ಸಾರ್ವಜನಿಕ ಸ್ಥಳಗಳಲ್ಲಿ ಪಾರ್ಟಿ ಮಾಡುವುದನ್ನು ನಿμೇಧಿಸುವಂತೆ ಒತ್ತಾಯ

0
5

ಕನ್ನಡಮ್ಮ ಸುದ್ದಿ-ಕುಮಟಾ: ಹೊಸ ವμÀರ್ದ ಆಚರಣೆಯ ಹೆಸರಿನಲ್ಲಿ ಡಿಸೆಂಬರ್‌ 31 ಕ್ಕೆ ರಾಜ್ಯದಲ್ಲಿನ ಕೋಟೆಗಳು, ಪ್ರವಾಸಿ ಸ್ಥಳಗಳು, ಐತಿಹಾಸಿಕ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮಧ್ಯಪಾನ, ಧೂಮ್ರಪಾನ ಮತ್ತು ಪಾರ್ಟಿಗಳನ್ನು ಮಾಡುವುದನ್ನು ನಿμೇಧಿಸಬೇಕೆಂದು ಒತ್ತಾಯಿಸಿದ ಹಿಂದೂ ಜನಜಾಗೃತಿ ಸಮಿತಿಯ ಪದಾಧಿಕಾರಿಗಳು ಬುಧವಾರ ಪಿಎಸ್‌ಐ ಸಂಪತ್‌ ಅವರಿಗೆ ಮನವಿ ಸಲ್ಲಿಸಿದರು.
ಹಿಂದೂ ಜನಜಾಗೃತಿ ಸಮಿತಿಯು ರಾμÀ್ಟ್ರರಕ್ಷಣೆ ಮತ್ತು ಧರ್ಮಜಾಗೃತಿ ಮಾಡುವ ಸ್ವಯಂಸೇವಾ ಸಂಸ್ಥೆಯಾಗಿದೆ. ಸಮಿತಿಯು ಸಾರ್ವಜನಿಕ ಉತ್ಸವ ಮತ್ತು ಇತರ ಕಾರ್ಯಕ್ರಮಗಳಲ್ಲಾಗುವ ಅನಾಚಾರಗಳಿಗೆ ಸಂಬಂಧಿಸಿದಂತೆ ಉದಾ. ರಾμÀ್ಟ್ರಧ್ವಜ, ರಾಷ್ಟ್ರೀಯ ಲಾಂಚನಗಳು ಮತ್ತು ಗೌರವಚಿಹ್ನೆಗಳ ವಿಡಂಬನೆಯನ್ನು ತಡೆಗಟ್ಟುವುದು, ಪಟಾಕಿಗಳ ಮೂಲಕ ಆಗುವ ಧ್ವನಿ ಮತ್ತು ವಾಯು ಪ್ರದೂμÀಣೆ ಹಾಗೂ ದೇವತೆಗಳ ವಿಡಂಬನೆ ತಡೆಗಟ್ಟುವುದು ಇಂತಹ ವಿವಿಧ ವಿμÀಯಗಳ ಸಂದರ್ಭದಲ್ಲಿ ಕಳೆದ 16 ವμÀರ್ಗಳಿಂದ ಪ್ರಬೋಧನೆ ಮತ್ತು ಜನಜಾಗೃತಿಯನ್ನು ಮಾಡುತ್ತಿದೆ. ಹಾಗೂ ಅನಾಚಾರಗಳನ್ನು ತಡೆಗಟ್ಟಲು ಸರಕಾರಕ್ಕೆ ಮತ್ತು ಪೋಲಿಸರಿಗೆ ಸಹಾಯವನ್ನೂ ಮಾಡುತ್ತಿದೆ. ದೇಶದಾದ್ಯಂತ ಸಧ್ಯ ಪಾಶ್ಚಾತ್ಯ ಕೆಟ್ಟ ರೂಢಿಗಳ ಹೆಚ್ಚುತ್ತಿರುವ ಅಂಧಾನುಕರಣೆಯಿಂದಾಗಿ ಹೊಸ ವμÀರ್ವನ್ನು ಯುಗಾದಿಯಂದು ಆಚರಿಸದೇ 31 ಡಿಸೆಂಬರ್‌ರ ಮಧ್ಯಾರಾತ್ರಿ 12 ಗಂಟೆಗೆ ಆಚರಿಸುವ ಕೆಟ್ಟ ರೂಢಿ ದೊಡ್ಡ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಈ ರಾತ್ರಿ ಧೂಮ್ರಪಾನ, ಮಧ್ಯಪಾನ, ಅಮಲು ಪದಾರ್ಥಗಳ ಸೇವನೆ ಮುಂತಾದವುಗಳ ಪ್ರಮಾಣ ಹೆಚ್ಚಾಗಿದೆ ಹಾಗೂ ಈ ರಾತ್ರಿ ಮಧ್ಯಪಾನ ಮಾಡಿ
ಅತಿವೇಗದಿಂದ ವಾಹನಗಳನ್ನು ಚಲಾಯಿವುದರಿಂದ ಅಪಘಾತಗಳೂ ಆಗುತ್ತಿವೆ. ಗಂಭೀರ ವಿμÀಯವೆಂದರೆ ಈ ರಾತ್ರಿಯಿಂದ ಮಧ್ಯಪಾನ ಪ್ರಾರಂಭ ಮಾಡುವವರ ಪ್ರಮಾಣ ಹೆಚ್ಚಾಗಿದ್ದು, ಇವರಲ್ಲಿ ಅಲ್ಪವಯಸ್ಸಿನ ತರುಣರು, ತರುಣಿಯರು ಮತ್ತು ಮಹಿಳೆಯರದ್ದು ಸಮಾವೇಶವಿದೆ.
ಇದರಿಂದಾಗಿ ರಾμÀ್ಟ್ರದ ಯುವಾ ಪೀಳಿಗೆ ನೈತಿಕದೃಷ್ಟಿಯಿಂದ ನಾಶವಾಗುವ ಮಾರ್ಗದಲ್ಲಿದೆ. ಇಂತಹ ದಾರಿತಪ್ಪಿದ ದಾರಿತಪ್ಪಿದ ಯುವಕರಿಗೆ ಆದರ್ಶ ರಾμÀ್ಟ್ರಪುರುμÀರ ಜೀವನದ ಆದರ್ಶವನ್ನು ಹೇಳಬೇಕು. ಆದರೆ ದುರ್ದೈವದ ಸಂಗತಿಯೆಂದರೆ, ಅನೇಕ ರಾಜ ಮಹಾರಾಜರು ಹಿಂದವೀ ಸ್ವರಾಜ್ಯದ ಸ್ಮಾರಕವಾಗಿರುವ ಕೋಟೆಯನ್ನೇ ಇಂದು ಇಂತಹ ಮನೋರಂಜನೆಗಳಿಗಾಗಿ, ಪಾರ್ಟಿಗಳಿಗಾಗಿ ಉಪಯೋಗಿಸಲಾಗುತ್ತಿದೆ.
ಇಂತಹ ಅನಾಚಾರಗಳಿಂದಾಗಿ ಕೋಟೆಗಳ ಪಾವಿತ್ರ÷್ಯ ಗಂಡಾಂತರದಲ್ಲಿದೆ. ಕೋಟೆಗಳ ಈ ಪಾವಿತ್ರ÷್ಯವನ್ನು ಕಾಪಾಡಲು ಹಿಂದು ಧರ್ಮಜಾಗೃತಿ ಸಮಿತಿ ಮತ್ತು ಸಮವಿಚಾರಿ ಸಂಘಟನೆಗಳು ಜನಪ್ರಬೋಧನೆಯನ್ನು ಮಾಡುತ್ತಿವೆ. ಅದರ ಅಂತರ್ಗತ ಸ್ಥಳಸ್ಥಳಗಳಲ್ಲಿ ಪ್ರಬೋಧನೆ ನೀಡುವ ಫಲಕಗಳನ್ನು ಹಚ್ಚುವುದು, ಕರಪತ್ರಗಳನ್ನು ಹಂಚುವುದು; ಕೆಲವು ದುರ್ಗ ಮತ್ತು ಕೋಟೆಗಳಲ್ಲಿ ಸ್ವಯಂಸೇವಕರು ಮತ್ತು ಸರಕಾರ ಇವುಗಳ ಮಾಧ್ಯಮದಿಂದ ಬರುವ-ಹೋಗುವವರ ತಪಾಸಣೆ ಮಾಡುವುದು; ಮಧ್ಯ, ಸಿಗರೇಟ್‌, ಅಮಲು ಪದಾರ್ಥ ಮುಂತಾದವುಗಳನ್ನು ತೆಗೆದುಕೊಂಡು ಹೋಗಲು ಪ್ರತಿಬಂಧಿಸುವುದು ಮುಂತಾದ ಪ್ರಯತ್ನಗಳು ನಡೆದಿವೆ. ಆದರು ಸಹ ಈ ರೀತಿಯ ಘಟನೆಗಳು ನಡೆಯುತ್ತಲೇ ಇವೆ.
ಆದುದರಿಂದ ದುರ್ಗ ಮತ್ತು ಕೋಟೆಗಳ ಪಾವಿತ್ರ÷್ಯವನ್ನು ಕಾಪಾಡಲು ಈ ನಿವೇದನೆಯ ಮೂಲಕ ನಾವು ವಿನಂತಿಸಿಕೊಳ್ಳುತ್ತಿದ್ದೇವೆ, ಬರುವ 31 ಡಿಸೆಂಬರರಂದು ರಾಜ್ಯದಲ್ಲಿನ ಕಿಲ್ಲೆ, ಪ್ರವಾಸಿತಾಣಗಳು, ಐತಿಹಾಸಿಕ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮಧ್ಯಪಾನ ಮಾಡುವುದು, ಧೂಮ್ರಪಾನ ಮಾಡುವುದು ಮತ್ತು ಪಾರ್ಟಿಗಳನ್ನು ಮಾಡುವುದು ಇವುಗಳನ್ನು ಪ್ರತಿಬಂಧಿಸುವ ಆದೇಶವನ್ನು ಹೊರಡಿಸಬೇಕು. ಹಾಗೆಯೇ ಈ ಸ್ಥಳಗಳಲ್ಲಿ ಕಾಯದೆ-ಸುವ್ಯವಸ್ಥೆಯನ್ನು ಕಾಪಾಡಲು ಪೊಲೀಸ್‌ ದಳದ ಆಯೋಜನೆ ಮಾಡಿ ಸುಸಂಸ್ಕೃತ ಮತ್ತು ನೀತಿಮಾನ ಸಮಾಜವನ್ನು
ನಿರ್ಮಿಸಲು ಮುಂದಾಗಬೇಕು ಎಂದು ನೀಡಿದ ಮನವಿಯಲ್ಲಿ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಪ್ರಮುಖರಾದ ಸತೀಶ ಶೇಟ್‌, ಸಂದೀಪ ಭಂಡಾರಿ, ರಾಮನಾಥ ನಾಯಕ, ಅನುರಾಧ ಪ್ರಭು, ಚಂದ್ರಕಲಾ, ಸುಮಂಗಳಾ, ವಿಠ್ಠಲ ಪಟಗಾರ ಹಾಗೂ ಇತರರು ಉಪಸ್ಥಿತರಿದ್ದರು.

loading...