ಕುಂದಗೋಳ,30: ಪಟ್ಟಣದ ಹುಬ್ಬಳ್ಳಿ-ಲಕ್ಷ್ಮೇಶ್ವರ ರಸ್ತೆಯ ಬಳಿ ನಿರ್ಮಾಣಗೊಂಡಿರುವ ಸಾಮಥ್ರ್ಯ ಸೌಧವನ್ನು ಶಾಸಕ ಸಿ.ಎಸ್.ಶಿವಳ್ಳಿ ಉದ್ಘಾಟಿಸಿದರು.
ಗುರುವಾರ ನಡೆದ ಕಾರ್ಯಕ್ರಮದಲ್ಲಿ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕ ಪಂಚಾಯತಿ ಅನೇಕ ದಾಖಲೆ ಪತ್ರಗಳ ಜತೆಗೆ ಮಹತ್ವದ ಕಡತ ಪತ್ರಗಳನ್ನು ಜೋಪಾನವಾಗಿಟ್ಟುಕೊಳ್ಳಲು ಮತ್ತು ಗ್ರಾಮ ಪಂಚಾಯತಿ ಸದಸ್ಯರಿಗೆ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ತರಬೇತಿ ಕಾರ್ಯಕ್ರಮಗಳನ್ನು ನಡೆಸಲು ಈ ಕಟ್ಟಡ ಬಹಳಷ್ಟು ಅನುಕೂಲತೆ ಕಲ್ಪಿಸಲಿದೆ ಎಂದರು.
ತಾ.ಪಂ.ಕಾರ್ಯನಿರ್ವಾಹಣಾದಿಕಾರಿ (ಪ್ರಭಾರ) ಬಸವರಾಜ ಕುಸುಗಲ್ಲ, ಉಮೇಶ ಹೆಬಸೂರ,ತಾಲೂಕ ಪಂಚಾಯತಿ ಅದ್ಯಕ್ಷೆ ಯಲ್ಲವ್ವ ಮುಗಳಿ, ಉಪಾಧ್ಯಕ್ಷ ಚಂದ್ರಶೇಖರ ಬಿಸೆರೊಟ್ಟಿ ಸದಸ್ಯರಾದ ಶೇಖವ್ವ ಬಡಿಗೇರ, ಹಜರು ಬಾವಿಕಟ್ಟಿ, ರಂಗಪ್ಪ ಚಳ್ಳಿ, ತಾ.ಪಂ.ವ್ಯವಸ್ಥಾಪಕ ಪಿ.ಆರ್.ಬಡೆಖಾನ ಸಹಿತ ಇನ್ನಿತರರು ಉಪಸ್ಥಿತರಿದ್ದರು
loading...