ಸರ್ಕಾರದ ಸೌಲಭ್ಯ ನೀಡುತ್ತಿಲ್ಲ ಎಂದು ಆರೋಪಿಸಿ ಪೌರ ಕಾರ್ಮಿಕರ ಪ್ರತಿಭಟನೆ

0
19

ಕನ್ನಡಮ್ಮ ಸುದ್ದಿ-ಗಜೇಂದ್ರಗಡ: ಕಳೆದ ಕೆಲ ವರ್ಷಗಳಿಂದ ವಿತರಿಸಬೇಕಿದ್ದ ಸಮವಸ್ತ್ರ, ಗೌರವದನ ಹಾಗೂ ಆರೋಗ್ಯ ತಪಾಸಣೆ ಸರಿಯಾಗಿ ಮಾಡಿಸುತ್ತಿಲ್ಲ ಎಂದು ಆರೋಪಿಸಿ ಪೌರ ಕಾರ್ಮಿಕರು ಪುರಸಭೆ ಆವರಣದಲ್ಲಿ ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ನಡೆಯಿತು.
ಈ ಹಿಂದೆ ಪುರಸಭೆ ರಾಮಚಂದ್ರ ಕೊಡುಗೆ ಅವರಯ ಪುರಸಭೆ ಮುಖ್ಯಾಧಿಕಾರಿ ಆಗಿದ್ದ ಸಂದರ್ಭದಲ್ಲಿ ಪ್ರತಿ ವರ್ಷಕೊಮ್ಮೆ ಪೌರ ಕಾರ್ಮಿಕರಿಗೆ ಸಮವಸ್ತ್ರ ಹಾಗೂ ಹತ್ತು ವರ್ಷಗಳ ಕಾಲ ಪುರಸಭೆಯಲ್ಲಿ ಸೇವೆ ಸಲ್ಲಿಸಿದ ಕಾರ್ಮಿಕರಿಗೆ ಗೌರವಧನ ನೀಡುವುದರ ಜೊತೆಗೆ ನಮ್ಮೆಲ್ಲರ ಆರೋಗ್ಯ ತಪಾಸಣೆ ಮಾಡಿಸಲು ಮುಂದಾಗಿದ್ದರು. ಆದರೆ ಪುರಸಭೆ ಮುಖ್ಯಾಧಿಕಾರಿಯಾಗಿ ಹನಮಂತಮ್ಮ ನಾಯಕ ಅವರು ಬಂದ ಮೊದಲ ವರ್ಷ ಮಾತ್ರ ನಮಗೆ ಸಮವಸ್ತ್ರಗಳನ್ನು ನೀಡಿದ್ದು ಹೊರತು ಪಡಿಸಿದರೆ ಈವರೆಗೂ ಸಹ ನಮಗೆ ಸಮವಸ್ತ್ರ ನೀಡಿಲ್ಲ ಎಂದು ಪೌರ ಕಾರ್ಮಿಕರು ದೂರಿದರು.

ಪಟ್ಟಣದ ಸ್ವಚ್ಚ ಹಾಗೂ ಸುಂದರವಾಗಿಡಲು ಶ್ರಮಿಸುತ್ತೇವೆ. ಹೀಗಾಗಿ ಸರ್ಕಾರವು ಹತ್ತು ವರ್ಷಗಳ ಕಾಲ ಪುರಸಭೆಯಲ್ಲಿ ಸೇವೆ ಸಲ್ಲಿಸುವ ಪೌರ ಕಾರ್ಮಿಕರಿಗೆ 1 ಸಾವಿರ ಗೌರವಧನ ಹೆಚ್ಚಿಗೆ ನೀಡಬೇಕು ಎಂದಿದೆ. ಆದರೆ ಹತ್ತು ವರ್ಷ ಸೇವೆ ಪೂರೈಸಿರುವ ಕಾರ್ಮಿಕರಿಗೆ ಈವರೆಗೂ ಸಹ ಹೆಚ್ಚಿಗೆ ನೀಡಬೇಕಿದ್ದ ಗೌರವಧನ ನೀಡದಿರುವುದು ಒಂದೆಡೆಯಾದರೆ ಇತ್ತ ಕಳೆದ ಒಂದು ವರ್ಷದಿಂದ ನಮ್ಮ ಆರೋಗ್ಯ ತಪಾಸಣೆ ಮಾಡಿಸಿಲ್ಲ. ಅಲ್ಲದೆ ಕಳೆದ ಜನವರಿ 26 ರಂದು ಸಾಂಕೇತಿಕವಾಗಿ ನಾಲ್ಕು ಮಹಿಳೆಯರಿಗೆ ನೀಡಿದ್ದ ಸಮವಸ್ತ್ರದ ಸೀರೆಗಳ ಬಣ್ಣ ಸರಿಯಿಲ್ಲ ಎಂದಾಗ ಅಧಿಕಾರಿಗಳು ಬೇರೆ ಸೀರೆಗಳನ್ನು ನೀಡುತ್ತೇವೆ ಎಂದು ಮರಳಿ ಪಡೆದಿದ್ದ ಸಮವಸ್ತ್ರಗಳನ್ನು ಹಿಂದಿರುಗಿಸಿಲ್ಲ. ಪ್ರಶ್ನಿಸಿದರೆ ಸೀರೆಗಳು ಬಂದಿಲ್ಲ ಎಂದು ಜಾರಿಕೊಳ್ಳುತ್ತಿದ್ದಾರೆ. ಹೀಗಾಗಿ ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ನಮಗೆ ನ್ಯಾಯ ಒದಗಿಸಿಕೊಡಬೇಕು ಎಂದು ಪಟ್ಟು ಹಿಡಿದರು.
ಪೌರ ಕಾರ್ಮಿಕರನ್ನು ಕಚೇರಿಗೆ ಕರೆಸಿಕೊಂಡ ಪುರಸಭೆ ಮುಖ್ಯಾಧಿಕಾರಿ ಹನಮಂತಮ್ಮ ನಾಯಕ ಅವರು, ಪೌರ ಕಾರ್ಮಿಕರಿಗೆ ನಾಳೆ ಬೆಳಿಗ್ಗೆ ಸರ್ಕಾರಿ ಆಸ್ಪತ್ರೆಯ ವೈದ್ಯರಿಂದ ಆರೋಗ್ಯ ತಪಾಸಣೆ ನಡೆಸುವಂತೆ ಪತ್ರ ಬರೆಯುತ್ತೇನೆ. ಅಲ್ಲದೆ ಸರ್ಕಾರದ ಎಲ್ಲ ಸೌಲಭ್ಯಗಳನ್ನು ಅರ್ಹ ಪೌರ ಕಾರ್ಮಿಕರಿಗೆ ತಲುಪಿಸುತ್ತಾ ಬರಲಾಗುತ್ತಿದೆ. ಹೀಗಾಗಿ ನಿಯಮಗಳನ್ನು ಉಲ್ಲಂಘಿಸಿದರೆ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಪತ್ರ ಬರೆಯುತ್ತೇನೆ ಎಂದರು. ಆದರೆ ಮುಖ್ಯಾಧಿಕಾರಿ ಅವರ ಮಾತಿಗೆ ಬಗ್ಗದ ಪೌರ ಕಾರ್ಮಿಕರು ಪುರಸಭೆ ಆವರಣದಲ್ಲಿ ಮತ್ತೆ ಪ್ರತಿಭಟನೆ ಮುಂದುವರೆಸಿದರು.

loading...