ಸಶಸ್ತ್ರ ನಿಯಂತ್ರಣ ಸಮಸ್ಯೆ ಕುರಿತು ಸದ್ಯದಲ್ಲೇ ರಷ್ಯಾದೊಡನೆ ಚರ್ಚೆ: ಪಾಂಪಿಯೊ

0
4

ವಾಷಿಂಗ್ಟನ್- ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಅವರೊಡನೆ  ಪರಮಾಣು ಶಸ್ತ್ರಾಸ್ತ್ರ ನಿಯಂತ್ರಣ ವಿಷಯಗಳು ಮತ್ತು ವ್ಯವಹಾರ ಸಂಬಂಧಗಳ ಬಗ್ಗೆ ಶೀಘ್ರದಲ್ಲೆ ಚರ್ಚಿಸುವುದಾಗಿ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಅವರು ಮಂಗಳವಾರ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
“ನಾವು ಇಡೀ ವಿಷಯಗಳ ಬಗ್ಗೆ ಮಾತನಾಡುತ್ತೇವೆ. ವಿದೇಶಾಂಗ ಸಚಿವ ಲಾವ್ರೊವ್ ಮತ್ತು ನಾನು ಸಶಸ್ತ್ರ ನಿಯಂತ್ರಣದ ಕುರಿತು ಪ್ರಗತಿ ಸಾಧಿಸಬಹುದು “ಎಂದು ಪೊಂಪಿಯೊ ಸೋಮವಾರ ಪ್ರಸಾರವಾದ ಒನ್ ಅಮೇರಿಕಾ ನ್ಯೂಸ್ ನೆಟ್‌ವರ್ಕ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.
“ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉಭಯ ದೇಶಗಳ ನಡುವಿನ ವ್ಯಾವಹಾರಿಕ ಸಂಬಂಧಗಳ ಕುರಿತು ಕಾರ್ಯನಿರ್ವಹಿಸಲು ನಮ್ಮನ್ನು ನಿಯೋಜಿಸಿದ್ದಾರೆ.  ನಾವು ಅದರ ಮೇಲೆ ಕೆಲಸ ಮಾಡಲು ಪ್ರಯತ್ನಿಸಿದ್ದೇವೆ.  ಉಭಯ ದೇಶಗಳ ನಡುವೆ ಶಸ್ತ್ರಾಸ್ತ್ರ ನಿಯಂತ್ರಣ ಸಮಸ್ಯೆಗಳಿವೆ” ಎಂದು ಪೊಂಪಿಯೊ ತಿಳಿಸಿದ್ದಾರೆ.
ಚೀನಾವನ್ನು ಶಸ್ತ್ರಾಸ್ತ್ರ ನಿಯಂತ್ರಣ ಮಾತುಕತೆಗಳಿಗೆ ತರಲು ಅಮೆರಿಕ ಬಯಸಿದ್ದು,   ಈ ವಿಚಾರವನ್ನು ಲಾವ್ರೊವ್ ಅವರೊಂದಿಗೆ ಚರ್ಚಿಸುವುದಾಗಿ ಹೇಳಿದ್ದಾರೆ.
ಪೊಂಪಿಯೊ ಮತ್ತು ಟ್ರಂಪ್ ಅವರೊಂದಿಗಿನ ಚರ್ಚಿಸಲು ಲಾವ್ರೊವ್ ಮಂಗಳವಾರ ವಾಷಿಂಗ್ಟನ್‌ಗೆ ಆಗಮಿಸಲಿದ್ದಾರೆ.

loading...