ಸಾಂತ್ವನ ಕೇಂದ್ರಕ್ಕೆ ಕಾನೂನು ವಿದ್ಯಾರ್ಥಿಗಳ ಭೇಟಿ

0
1

ಬೆಳಗಾವಿ: ಕೆ.ಎಲ್.ಇ ಸಂಸ್ಥೆಯ ಕಾನೂನು ಮಹಾವಿದ್ಯಾಲಯ ಚಿಕ್ಕೊÃಡಿಯ ವಿದ್ಯಾರ್ಥಿಗಳು ಮಹಿಳಾ ಕಲ್ಯಾಣ ಸಂಸ್ಥೆಯ “ಸಂಗಾತಿ” ಕೌಟುಂಬಿಕ ಸಲಹಾ ಕೇಂದ್ರ ಹಾಗೂ ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರಗಳಿಗೆ ಭೇಟಿಕೊಟ್ಟು ಕೇಂದ್ರಗಳಲ್ಲಿ ದಾಖಲಾಗುತ್ತಿರುವ ವಿವಿಧ ಪ್ರಕರಣಗಳು ಮತ್ತು ಅವುಗಳಿಗೆ ದೊರಕುತ್ತಿರುವ ಸೇವೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಸಲಹಾಗಾರ ಕವಿತಾ ಅಕ್ಕಿ ಮಾತನಾಡಿ ಆಧುನಿಕತೆ, ಪಾಶ್ಚಿಮಾತ್ಯಿÃಕರಣದ ನೆಪದಲ್ಲಿ ಯುವಜನತೆ ಕೌಟುಂಬಿಕ ಜವಾಬ್ದಾರಿಗಳನ್ನು ಮರೆಯುತ್ತಿದ್ದಾರೆ. ಕುಟುಂಬಗಳಲ್ಲಿ ಅಶಾಂತಿ, ವೈಮನಸ್ಸು ಹೆಚ್ಚಾಗುತ್ತಿದ್ದು, ಕುಟುಂಬಗಳು ವಿಘಟಿತಗೊಳ್ಳುತ್ತಿವೆ ಆದ್ದರಿಂದ ಸಾಂತ್ವನ ಮಹಿಳಾ ಸಹಾಯವಾಣಿ ಮತ್ತು ಸಂಗಾತಿ ಕೌಟುಂಬಿಕ ಸಲಹಾ ಕೇಂದ್ರಗಳ ಮೂಲಕ ಮಹಿಳೆರ ಸಮಸ್ಯೆಗಳನ್ನು ಪರಿಹರಿಸಲಾಗುತ್ತಿದೆ ಎಂದರು.
ಮಹಿಳಾ ಕಲ್ಯಾಣ ಸಂಸ್ಥೆಯ ಸಂಯೋಜಕ ಎಂ.ಎಸ್. ಚೌಗಲಾ ಮಾತನಾಡಿ, ದೌರ್ಜನ್ಯ, ಶೋಷಣೆ, ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳಕ್ಕೆ ಒಳಗಾಗಿ ಯಾತನೆ ಪಡುತ್ತಿರುವ ಮಹಿಳೆಯರಿಗೆ ೨೪ ಗಂಟೆಗಳ ತುರ್ತು ದೂರವಾಣಿ ಕರೆಯ ಸೇವಾ ಸೌಲಭ್ಯ ನೀಡಲಾಗುತ್ತಿದೆ. ಕಾನೂನು ವಿದ್ಯಾರ್ಥಿಗಳ ಸಹಾಯ ಸಹ ಕೆಲ ಪ್ರಕರಣಗಳಲ್ಲಿ ಅಗತ್ಯ ಎಂದರು.
ಕಾರ್ಯಕ್ರಮದಲ್ಲಿ ಕಾನೂನು ಮಹಾವಿದ್ಯಾಲಯದ ಪ್ರೊ. ಶಿಲ್ಪಾ ರಾಯ್ಕರ್, ಪ್ರೊ. ಪಿ. ಎಸ್. ಕಮತೆ, ಎಂ. ಎಂ. ಗಡಗಲಿ ಉಪಸ್ಥಿತರಿದ್ದರು. ಸಮಾಜ ಕಾರ್ಯಕರ್ತೆ ಅನ್ನಪೂರ್ಣ ಬುಚಡಿ ಸರ್ವರನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

loading...