ಸಾಹಿತ್ಯ ಚಿಂತನಾಗೋಷ್ಠಿ

0
45

ನರೇಗಲ್ಲ: ದೇಶದ ವಿಶಿಷ್ಟ ಕಲೆ, ಸಾಹಿತ್ಯ, ಸಂಸ್ಕೃತಿಗಳನ್ನು ಪ್ರತಿಬಿಂಬಿಸುವುದೆ ಪ್ರತಿ ತಿಂಗಳು ನಡೆಯುವ ಚಿಂತನಾಕೊಷ್ಟಿಯ ಪ್ರಮುಕ ಉದ್ದೆಶವಾಗಿದೆ ಎಂದು ಬಿ. ಕೆ. ಸವಿತಕ್ಕ ಹೇಳಿದರು.
ಅವರು ಸ್ಥಳೀಯ ಈಶ್ವರಿಯ ವಿಶ್ವವಿದ್ಯಾಲಯದಲ್ಲಿ ನಡೆದ ಸಾಹಿತ್ಯ ಚಿಂತನಾಗೊಷ್ಟಿಯಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ಹಿಂದಿನ ಕಾಲದಲ್ಲಿ ಜಾತಿಯತೆ, ಮೌಡ್ಯತೆಯ ಪಿಡುಗು ಕಾಡುತ್ತಿತ್ತು ಸ್ತಿçà ವಾತಂರ್ತ್ಯತೆ ಮರಿಚಿಕೆಯಾಗಿದ್ದ ೧೯೩೬ರ ಸಂದರ್ಬದಲ್ಲಿ ಒಬ್ಬ ಮಹಿಳೆಯಿಂದ ಸ್ಥಾಪನೆಯಾದ ಈ ಈಶ್ವರಿಯ ವಿಶ್ವವಿದ್ಯಾಲಯ ಹಲವಾರು ರಾಜ್ಯಗಳಲ್ಲಿ ಸಾವಿರಾರು ಕಛೇರಿಗಳನ್ನು ತೆರೆದ ಈ ಸಂಸ್ಥೆ ಶಿಕ್ಷಣ, ಸತ್ಸಂಗ, ಪಾಲನೆಯ ಮೂಲಕ ಜ್ಞಾನ, ಯೋಗ, ಸಂಸ್ಕಾರಗಳನ್ನು ನೀಡಿ ಶಾಂತಿ, ನೆಮ್ಮದಿಯನ್ನು ಕಲ್ಪಿಸುವ ದೇವತಾ ಕೇಂದ್ರಗಳಾಗಿ ಪ್ರಕಾಶಿಸುತ್ತಿವೆ ಎಂದರು. ಭಾರತದಲ್ಲಿಯೆ ಕರ್ನಾಟಕ ವಿಶೇಷ ಸಂಸ್ಕçತಿಯನ್ನು ಹೊಂದಿದ್ದು ವಿವಿಧ ರಾಜ್ಯಗಳಲ್ಲಿನ ಕನ್ನಡಿಗರು ಆದಿ ಕಾಲದಿಂದಲೂ ಆದ್ಯಾತ್ಮಿಕ, ಧಾರ್ಮಿಕ ಕೈಂಕರ್ಯಗಳನ್ನು ನಡೆಸಿಕೊಂಡು ಬಂದಿದ್ದು ಇಂದಿಗೂ ಅವುಗಳನ್ನು ಉಲಿಸಿ ಬೆಳಸಿಕೊಂಡು ಬಂದಿರುವುದು ನಮ್ಮೆಲ್ಲ ಕನ್ನಡಿಗರ ಹೆಮ್ಮೆಯ ವಿಷಯವಾಗಿದೆ. Äತ್ತರ ಭಾರತದ ಕೇದಾರ, ದ್ವಾರಕನಾಥ ದೇವಾಲಯಗಳಲ್ಲಿ ಕನ್ನಡಿಗರೆ ಹೆಚ್ಚು ಪ್ರಚಿಲಿತರಾಗಿದ್ದು ರಾಜಸ್ಥಾನದಲ್ಲಿನ ನಮ್ಮ ಈಶ್ವರಿಯ ವಿಶ್ವವಿದ್ಯಾಲಯದ ಕೇಂದ್ರ ಕಛೇರಿಯಲ್ಲಿ ವಿವಿದ ವಿಭಾಗಗಳಲ್ಲಿ ಕನ್ನಡಿಗರೆ ಮುಂದಾಳತ್ವದಲ್ಲಿದ್ದಾರೆ. ಈ ಕನ್ನಡ ನಾಡು ಸಾಹಿತ್ಯ ಭಂಡಾರದ ಕರುನಾಡು ಶಿಲ್ಪ ಕಲೆಗಳ ಹಳೆಬೀಡಾಗಿ ಕಂಗೊಳಿಸುತ್ತಿದೆ. ದೇಶ ವಿದೇಶಿಗರ ಅನುಕರಣಿಯ ಕಳಶಪ್ರಾಯವಾಗಿದ್ದು ಇಲ್ಲಿ ಜನ್ಮತಾಳಿದ ನಾವುಗಳೆ ಪುಣ್ಯವಂತರು ಎಂದು ಬಿ. ಕೆ. ಸವಿತಕ್ಕ ತಮ್ಮ ಉಪನ್ಯಾಸದಲ್ಲಿ ತಿಳಿಸಿದರು.
ಅದ್ಯಕ್ಷತೆ ವಹಿಸಿದ್ದ ಜಿಲ್ಲಾ ಸಾಹಿತ್ಯ ಪರಿಶತ್ತಿನ ಮಹಿಳಾ ಪ್ರತಿನಿದಿ ಮಂಜುಳಾ ರೇವಡಿ ಮಾತನಾಡಿ ನಮ್ಮ ನಾಡಿನ ಸಂಸ್ಕೃತಿಯ ಶ್ರಿÃಮಂತಿಕೆಯನ್ನು ಮರೆಮಾಚದೆ ನಮ್ಮ ಮುಂದಿನ ಪೀಳಿಗೆಗೆ ಪರಿಚಯಸಿ ಪ್ರೊÃತ್ಸಾಹಿಸುವ ಜವಾಬ್ದಾರಿ ನಮ್ಮಲ್ಲರ ಮೇಲಿರುವದರಿಂದ ಈ ಸಾಹಿತ್ಯ ಚಿಂತನಾ ಗೋಷ್ಟಿಯನ್ನು ಪ್ರತಿ ತಿಂಗಳು ಎಲ್ಲ ವಾರ್ಡಗಳಲ್ಲಿ ನಡೆಸಲಾಗುತ್ತಿದೆ. ಸಾಹಿತ್ಯಾಭಿಮಾನಿಗಳು ಇನ್ನಷ್ಟು ಹೆಚ್ಚಿನ ರೀತಿಯಲ್ಲಿ ಪಸರಿಸುವ ಕಾರ್ಯವಾಗಬೇಕಾಗಿದೆ. ಇದಕ್ಕೆ ತಾಲೂಕಾ ಕಸಪ ಘಟಕ ಹೆಚ್ಚಿನ ಸಹಕಾರ ನೀಡಲಿದೆ ಎಂದು ತಿಳಿಸಿದರು.
ಅತಿಥಿಗಳಾಗಿ ಪಪಂ ಸದಸ್ಯ ಅಕ್ಕಮ್ಮ ಮಣ್ಣೊಡ್ಡರ, ಅಕ್ಕಮಹಾದೇವಿ ನರಗುಂದ, ಶಿಕ್ಷಕಿ ಶರಣಮ್ಮ ಅಂಗಡಿ, ಭರತಿ ಹೊಸಮನಿ, ವಿರೇಶ ನೇಗಲಿ ಉಪಸ್ತಿತರಿದ್ದರು.
ಇದೆ ಸಂದರ್ಬದಲ್ಲಿ ಕೋಟುಮಚಗಿಯ ಸಾವಯವ ಕೃಷಿಕ ವಿರೇಶ ನೇಗಲಿ, ನರೇಗಲ್ಲ ಮಜರೆ ದ್ಯಾಂಪೂರ ಗ್ರಾಮದ ರಾಷ್ಟಿçÃಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ವೀರನಗೌಡ ಮಾಲಿಪಾಟೀಲ, ಅಕ್ಕಮ್ಮ ಮಣ್ಣೊಡ್ಡರ ಹಾಗೂ ಬಿ. ಕೆ. ಸವಿತಕ್ಕನವರನ್ನು ಸನ್ಮಾನಿಸಲಾಯಿತು. ಶಿಕ್ಷಕ ಜೆ. ಎ. ಪಾಟೀಲ ಸ್ವಾಗತಿಸಿದರು. ಎಮ್. ಕೆ. ಬೇವಿಕಟ್ಟಿ ನಿರೂಪಿಸಿದರು. ಎಸ್. ಜಿ. ಗುಳಗಣ್ಣವರ ವಂದಿಸಿದರು.

 

loading...