ಸಾಕಾರಗೊಳ್ಳದ ಗ್ರಾಮಭಾರತ: ಡಾ.ಗೊ.ರು.ಚನ್ನಬಸಪ್ಪ ವಿಷಾಧ

0
51
????????????????????????????????????

ಗದಗ 21 : ಗ್ರಾಮಗಳ ಅಭಿವೃದ್ಧಿಯಲ್ಲಿ ದೇಶದ ಪ್ರಗತಿ ಅಡಗಿರುವದನ್ನು ಮರೆತು ನಗರಗಳ ಬೆಳವಣಿಗೆಗೆ ಸ್ವಾತಂತ್ರಾನಂತರ ಮಹತ್ವವನ್ನು ನೀಡಿದುದರ ಪರಿಣಾಮವಾಗಿ ದೇಶದ ಅಭಿವೃದ್ಧಿ ಕುಂಠಿತವಾಗಿದೆ. ಗಾಂಧೀಜಿ ಕಂಡ ಗ್ರಾಮಭಾರತ ಅಭಿವೃದ್ಧಿಯ ಕನಸು ಇನ್ನೂ ಸಾಕಾರಗೊಂಡಿಲ್ಲ. ಅಧಿಕಾರದ ಕೇಂದ್ರಗಳು ರಾಜಧಾನಿಗೆ ಸೀಮಿತಗೊಂಡು ವಿಕೇಂದ್ರಿಕರಣ ಅರ್ಥ ಕಳೆದುಕೊಳ್ಳುವಂತಾಗಿದೆ ಎಂದು ಡಾ. ಗೊ.ರು.ಚನ್ನಬಸಪ್ಪ ವಿಷಾಧಿಸಿದರು.
ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಒಂದು ವರ್ಷ ನೂರು ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ಮನದಾಳದ ಮಾತು ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾತಿನ ಮಹತ್ವವನ್ನು ಅರಿಯಬೇಕು. ಆದರೆ, ಇಂದಿನ ರಾಜಕಾರಣದಲ್ಲಿ ಮಾತಿನ ಎಲ್ಲೆಯನ್ನು ಮೀರಿ ಮಾತನಾಡುತ್ತಿರುವದು ಉತ್ತಮ ಬೆಳವಣಿಗೆಯಲ್ಲ. ಗ್ರಾಮೀಣ ಭಾಗದ ಜನರಿಗೆ ವಿವಿಧ ಸೌಲಭ್ಯಗಳನ್ನು ಉಚಿತವಾಗಿ £ೀಡದೇ ಅವರನ್ನು ಸ್ವಾವಲಂಬಿಯನ್ನಾಗಿಸುವ ದಿಸೆಯಲ್ಲಿ ಸರಕಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಶಿಕ್ಷಣ ಕ್ಷೇತ್ರದಲ್ಲಿ ಪದೇ ಪದೇ ಪ್ರಯೋಗಗಳನ್ನು ಮಾಡುತ್ತಿರುವ ಸರಿಯಾದ ಕ್ರಮವಲ್ಲ. ಗುಣಮಟ್ಟದ ಶಿಕ್ಷಣವನ್ನು ಖಾತರಿಪಡಿಸುವ ಹಿನ್ನೆಲೆಯಲ್ಲಿ ಸರಕಾರ ಕ್ರಮಕೈಗೊಳ್ಳಬೇಕು ಎಂದರು. ಸಚಿವÀ ಎಚ್.ಕೆ.ಪಾಟೀಲ ಶಂಕರಗೌಡ ಪಾಟೀಲ ಮೇಗೂರ ಪ್ರತಿಷ್ಠಾನವನ್ನು ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆಯನ್ನು ಮಾಜಿ ಶಾಸಕ ಡಿ.ಆರ್.ಪಾಟೀಲ ವಹಿಸಿದ್ದರು.

loading...