ಸಹೋದರನಿಗೆ ಟಾಂಗ್ ಕೊಟ್ಟ ಶಾಸಕ ಸತೀಶ

0
237

ಕನ್ನಡಮ್ಮ ಸುದ್ದಿ
ಬೆಳಗಾವಿ: ಸಿಎಂ ಸಿದ್ದರಾಮಯ್ಯಾ ಹಾಗೂ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ ಅವರು ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಬೇಕು ಎನ್ನುವುದರ ಮೂಲಕ ಶಾಸಕ ಸತೀಶ ಜಾರಕಿಹೊಳಿ ವೇದಿಕೆ ಮೇಲೆ ಉಪಸ್ಥಿತಿರಿದ್ದ ಸಚಿವ ರಮೇಶ ಜಾರಕಿಹೊಳಿ ಅವರ ಮಾತಿಗೆ ತಿರುಗೇಟು ನೀಡಿದ ಘಟನೆ ಅಥಣಿಯಲ್ಲಿ ಜರುಗಿದ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಸಾಕ್ಷಿಯಾಯಿತು.
ನಮ್ಮಲ್ಲಿ ಭಿನ್ನಾಭಿಪ್ರಾಯ ಇರುವುದು ನಿಜ ಅದು ವೈಯಕ್ತಿಕ, ಪಕ್ಷದ ವಿಷಯ ಬಂದಾಗ ಖಂಡಿತವಾಗಿ ನಾವು ಅದನ್ನು ಮರೆತು ಕೆಲಸ ಮಾಡುತ್ತೇನೆ. ೨೦೧೩ರ ಚುನಾವಣೆಯಲ್ಲಿ ಮಾಡಿದ್ದೇನಿ. ಮುಂದಿನ ಚುನಾವಣೆಯಲ್ಲಿ ಮಾಡಲು ತಯಾರಿದ್ದೇನಿ. ನಮ್ಮ ಮೇಲೆ ಸಂಶಯಬೇಡ. ರಾಜ್ಯದಲ್ಲಿ ತಮ್ಮದೆಯಾದ ಶಕ್ತಿಯನ್ನು ಹೊಂದಿದ್ದೇನೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಇಲ್ಲಿ ಮಾತನಾಡಿರುವುದನ್ನು ಬೆಳಗಾವಿಯಲ್ಲಿ ಮಾತನಾಡುತ್ತೇನೆ, ಬೆಂಗಳೂರಿನಲ್ಲಿ ಮಾತನಾಡುತ್ತೇನಿ ಸಮಸ್ಯೆಯನ್ನು ಬಗೆಹರಿಸಲು ಕ್ರಮ ಕೈಗೊಂಡು. ಮುಂದಿನ ಚುನಾವಣೆಯಲ್ಲಿ ಗೆಲ್ಲುವಿನ ಅಭ್ಯರ್ಥಿಗಳಿಗೆ ಟಿಕೆಟ್ ನೀಡಬೇಕು. ತಾವು ಯಾರ ಪರವಾಗಿ ಟಿಕೆಟ್ ಲಾಬಿ ನಡೆಸುವುದಿಲ್ಲ. ಗೆಲ್ಲುವ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡುವುದಾಗಿ ಪರೋಕ್ಷವಾಗಿ ಸಚಿವ ರಮೇಶ ಎದಿರೇಟು ನೀಡಿದರು.

loading...