ಕುಂದಗೋಳ,30: ಶೆರೆವಾಡ -ಸವಣೂರ ರಸ್ತೆಯ ಡಾಂಬರೀಕರಣಕ್ಕೆ ಗುರುವಾರ ಭೂಮಿ ಪೂಜೆ ನೆರವೇರಿಸಿದ ಶಾಸಕ ಸಿ.ಎಸ್.ಶಿವಳ್ಳಿ ಸುಮಾರು 2ಕೋಟಿ ರೂ,ವೆಚ್ಚದಲ್ಲಿ 3.3 ಕೀ,ಮೀ ರಸ್ತೆಯ ನಿರ್ಮಾಣ ಕಾರ್ಯದ ಜತೆಗೆ ಇನ್ನುಳಿದ ಕಾಮಗಾರಿಗೂ ಸಹ ಶೀಘ್ರದಲ್ಲಿಯೇ ಹಣಕಾಸು ನೆರವು ಕಲ್ಪಿಸುವುದಾಗಿ ತಿಳಿಸಿದರು.
ತಾಲೂಕಿನ ಇನಾಂ ಕೊಪ್ಪ ಕ್ರಾಸ್ ಬಳಿ ರಸ್ತೆ ಡಾಂಬರೀಕರಣಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಂಗಳಗಿ, ಹಿರೇಬೂದಿಹಾಳ, ಕುಬಿಹಾಳ, ಬೆಟದೂರ ಸಹಿತ ಈ ಭಾಗದ ಅನೇಕ ಗ್ರಾಮಸ್ಥರಿಗೆ ಅನುಕೂಲಕರವಾಗುವ ಸವಣೂರ ಶೆರೆವಾಡ ರಸ್ತೆ ಕಾಮಗಾರಿಗೆ ಇದೀಗ ಚಾಲನೆ ದೊರಕಿದ್ದು, ಸುಮಾರು 30 ಕೀ,ಮೀ ರಸ್ತೆ ಕಾಮಗಾರಿಗೆ ಇನ್ನುಳಿದ ಅನುದಾನವನ್ನು ಮಂಜೂರು ಮಾಡಿಸಿಕೊಡುವುದಾಗಿ ಭರವಸೆ ನೀಡಿದರು.
ಕೆಸಿಸಿ ಬ್ಯಾಂಕ್ ನಿರ್ಧೇಶಕ ಉಮೇಶ ಹೆಬಸೂರ, ಕುಬಿಹಾಳ ಗ್ರಾ.ಪಂ.ಉಪಾದ್ಯಕ್ಷ ಶಿವಲಿಂಗಪ್ಪ ಸವಣೂರ, ಮುಖಂಡರಾದ ತಿಮ್ಮನಗೌಡ ಪಾಟೀಲ, ಸಿದ್ರಾಮಯ್ಯ ಮಠದ, ಅಪ್ಪಣ್ಣ ಹಿರೇಗೌಡ್ರ, ತೋಟಪ್ಪಗೌಡ ಪಾಟೀಲ, ಲೋಕೋಪಯೋಗಿ ಇಲಾಖೇಯ ಚಿದಂಭರ ಜೋಶಿ, ಗುತ್ತಿಗೆದಾರ ದ್ಯಾಮಣ್ಣ ಅಡರಕಟ್ಟಿ, ಸಹಿತ ಬೆಟದೂರ ಗ್ರಾ.ಪಂ.ಅದ್ಯಕ್ಷ, ಉಪಾದ್ಯಕ್ಷ ಸದಸ್ಯರು ಕಾರ್ಯಕ್ರಮದಲ್ಲಿದ್ದರು.
ಸವಣೂರ ರಸ್ತೆಯ ಡಾಂಬರೀಕರಣ: ಶಿವಳ್ಳಿ ಭೂಮಿ ಪೂಜೆ
loading...