ಸಾಮಾಜಿಕ ಕಳಕಳಿ ಚಿತ್ರಗಳ ಅವಶ್ಯಕತೆ ಇದೆ : ಬಣಕಾರ

0
73

ಕನ್ನಡಮ್ಮ ಸುದ್ದಿ-ಬೆಳಗಾವಿ ಸಾಮಾಜಿಕ ಕಳಕಳಿಯ, ಕವಿಗಳ, ನಾಟ್ಯಕಾರರ ವಿಚಾರಗಳು ಕನ್ನಡ ಚಿತ್ರರಂಗವನ್ನು ಬದಲಾವಣೆ ಮಾಡುತ್ತವೆ. ಇಂತಹ ಚಿತ್ರಗಳ ಅವಶ್ಯಕತೆ ಸಮಾಜಕ್ಕೆ ಇದೆ ಎಂದು ನಿರ್ಮಾಪಕ ಉಮೇಶ ಬಣಕಾರ ಹೇಳಿದರು.
ನಗರದ ಜೀರಗೆ ಸಭಾ ಭವನದಲ್ಲಿ ಸೋಮವಾರ ನಡೆದ ಹಗ್ಗದ ಕೊನೆ ಚಿತ್ರ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು.
ಎಲ್ಲ ಕಮರ್ಷಿಯಲ್ ಚಿತ್ರ ಮಾಡಿದೇನೆ. ಈ ಹಗ್ಗದ ಕೊನೆ ಚಿತ್ರದಲ್ಲಿ ನಟಿ, ಹಾಡುಗಳು ಇಲ್ಲದೇ ಕೈದಿ ಯಾಕೆ ಆಗುತ್ತಾನೆ. ಕೈದಿಗೆ ಜೈಲಿನ ಅನುಭವ ಒಳಗೊಂಡ ರೋಚಕ ಕಥೆ ಹೆಣೆಯಲಾಗಿದೆ.
ಹಗ್ಗದ ಕೊನೆ ಚಲನಚಿತ್ರ ಅತ್ತುತ್ಯಮ ಅವಾರ್ಡ್ ಗೆದ್ದಿರುವಂತಹ ಉತ್ತಮ ಚಿತ್ರವಾಗಿದೆ. ತಿಥಿ ಚಿತ್ರ ಉತ್ತಮ ಪ್ರದರ್ಶನ ಕಂಡಿತ್ತು. ಬ್ಯೂಟಿಪುಲ್ ಚಿತ್ರ ನಾನಾದೇಶಗಳಲ್ಲಿ 110 ಚಿತ್ರಮಂದಿರಗಳ ಯಶಸ್ವಿ ಪ್ರದರ್ಶನ ಕಂಡಿದೆ.
ಇಂತಹ ಕಥೆ, ಕಾದಂಬರಿ ನಾಟಕಗಳ ಚಿತ್ರ ನಿರ್ಮಾಣ ಮಾಡುವದರಿಂದ ಚಲನಚಿತ್ರ ಮಂಡಳಿ ಬೆಳವಣಿಗೆಯಾಗುತ್ತದೆ. ಎಲ್ಲ ನಿರ್ಮಾಪಕರಿಗೆ ಇಂತಹ ಕಥೆ ಆಧಾರಿತ ಚಿತ್ರಗಳ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕೆಂದು ಹೇಳಿದರು.
ಕೆಎಲ್‍ಇ ಆಡಳಿತಾಧಿಕಾರಿ ಎಸ್.ಟಿ ಪಾಟೀಲ, ರಾಜ್ಯ ಪತ್ರಕರ್ತರ ಸಂಘ ಅಧ್ಯಕ್ಷ, ಮುರುಗೇಶ ಶಿವಪೂಜಿ ಮತ್ತಿತರರು ಉಪಸ್ಥಿತರಿದ್ದರು.

loading...