ಸಾವಿನ ಮನೆಯಲ್ಲಿ ಬಿಜೆಪಿ ರಾಜಕೀಯ: ಶಾಸಕ ಆಲಗೂರ ಆರೋಪ

0
53

ವಿಜಯಪುರ : `ನಮ್ಮ ಮನೆಯ ಮಗು ಅತ್ಯಾಚಾರಕ್ಕೊಳಗಾಗಿ ಹತ್ಯೆಗೀಡಾಗಿರುವಾಗ ಬಿಜೆಪಿಯ ಮುಖಂಡರು ಸಾವಿನ ಮನೆಯಲ್ಲೂ ರಾಜಕೀಯ ಮಾಡುತ್ತಿದ್ದಾರೆ. ಸಂಘ ಪರಿವಾರದ ಸಂಘಟನೆಗಳಲ್ಲಿ ಸಕ್ರೀಯವಾಗಿರುವ ಹುಡುಗರೇ ದುಷ್ಕøತ್ಯ ಎಸಗಿದ್ದಾರೆಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದರೂ ಬಿಜೆಪಿ ಮುಖಂಡರು ಕಾಂಗ್ರೆಸ್ ಮೇಲೆ ಗೂಬೆ ಕೂರಿಸುತ್ತಿದ್ದಾರೆ’ ಎಂದು ಪ್ರೊ.ರಾಜು ಆಲಗೂರ ಆರೋಪಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಾಜಿ ಸಚಿವರಾದ ಗೋವಿಂದ ಕಾರಜೋಳ, ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾಡಿರುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ಮುಖ್ಯಮಂತ್ರಿ ಸಿದ್ಧರಾಮಯ್ಯ ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಿ ತಕ್ಷಣಕ್ಕೆ ಸರ್ಕಾರದಿಂದ ಪರಿಹಾರ ಒದಗಿಸಿದ್ದಾರೆ. ಆರೋಪಿ ಎಷ್ಟೇ ಪ್ರಭಾವಶಾಲಿಯಾಗಿರಲಿ ಕಾನೂನು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಸೂಕ್ಷ್ಮ ವಿಷಯವಾಗಿರುವುದರಿಂದಾಗಿ ಈ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿದ್ದಾರೆ. ಒಬ್ಬ ಮುಖ್ಯಮಂತ್ರಿಯಾಗಿ ಇನ್ನೇನು ಮಾಡಬೇಕು? ಎಂದು ಪ್ರಶ್ನಿಸಿದರು.
ಎಂದು ಡಾ.ಮಕ್ಬೂಲ್ ಬಾಗವಾನ ಮಾತನಾಡಿ, ಘಟನೆ ಸುದ್ದಿ ತಿಳಿಯುತ್ತಿದ್ದಂತೆ ನಾನು ಅಂದು ಸ್ಥಳಕ್ಕೆ ಧಾವಿಸಿದೆ. ಅಷ್ಟರಲ್ಲಿ ಸಂತ್ರಸ್ತೆಯ ಪಾಲಕರು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಆಕೆಯ ಶವವನ್ನು ಡಾ.ಅಂಬೇಡ್ಕರ ಸರ್ಕಲ್‍ನಲ್ಲಿ ಇರಿಸಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಬಂತು. ತಕ್ಷಣ ನಾನು ಅಲ್ಲಿಗೆ ಧಾವಿಸಿದೆ. ಅವರ ನೋವಿಗೆ ಸ್ಪಂದಿಸಿದೆ. ಮಧ್ಯರಾತ್ರಿ 1 ಗಂಟೆ ತನಕ ಅಲ್ಲಿಯೇ ಇದ್ದೆ. ಬೆಳಿಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳಕ್ಕೆ ಭೇಟಿ ನೀಡಿ ಶವಸಂಸ್ಕಾರಕ್ಕೆ ಅನುವು ಮಾಡಿಕೊಡುವುದಕ್ಕಾಗಿ ತಾತ್ಕಾಲಿಕವಾಗಿ ಪ್ರತಿಭಟನೆಯನ್ನು ಕೈ ಬಿಡುವಂತೆ ಪ್ರತಿಭಟನಾಕಾರರ ಮನವೊಲಿಸಿದರು. ಒಬ್ಬ ಜನಪ್ರತಿನಿಧಿಯಾಗಿ ಇನ್ನೇನು ಮಾಡಬೇಕು? ಪ್ರಶ್ನಿಸಿದರು.

`ಸಾಮಾಜಿಕ ಜಾಲತಾಣಗಳಲ್ಲಿ ಶಂಕಿತ ಆರೋಪಿಗಳ ಫೋಟೋಗಳು ವೈರಲ್ ಆಗಿವೆ. ಇದೀಗ ಆಯಾ ಅಕೌಂಟ್‍ಗಳನ್ನು ಡಿಲೀಟ್ ಮಾಡಲಾಗಿದೆ. ಆ ಖಾತೆಗಳಲ್ಲಿ ಆ ಹುಡುಗರು ಸಂಘ-ಪರಿವಾರದ ವಿವಿಧ ಸಂಘಟನೆಗಳಿಗೆ ಸೇರಿದವರು ಎಂಬುದು ಗೊತ್ತಾಗುತ್ತದೆ. ಬಿಜೆಪಿಯ ಹಲವು ಮುಖಂಡರು ಅವರು ತೆಗೆಸಿಕೊಂಡ ಚಿತ್ರಗಳನ್ನು ಎಫ್.ಬಿ.ಗೆ ಅಪಲೋಡ್ ಮಾಡಿದ್ದಾರೆ.

ಉಲ್ಟಾ ಚೋರ್ ಕೋತ್ವಾಲ್ ಕೋ ಢಾಟೇ ಎಂಬಂತೆ ತಮ್ಮ ಸಂಘಟನೆಯ ಕಾರ್ಯಕರ್ತರೇ ದುಷ್ಕøತ್ಯ ನಡೆಸಿರುವ ಗೊತ್ತಿದ್ದರೂ ಬಿಜೆಪಿ ನಾಯಕರು ಕಾಂಗ್ರೆಸ್ ಪಕ್ಷ, ಆಡಳಿತ ಪಕ್ಷದ ಶಾಸಕರು, ಸಚಿವರು ಈ ಪ್ರಕರಣದಲ್ಲಿ ಜವಾಬ್ದಾರಿಯಿಂದ ವರ್ತಿಸಿಲ್ಲ, ಸಾಧನಾ ಸಮಾವೇಶದ ಬ್ಯಾನರ್ ಕಟ್ಟುವಲ್ಲಿ ಬ್ಯೂಸಿಯಾಗಿದ್ದರು ಎಂಬ ಹಾಸ್ಯಾಸ್ಪದ ಹೇಳಿಕೆ ನೀಡುತ್ತಿದ್ದಾರೆ ಎಂದರು.

ಈ ಕ್ಷಣದವರೆಗೂ ಆರೋಪಿಗಳನ್ನು ಬಂಧಿಸದೇ ಇರುವುದು ನೋವು ತಂದಿದೆ. ತನಿಖೆಯಲ್ಲಿ ಆಗಿರುವ ವಿಳಂಬಕ್ಕೆ ಕಾರಣರಾಗಿರುವ ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಶಿಫಾರಸ್ಸು ಮಾಡುತ್ತೇವೆ. ದಲಿತ ಕುಟುಂಬದ ಬಾಲಕಿಗೆ ಆಗಿರುವ ದೌರ್ಜನ್ಯಕ್ಕೆ ನ್ಯಾಯ ಒದಗಿಸಿಕೊಡುತ್ತೇವೆ. ಅಲ್ಲಿಯವರೆಗೂ ನಾವು ವಿಶ್ರಮಿಸುವುದಿಲ್ಲ ಎಂದರು.
ಸಾಮಾಜಿಕ ಜಾಲತಾಣಗಳಲ್ಲಿನ ಶಂಕಿತ ಆರೋಪಿಗಳ ಫೋಸ್ಟ್‍ಗಳನ್ನು ಪ್ರದರ್ಶಿಸಿದ ಅವರು ಬಿಜೆಪಿ ಮುಖಂಡರು ಇವುಗಳ ಸತ್ಯಾಸತ್ಯತೆಯನ್ನು ಮರೆಮಾಚಬಾರದು. ಸೈಬರ್ ಕ್ರೈಂಗೆ ಈ ಖಾತೆಗಳ ವಿವರಗಳನ್ನು ನೀಡಿ ತನಿಖೆಗೆ ಕೋರುತ್ತೇವೆ ಎಂದರು.

loading...