ಸಾಕ್ಷರತಾ ಕಾರ್ಯಕ್ರಮ ಪ್ರತಿಯೋಬ್ಬ ಅನಕ್ಷರಸ್ಥರಿಗೆ ತಲುಪಿಸಿ

0
26

ಸವಣೂರ: ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿಸುವ ಉದ್ದೆÃಶದಿಂದ ಸರ್ಕಾರ ಸಾಕ್ಷರತಾ ಕಾರ್ಯಕ್ರಮವನ್ನು ಜಾರಿಗೆ ತಂದಿದೆ ಇದರ ಉಪಯೋಗ ಪ್ರತಿಯೋಬ್ಬ ಅನಕ್ಷರಸ್ಥರಿಗೆ ತಲುಪಿಸಿ ವಿದ್ಯಾವಂತರನ್ನಾಗಿಸಬೇಕು ಎಂದು ತಾಪಂ ಯೋಜನಾಧಿಕಾರಿ ಆರ್.ಎಂ.ಭುಜಂಗ ತಿಳಿಸಿದರು. ಪಟ್ಟಣದ ಅಡವಿಸ್ವಾಮಿಮಠದ ಆವರಣದಲ್ಲಿ ಸೋಮವಾರ ನಡೆದ ಡಾ. ಡಿ.ಎಂ.ನಂಜುಂಡಪ್ಪ ವರದಿಯ ಹಿಂದುಳಿದ ತಾಲ್ಲೂಕಿನ ಅನಕ್ಷರಸ್ಥರಿಗೆ ಸಾಕ್ಷರನ್ನಾಗಿಸುವ ಭೋದಕರ ೨ನೇ ಹಂತದ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ದಿನಗಳಲ್ಲಿ ಶಿಕ್ಷಣ ಅತಿ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಂಡಿದ್ದು ಶಿಕ್ಷಣದಿಂದ ಹಿಂದುಳಿದ ಜನರನ್ನು ಅಕ್ಷರಸ್ಥರಾಗಿಸುವ ಮಹತ್ತರವಾದ ಕಾರ್ಯ ಪ್ರತಿಯೋಬ್ಬ ಬೋಧಕರದ್ದಾಗಿದೆ. ಆದ್ದರಿಂದ, ಪ್ರತಿಯೋಬ್ಬ ಅನಕ್ಷರಸ್ಥರಿಗೆ ಅರ್ಥವಾಗುವ ರೀತಿಯಲ್ಲಿ ಅವರಿಗೆ ಭೋದನೆ ಮಾಡಿ ವಿದ್ಯೆಯನ್ನು ನೀಡಿದಲ್ಲಿ ಅಕ್ಷರಜ್ಞಾನ ನೀಡಿದ ಶ್ರೆÃಯಸ್ಸು ಬೋಧಕರಿಗೆ ತಲುಪಲಿದೆ. ತಾಲ್ಲೂಕಿನಲ್ಲಿ ಚಿಲ್ಲೂರಬಡ್ನಿ, ಮಂತ್ರೊÃಡಿ, ತೆಗ್ಗಿಹಳ್ಳಿ, ಹುರಳಿಕುಪ್ಪಿ ಕುರುಬರಮಲ್ಲೂರ ಗ್ರಾಮ ಪಂಚಾಯ್ತಿಗಳನ್ನು ಆಯ್ಕೆಮಾಡಿ ಅನಕ್ಷರಸ್ಥರಿಗೆ ಅಕ್ಷರ ಜ್ಞಾನವನ್ನು ನೀಡುವ ಹೊಣೆ ಪ್ರತಿಯೋಬ್ಬ ಬೋಧಕರದ್ದಾಗಿದೆ ಎಂದರು.
ಎಸ್.ವಿ.ಇಚ್ಚಂಗಿಮಠ ಅಧ್ಯಕ್ಷತೆ ವಹಿಸಿದ್ದರು. ಪಿ.ಆರ್.ನವಲೆ, ನಿವೃತ್ತ ಶಿಕ್ಷಕ ಅಂಬೂರೆ, ಎನ್.ಎಸ್.ಹಿರೇಮಠ, ಶ್ರಿÃನಿವಾಸ ಎನ್.ಎಸ್, ನಿರ್ಮಲಾ, ಮಹಾದೇವಿ ಇದ್ದರು.
ಎಫ್.ಆರ್.ಹಿರೇಮಠ ಕಾರ್ಯಕ್ರಮ ನಿರ್ವಹಿಸಿದರು.

loading...