ಸರ್ಕಾರಿ ಶಾಲೆಯನ್ನು ಹೈಟೆಕ್ ಶಾಲೆಯನ್ನಾಗಿ ಪರಿವರ್ತಿಸಿದ ಶಿಕ್ಷಕರು

0
14

ಕನ್ನಡಮ್ಮ ಸುದ್ದಿ-ಸವಣೂರ: ಸರ್ಕಾರಿ ಶಾಲೆಗಳು ಖಾಸಗಿ ಶಾಲೆಯ ಬೆನ್ನು ಮೇಲೆ ಹೊಡೆಯುವ ನಿಟ್ಟಿನಲ್ಲಿ ಹೊನ್ನಿಕೊಪ್ಪ ಗ್ರಾಮಸ್ಥರು ಮಕ್ಕಳ ವಿದ್ಯಾರ್ಜನೆಗಾಗಿ ಸ್ವಂತ ಹಣ ಬಳಕೆ ಮಾಡಿಕೊಂಡು ಗ್ರಾಮದಲ್ಲಿ ಹೈಟೆಕ್ ಶಾಲೆಯನ್ನಾಗಿ ಪರಿವರ್ತಿಸಿ ರೈಲಿನಲ್ಲಿ ಪ್ರಯಾಣಿಸುವಂತೆ ಆಕರ್ಷಣೆಗೆ ಒಳಪಡಿಸಿ ಮಕ್ಕಳನ್ನು ವಿದ್ಯಾರ್ಜನೆಗೆ ಕೈ ಬೀಸಿ ಕರೆಯುವಂತಾಗಿದೆ.
ತಾಲೂಕಿನ ಹೊನ್ನಿಕೊಪ್ಪ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿನೂತನ ಪ್ರಯೋಗವನ್ನು ಉಪಯೋಗ ಮಾಡಿಕೊಳ್ಳಲು ನೂಡಲ್ ಅಧಿಕಾರಿ ಆಯ್.ಬಿ.ಬೆನಕೊಪ್ಪ ಇವರ ಮಾರ್ಗದರ್ಶನದಲ್ಲಿ ಶಾಲಾ ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರನ್ನು ಶಾಲೆಗೆ ಆಹ್ವಾನಿಸಿ ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಪಾಲಕರು ಹಾಗೂ ಎಸ್‍ಡಿಎಂಸಿ ಆಡಳಿತ ಮಂಡಳಿಯವರು ಸರ್ಕಾರದ ಜೊತೆ ಕೈಜೋಡಿಸಿದರೆ ತಾಲ್ಲೂಕಿನಲ್ಲಿಯೆ ವಿಭಿನ್ನವಾದ ಹಾಗೂ ವಿನೂತನವಾದ ಶಾಲಾ ನಿರ್ಮಾಣ ಮತ್ತು ಮಕ್ಕಳ ಕಲಿಕೆಗೆ ಹೈಟೆಕ್ ಸಾಮಾಗ್ರಿಗಳನ್ನು ಖರೀದಿಸಿ ಮಕ್ಕಳು ಶಾಲೆಗೆ ದಿನನಿತ್ಯ ಹೆಚ್ಚು ಹೆಚ್ಚು ಆಕರ್ಷಿತಗೊಳ್ಳುವಂತೆ ಶಾಲೆಗೆ ಬಣ್ಣ ಕಲಿಕೆಗೆ ಬೇಕಾಗುವ ಕಂಪ್ಯೂಟರ್, ಡಿಜಿಟಲ್ ಶಿಕ್ಷಣದ ಸಾಮಾಗ್ರಿ ಖರೀದಿಸಿ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಗ್ರಾಮಸ್ಥರು ಪಾಲ್ಗೊಳ್ಳಬೇಕು ಎಂದು ಕರೆ ನೀಡಿದಾಗ ಗ್ರಾಮಸ್ಥರು ಸಭೆಯಲ್ಲಿ ಒಕ್ಕೊರಿಲಿನಿಂದ ಧಾನಿಗಳಾಗಿ ಹುಬ್ಬಳ್ಳಿಯ ಈರಯ್ಯ ಹಿರೇಮಠ 20 ಸಾವಿರ ಘೋಷಿಸಿದರೆ, ಮಣ್ಣೂರ ಗ್ರಾಮದ ಪುಟ್ಟಪ್ಪ ಚನ್ನಪ್ಪ ಹೊಸಮನಿ ಅವರು ಕೂಡಾ 20 ಸಾವಿರ, ಮೈಸೂರ ನಿವಾಸಿಯಾದ ಕೆ.ರತೀಶ 20 ಸಾವಿರ, ಗುಡ್ಡದ ಹುಲಿಕಟ್ಟಿಯ ಸಂತೋಷ ಕೆಳದಿಮಠ 8 ಸಾವಿರ, ಮುಳಗುಂದದ ನೀಲಮ್ಮ ನೀಲಗುಂದ 8 ಸಾವಿರ, ಹೂವಿನಶಿಗ್ಲಿಯ ಎನ್.ವಿ.ಕೊಳ್ಳಿ ಪ್ರಧಾನಗುರುಗಳು 8 ಸಾವಿರ ದೇಣಿಗೆಯನ್ನು ನೀಡಿ ಇನ್ನೂ ಹಲವಾರು ಮಹನಿಯರು ದೇಣಿಗೆಯನ್ನು ನೀಡಿ ಗ್ರಾಮದ ಸರ್ಕಾರಿ ಶಾಲೆಯನ್ನು ಹೈಟೆಕ್ ಶಾಲೆಯನ್ನಾಗಿ ಪರಿವರ್ತಿಸಿ ತಾಲೂಕಿನಾದ್ಯಂತ ಹೆಸರನ್ನು ಅಜರಾಮರವಾಗಿ ಉಳಿಯುವಂತೆ ಪ್ರೇರೆಪಣೆ ನೀಡಿ ಶಿಕ್ಷಕರನ್ನು ಹುರುದುಂಬಿಸುತ್ತ ಶಾಲೆಗಾಗಿ ಸಾರ್ಥಕ ಸೇವೆಯನ್ನು ನೀಡುವಂತೆ ಪ್ರೇರೆಪಿಸುತ್ತಿದ್ದಾರೆ. ನೂಡಲ್ ಅಧಿಕಾರಿ ಆಯ್.ಬಿ.ಬೆನಕೊಪ್ಪ ಅವರು ಯಲವಗಿ ಕ್ಲಷ್ಟರ್‍ನಲ್ಲಿಯೆ ಮಾದರಿ ಶಾಲೆಯನ್ನಾಗಿ ಪರಿವರ್ತನೆ ಮಾಡುವ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಜೊತೆ ಸಂವಾದ ಕೈಗೊಂಡು ಎಸ್‍ಡಿಎಂಸಿ ಅದ್ಯಕ್ಷ ಮಹಾಂತೇಶ ಮಲ್ಲಮ್ಮನವರ ಹಾಗೂ ಮುಖ್ಯೋಪಾದ್ಯಯ ಎಂ.ಸಿ.ಕಳ್ಳಿಮಠ ಮತ್ತು ಸದಸ್ಯರು, ಶಿಕ್ಷಕ ಬಳಗದವರು, ಶಿಕ್ಷಣ ಪ್ರೇಮಿಗಳು, ಮಾತೆಯರು ಸಭೆಯಲ್ಲಿ ನಿರ್ಣಯ ಕೈಗೊಂಡು ಶಾಲೆಗೆ ಬೇಕಾದ ಮೂಲಭೂತ ಸಂಪನ್ಮೂಲಗಳನ್ನು ಕ್ರೂಡಿಕರಿಸಲು ಆರ್ಥಿಕ ನೆರವನ್ನು ನೀಡಿ ಶಾಲೆಯನ್ನು ಡಿಜಿಟಲ್-ಹೈಟೆಕ್ ಶಾಲೆಯನ್ನಾಗಿ ಮಾಡಲು ಹಗಲಿರಳು ಶ್ರಮಿಸುತ್ತಿರುವದು ಶ್ಲಾಘನೀಯವಾಗಿದೆ.ನಮ್ಮ ಶಾಲೆಯನ್ನು ಹೈಟೆಕ್ ಶಾಲೆಯನ್ನಾಗಿ ಮಾಡಿ ಗುಣಾತ್ಮಕ್ಕ ಶಿಕ್ಷಣಕ್ಕೆ ಪ್ರಯತ್ನಿಸುತ್ತಿರುವ ಎಲ್ಲ ಶಿಕ್ಷಕ ಬಳಗದವರಿಗೆ ಹಾಗೂ ಶಿಕ್ಷಣ ಪ್ರೇಮಿಗಳನ್ನು ಮತ್ತು ಭೂ ಧಾನಿಗಳನ್ನು, ಹೈಟೆಕ್ ಸಾಮಾಗ್ರಿಗಳ ಖರೀದಿಗೆ ಧಾನಿಗಳನ್ನು ಇದೆ ಅ.15 ರಂದು ಸನ್ಮಾನಿಸಲು ತಿರ್ಮಾನಿಸಲಾಗಿದ್ದು, ಈ ಶಾಲೆಯಲ್ಲಿ ಸೇವೆ ಸಲ್ಲಿಸಲು ಉತ್ಸುಕರಾಗಿ ಪ್ರೇರಣೆ ನೀಡಿದ ನೂಡಲ್ ಅಧಿಕಾರಿ ಹಾಗೂ ಗ್ರಾಮಸ್ಥರನ್ನು ತುಂಬುಹೃದಯದ ಅಭಿನಂದನೆ ಸಲ್ಲಿಸುತ್ತೇನೆ. ಮುಖ್ಯೋಪಾಧ್ಯಯ ಎಂ.ಸಿ.ಕಳ್ಳಿಮಠ.ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಶಾಲೆಗಳು ಇಂದು ನಶಿಸುವ ಹಂತ ತಲುಪಿದರು ಕೂಡಾ ಸರ್ಕಾರ ಖಾಸಗಿ ಶಾಲೆಗಳಿಗೆ ಅನುಮತಿಯನ್ನು ನೀಡುತ್ತಿರುವದು ವಿಷಾಧನೀಯ. ಖಾಸಗಿ ಶಾಲೆಗೆ ಬಡವರು ಹಣ ತುಂಬಿ ಶಿಕ್ಷಣ ಕೊಡಿಸುವಲ್ಲಿ ವಿಫಲರಾಗುತ್ತಾರೆ. ಆದರೆ, ನಮ್ಮ ಸರ್ಕಾರಿ ಶಾಲೆಯಲ್ಲಿ ಉತ್ಸುಕತೆಯಿಂದ ವಿದ್ಯಾರ್ಥಿಗಳಿಗೆ ವಿಧ್ಯಾರ್ಜನೆ ಮಾಡಲು ಸಾಕಷ್ಟು ಪರಿಶ್ರಮ ವಹಿಸುತ್ತಿರುವ ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ.
ಜ್ಯೋತಿ ಹರಿಜನ ಗ್ರಾಮದ ನಿವಾಸಿ.

loading...