ಸವಳು-ಜವಳು ಭೂಮಿಯ ಪುನಶ್ಚೇತನಕ್ಕೆ ಕಾರ್ಯಕ್ರಮ ರೂಪಿಸಲು ಸೂಚನೆ

0
50

  ವಿಜಾಪುರ,13- ಕೇಂದ್ರ ಪುರಸ್ಕ್ಕತ ಯೋಜನೆಗಳ ಬಗ್ಗೆ ನಿರ್ಲಕ್ಷ್ಯ ವಹಿಸಿ ಜನರಿಗೆ ಅನ್ಯಾಯವೆಸಗಿದರೆ ನಾನು ಸಹಿಸುವುದಿಲ್ಲ ಎಂದು ಸಂಸದ ರಮೇಶ ಜಿಗಜಿಣಗಿ ಅನುಷ್ಠಾನಾಧಿಕಾರಿಗಳಿಗೆ ಎಚ್ಚರಿಸಿದರು.

ಅವರು ಗುರುವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜರುಗಿದ ಕೇಂದ್ರ ಪುರಸ್ಕ್ಕತ ಯೋಜನೆಗಳ ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಪ್ರಗತಿ ಪರೀಶೀಲನೆ ನಡೆಸಿ, ಜನರಿಗೆ ನ್ಯಾಯವಾಗಿ ದೊರಕಬೇಕಾದ ಯೋಜನೆಗಳನ್ನು ಸರಿಯಾಗಿ ಅನುಷ್ಠಾನಗೊಳಿಸಿ ಎಂದು ಸೂಚಿಸಿದರು.

ಸವಳುಜವಳು : ಜಿಲ್ಲೆಯ ಇಂಡಿ, ಸಿಂದಗಿ, ಮುದ್ದೇಬಿಹಾಳ ತಾಲೂಕಾ ಪ್ರದೇಶದಲ್ಲಿ ಜಮೀನಿನ ಸವಳು-ಜವಳು ಹೆಚ್ಚಾಗಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೆಬಿಜೆಎನ್ಎಲ್ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರೀಯಾಯೋಜನೆಯೊಂದನ್ನು ಸಲ್ಲಿಸಿ. ಇದಕ್ಕೆ ಅಗತ್ಯವಾದ ಹಣಕಾಸನ್ನು ಕೇಂದ್ರ ಸರ್ಕಾರದಿಂದ ಬಿಡುಗಡೆಗೊಳಿಸಲು ಸಿದ್ಧವಾಗಿದ್ದೇನೆಂದು ಹೇಳಿದರು.

ಇದೇ ಸಂದರ್ಭದಲ್ಲಿ ಜಲಾನಯನ ಯೋಜನೆಯಡಿ ಕಳೆದ ವರ್ಷ ಸಾಧಿಸಿದ ಪ್ರಗತಿಯ ವಿವರವನ್ನು ಸಲ್ಲಿಸುತ್ತ ಡಿಡಿಪಿ ಯೋಜನೆಯಡಿ 7762, ರಾಷ್ಟ್ತ್ರೀಯ ಜಲಾನಯನ ಪ್ರದೇಶದ ಅಭಿವೃದ್ದಿ ಯೋಜನೆಯಡಿ 112, ನದಿ ಕಣವೆ ಯೋಜನೆಯಡಿ 1977 ಹೆಕ್ಟೇರ್ ಭೂ ಪ್ರದೇಶವನ್ನು ಅಭಿವೃದ್ದಿಪಡಿಸಲಾಗಿದೆ ಎಂದು ವಿವರಿಸಿದರು. ಸಮಗ್ರ ಜಲಾನಯನ ಅಭಿವೃದ್ದಿ ಯೋಜನೆಯಡಿ 2009ರಿಂದ 2012ರವರೆಗೆ 28972 ಹೆಕ್ಟೇರ್ ಪ್ರದೇಶವನ್ನು ಭೂ ಅಭಿವೃದ್ದಿಪಡಿಸಲಾಗಿದ್ದು, ಒಡ್ಡು ಹಾಕುವ ಚಟುವಟಿಕೆ, ಕೃಷಿ,ತೋಟಗಾರಿಕೆ ಅರಣ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಲಾನಯನ ಅಧಿಕಾರಿ ಕೋಳೆಕರ ವಿವರಿಸಿದರು.

 ಮನೆ ನಿರ್ಮಾಣ ತ್ವರಿತವಾಗಲಿ : ಇಂದಿರಾ ಆವಾಸ್ ಯೋಜನೆಯ ಪ್ರಗತಿಯ ಬಗೆಗೆ ನನಗೆ ತೃಪ್ತಿ ಇಲ್ಲ. ಈ ಕುರಿತಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಪರೀಶೀಲನೆ ನಡೆಸಿ,ಮನೆಗಳ ನಿರ್ಮಾಣ ಕಾರ್ಯಗಳನ್ನು ಚುರುಕುಗೊಳಿಸುವಂತೆ ಸೂಚಿಸಿ ದರು.

ಇದೇ ಸಂದರ್ಭ ದಲ್ಲಿ ಇಂದಿರಾ ಆವಾಸ್ ಯೋಜನೆಯ ಮಾಹಿತಿ ಸಲ್ಲಿಸಿದ ಯೋಜನಾಧಿಕಾರಿ ನಿಂಗಪ್ಪ, ಇಂದಿರಾ ಆವಾಸ್ ಮನೆ ಪ್ರಗತಿಯಲ್ಲಿ ಕರ್ನಾಟಕ ರಾಜ್ಯ ದಲ್ಲಿ ವಿಜಾಪುರ ಪ್ರಥಮ ಸ್ಥಾನದಲ್ಲಿದೆ. ಜಿಲ್ಲೆಗೆ 4975 ಮನೆಗಳನ್ನು ನಿಗದಿಪಡಿಸಿದ್ದು, ಈ ಪೈಕಿ 7451 ಮನೆಗಳಿಗೆ ಅನುಮೋದನೆ ದೊರೆತಿದೆ. ಮಾರ್ಚ್ 31ಕ್ಕೆ 786 ಮನೆ ಗಳನ್ನು ಪೂರ್ಣಗೊಳಿಸಲಾಗಿದೆ. 5058 ಮನೆಗಳು ವಿವಿಧ ಹಂತದಲ್ಲಿವೆ. 1007 ಮನೆಗಳನ್ನು ಆರಂಭಿಸಬೇಕಾಗಿದೆ ಎಂದು ವಿವರಿಸಿದರು.

ಭೂಮಿ ಸಮಸ್ಯೆ ಇತ್ಯರ್ಥ : ಹೊರ್ತಿ, ಇಂಚಗೇರ, ಪೀರಾಪುರ ಬಹುಹಳ್ಳಿ ಕುಡಿಯುವ ನೀರಿನ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸಲು ಸೂಚಿಸಿದರು.

ಈ ಯೋಜನೆಗಳಿಗೆ ಭೂ ಸಮಸ್ಯೆ ಇದ್ದರೆ ತಕ್ಷಣ ಪರಿಹರಿಸಿಕೊಡುವುದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯಡಿ 678, ಲೋಕಸಭಾ ಸದಸ್ಯರ ಅನುದಾನದಲ್ಲಿ 220, ರಾಜ್ಯಸಭಾ ಸದಸ್ಯರ ಅನುದಾನದಡಿ 35 ಕಾಮಗಾರಿಗಳನ್ನು ಪೂರ್ಣಗೊಳಿಸಿರುವುದಾಗಿ ಪಂಚಾಯತ್ ರಾಜ್ ಕಾರ್ಯನಿರ್ವಾಹಕ ಅಭಿಯಂತರರು ಸಭೆಗೆ ವಿವರಿಸಿದರು. ಸ್ವರ್ಣಜಯಂತಿ ಸ್ವರೋಜಗಾರ ಯೋಜನೆಯಡಿ 146 ಗುಂಪುಗಳನ್ನು 2099 ಸ್ವರೋಜಗಾರಿಗಳನ್ನು ಸೃಜಿಸಲಾಗಿದೆ. ಮಾರ್ಚ್ ಅಂತ್ಯದವರೆಗೆ 299 ಲಕ್ಷರೂ.ಗಳನ್ನು ಖರ್ಚು ಮಾಡಲಾಗಿದೆ ಎಂದು ಯೋಜನಾ ನಿರ್ದೇಶಕರು ಸಭೆಗೆ ವಿವರಿಸಿದರು.

ನೇರ ಹಣ : ಉದ್ಯೌಗಖಾತ್ರಿ ಯೋಜನೆಯಡಿ ಕೂಲಿಕಾರರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮಾ ಮಾಡಲು ಎಲೆಕಾ್ತ್ರನಿಕ್ ಫಂಡ್ ಮಾನಿಟರಿಂಗ್ ಸಿಸ್ಟಮ್ (ಇಈಒಖ) ಜಾರಿಗೊಳಿಸಲಾಗಿದ್ದು, ಇನ್ನು ಮುಂದೆ ಆರ್.ಡಿ.ಪಿ.ಆರ್.ನಿಂಗ ನೇರವಾಗಿ ಕೂಲಿಕಾರರಿಗೆ ಹಣ ಜಮಾವಾಗಲಿದೆ. ಹಾಲಿ  ಗ್ರಾಮ ಪಂಚಾಯತಿ ಖಾತೆಯಲ್ಲಿರುವ ಹಣವನ್ನು ತಕ್ಷಣ ವಿನಿಯೋಗಿಸಬೇಕೆಂದು ಎಲ್ಲ ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದೆ. ತಪ್ಪಿದರೆ ಇದರ ಪರಿಣಾಮವನ್ನು ಪಿಡಿಓಗಳೇ ಎದುರಿಸಬೇಕಾಗುತ್ತದೆ. ಅಲ್ಲದೇ  ತಕ್ಷಣದಿಂದಲೇ ಪ್ರತಿ ಗ್ರಾಮ ಪಂಚಾಯತಿಯಲ್ಲಿ 4ರಿಂದ 5 ಕಾಮಗಾರಿಗಳನ್ನು ಆರಂಭಿಸಿ ಜನರಿಗೆ ಉದ್ಯೌಗ ಕೊಡಬೇಕು. ಒಂದೊಮ್ಮೆ ಕೆಲಸ ಆರಂಭಿಸದಿದ್ದರೆ ಈ ಭಾಗದಲ್ಲಿ ಕೆಲಸದ ಬೇಡಿಕೆ ಇಲ್ಲ ಎಂದು ತಿಳಿಯಬೇಕಾಗುತ್ತದೆ. ಜೊತೆಗೆ ಪಿಡಿಓಗಳು ಈ ರೀತಿ ಪ್ರಮಾಣ ಪತ್ರವನ್ನು ಸಹ ನೀಡಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುತ್ತಿ ಜಂಬುನಾಥ್ ಸೂಚಿಸಿದದರು.

ತಪಾಸಣೆ : ಉದ್ಯೌಗಖಾತ್ರಿ ಯೋಜನೆಯ ಅನುಷ್ಠಾನದಲ್ಲಿ ಸಿಂದಗಿ ಮತ್ತು ಇಂಡಿ ತಾಲೂಕುಗಳಲ್ಲಿ ತೀವ್ರ ಸಮಸ್ಯೆ ಇದೆ. ವರ್ಷದ ಕೊನೆಯ ಮಾರ್ಚ್ ತಿಂಗಳಲ್ಲಿ 50ಲಕ್ಷ ರೂ. ಹಣವನ್ನು ಖರ್ಚು ಮಾಡಿದ್ದಾರೆ. ಇಂತಹ ಗ್ರಾಮ ಪಂಚಾಯತಿಗಳ ಕಾಮಗಾರಿಗಳ ವಿವರ ಕುರಿತು ತಪಾಸಣಾ ಕಾರ್ಯ ಪರೀಶೀಲನೆಯಲ್ಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತಿಳಿಸಿದರು.

ಅಸಮಾಧಾನ :ಕಳೆದ ವರ್ಷದ ಕೂಲಿ ಹಣ ಪಾವತಿ ಮಾಡುವ ಬಾಬ್ತು 87 ಕೋಟಿ ರೂ. ಬಾಕಿ ಇದೆ ಎಂದು ತಾವು ಹೇಳುತ್ತೀರಿ. ಆದರೆ ಈವರೆಗೆ ನಿಮಗೆ ಯಾರೂ ಕೂಲಿ ಹಣ ಕೇಳಿಲ್ಲವೇ? ಎಪ್ರೀಲ್ ಮತ್ತು ಮೇ ತಿಂಗಳಲ್ಲಿ ಯಾವುದೇ ಕಾಮಗಾರಿ ಆರಂಭಿಸಿಲ್ಲ ಎಂದು ಹೇಳುತ್ತೀರಿ, ಹಾಗಾದರೆ ಜನ ಗುಳೆ ಹೋಗಬಾರದಲ್ಲವೇ? ಈ ಲೋಪಗಳನ್ನು ಸರಿಪಡಿಸಿಕೊಳ್ಳಿ. ಕೆಲವರು ಮಾಡುವ ತಪ್ಪಿಗೆ ಇಡೀ ಜಿಲ್ಲೆಗೆ ತೊಂದರೆಯಾಗುತ್ತದೆ.ಇದನ್ನು ಎಲ್ಲ ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕರು ಅರ್ಥಮಾಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಶಿವಯೋಗಿ ಕಳಸದ ಹೇಳಿದರು.

                ಸ್ಮಶಾನ ಭೂಮಿ : ಜಿಲ್ಲೆಯ ಹೆಚ್ಚಿನ ಗ್ರಾಮಗಳಲ್ಲಿ ಪರಿಶಿಷ್ಟ ಜಾತಿಯವರಿಗೆ ರುದ್ರಭೂಮಿ ಇಲ್ಲದೇ ತೀವ್ರ ತೊಂದರೆ ಉಂಟಾಗಿದೆ.ಈ ಕುರಿತಂತೆ ಪರೀಶೀಲನೆ ನಡೆಸಿ ರುದ್ರಭೂಮಿ ವ್ಯವಸ್ಥೆ ಮಾಡುವಂತೆ ತಿಳಿಸಿದರು.

ಈ ವಿಷಯವಾಗಿ ಜಿಲ್ಲಾಧಿಕಾರಿಗಳು ವಿವರ ನೀಡಿ, ಈಗಾಗಲೇ ಯಾವ ಯಾವ ಗ್ರಾಮಗಳಲ್ಲಿ ರುದ್ರಭೂಮಿ ಇಲ್ಲವೋ ಆ ಗ್ರಾಮಗಳಿಗೆ ರುದ್ರಭೂಮಿಯನ್ನು ಮಂಜೂರು ಮಾಡಲು ನಿರ್ಧರಿಸಲಾಗಿದೆ. ಸರ್ಕಾರಿ ಜಮೀನು ಇಲ್ಲದ ಗ್ರಾಮಗಳಲ್ಲಿ ಖಾಸಗಿ ಜಮೀನು ಖರೀದಿಸಲು ಎಲ್ಲ ತಹಶೀಲ್ದಾರಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿಯ ಸದಸ್ಯೆ ಶ್ರೀಮತಿ ಶಾರದಾ ಬಸವರಾಜ ಹಿರೇಮಠ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಅಮರೇಶ ನಾಯಕ, ಹಾಗೂ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here