ಸರ್ಕಾರಿ ಸ್ವಾಸ್ತ ಔಷಧಿ ಸ್ಟೊÃರ್ ಸ್ಥಗಿತ ಬಡವರ ಪರದಾಟ

0
10

ಸರ್ಕಾರಿ ಸ್ವಾಸ್ತ ಔಷಧಿ ಸ್ಟೊÃರ್ ಸ್ಥಗಿತ ಬಡವರ ಪರದಾಟ
ಘಟಪ್ರಭಾ: ಸ್ಥಳೀಯ ಸ್ವಾಸ್ತ ಔಷಧಿ ಸೇವಾ ಜನರಿಕ್ ಮೆಡಿಕಲ್ ಸ್ಟೊÃರ್ ಕಳೆದ ಎರಡು ತಿಂಗಳಿಂದ ತನ್ನ ಕಾರ್ಯವನ್ನು ಸ್ಥಗಿತಗೊಳಿಸಿದೆ.
ಬಡವರ ಆರೋಗ್ಯ ದೃಷ್ಠಿಯಿಂದ ಕೇಂದ್ರ ಸರ್ಕಾರವು ಜನರಿಕ್ ಮೇಡಿಕಲ್ ಸ್ಟೊÃರ್‌ಗಳನ್ನು ತೆರೆದು ಜನರಿಗೆ ಕಡಿಮೆ ದರದಲ್ಲಿ ಔಷಧಿಗಳು ದೊರೆಯುವಂತೆ ಮಾಡಿದೆ. ಇದರಿಂದ ಅನೇಕ ಬಡಜನರಿಗೆ ಅನುಕೂಲ ಕೂಡಾ ಆಗಿದೆ.
ಆದರೆ ಘಟಪ್ರಭಾದಲ್ಲಿ ಕಾರ್ಯನಿವಹಿಸುತ್ತಿದ್ದ, ಸ್ವ್ವಾಸ್ತ ಔಷಧಿ ಸೇವಾ ಜನರಿಕ್ ಮೇಡಿಕಲ್ ಸ್ಟೊÃರ್ ಕಳೆದ ಎರಡು ತಿಂಗಳಿ ಬಂದ ಆಗಿದ್ದು, ಜನರು ಔಷಧಿಗಳಿಗಾಗಿ ಪರದಾಡುವಂತಾಗಿದೆ.
ಇಲ್ಲಿ ಔಷಧಿಗಳನ್ನು ಖರೀದಿಸುತ್ತಿದ್ದ ಜನರು ಔಷಧಿಗಳನ್ನು ಪಡೆಯಲು ದಿನನಿತ್ಯ ಅಲೆದಾಡುತ್ತಿದ್ದಾರೆ. ಅಂಗಡಿಯನ್ನು ಯಾವ ಕಾರಣಕ್ಕೆ ಬಂದ ಮಾಡಲಾಗಿದೆ ಎಂಬುದನ್ನು ಸ್ಪಷ್ಟ ಪಡಿಸದೇ ಮಾಲೀಕರು ಬಂದು ಮಾಡಿರುವುದು ಜನರಲ್ಲಿ ಗೊಂದಲ ಮೂಡಿಸಿದೆ.
ಸಂಬಂದಿಸಿದ ಅಧಿಕಾರಿಗಳು ಕೂಡಲೇ ಜನರಿಕ ಔಷಧಿ ಅಂಗಡಿಯನ್ನು ಪ್ರಾರಂಭಿಸಬೇಕೆಂದು ಗ್ರಾಹಕರಾದ ಯಲ್ಲಪ್ಪಾ ಮಾಕನ್ನವರ ಹಾಗೂ ಹಣಮಂತ ಭಜಂತ್ರಿ ಆಗ್ರಹಿಸಿದ್ದಾರೆ.

loading...