿ, ರಾಮನಗೌಡ ಪಾಟೀಲ, ಪ್ರಕಾಶ ಬಾಗೋಜಿ ಹಾಗೂ ಇತರರು ಇದ್ದರು.
೦೧
*****-

loading...