ಸಾರಾಯಿ ಸೇವಿಸಬೇಡ ಎಂದಿದ್ದಕ್ಕೆ ಆತ್ಮಹತ್ಯೆಗೆ ಶರಣು

0
31

ಸಾರಾಯಿ ಸೇವಿಸಬೇಡ ಎಂದಿದ್ದಕ್ಕೆ ಆತ್ಮಹತ್ಯೆಗೆ ಶರಣು
ಬೆಳಗಾವಿ:
ಸಾರಾಯಿ ಸೇವಿಸಬೇಡ ಎಂದು ಪತ್ನಿ ಬುದ್ದಿವಾದ ಹೇಳಿದಕ್ಕೆ ಪತಿರಾಯ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ಶಹಾಪೂರನಲ್ಲಿ ಸೋಮವಾರ ನಡೆದಿದೆ.
ಇಲ್ಲಿನ ಹೊಸುರಬಸವಗಲ್ಲಿ ರಾಹುಲ ಸಹದೇವ ಸೈನೂಚೆ(೩೦) ಮೃತ ವ್ಯಕ್ತಿ. ಖಾಸಗಿ ಕಂಪನಿಯಲ್ಲಿ ಕಾರ್ಯನಿರ್ವಸುತ್ತಿರುವ ರಾಹುಲ ಬಹು ತಿಂಗಳನಿAದ ಸಾರಾಯಿ ಅಮಲಿನಲ್ಲಿ ಕಾಲಕಳೆಯುತ್ತಿದ್ದ ಬರುವ ವೇತನ ಸಾರಾಯಿಕ್ಕಾಗಿ ಸುರಿದು ಮನೆಗೆ ಬಿಡುಗಾಸು ನೀಡದ ಪತಿ ವಿರುದ್ಧ ಪತ್ನಿ ಶನಿವಾರ ದಸರಾ ಹಬ್ಬಕ್ಕೆ ಮಾರ್ಕೇಟ್ ಮಾಡಬೇಕು ಸಾರಾಯಿ ಕುಡಿಯುವನ್ನು ನಿಲ್ಲಿಸಿ ಹಬ್ಬಕ್ಕೆ ಹಣ ನೀಡುವಂತೆ ಬೇಡಿಕೊಂಡಿದ್ದಾಳೆ.
ಕುಡಿಯುವುದನ್ನು ನಿಲ್ಲಿಸು ಎಂದು ಗೋಗೈರೆದು ಜಗಳ ಆಡಿದ್ದಾಳೆ ಈ ಸನ್ನಿವೇಶ ನೆಪ ಮಾಡಿಕೊಂಡ ರಾಹುಲ ಎರಡು ದಿನಗಳಿಂದ ಕಾಣಿಸಿಕೊಂಡಿರಲಿಲ್ಲ. ರವಿವಾರ ಮನೆಗೆ ಆಗಮಿಸಿದ ಪತಿ ಜತೆಯಲ್ಲಿ ಪತ್ನಿ ಜಗಳ ಮಾಡಿಕೊಂಡಿದ್ದಾಳೆ. ಈ ಹಿನ್ನಲ್ಲೆಯಲ್ಲಿ ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ನೆಣಿಗೆ ಕೊರಳೊಡ್ಡಿದ್ದಾನೆ ಎನ್ನಲಾಗಿದೆ.

loading...