ಸಾಹುಕಾರ್ ‌ಮನೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ ರೈತರು

0
47

ಗೋಕಾಕ

ಕರ್ನಾಟಕ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ರದ್ದುಪಡಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಗೋಕಾಕದಲ್ಲಿ ಗುರುವಾರ ಪ್ರತಿಭಟನೆ ನಡೆಸಿ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಗೃಹ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ರೈತರನ್ನು ಪೊಲೀಸರು ತಡೆದರು.

ಇದರಿಂದ ಕೆರಳಿದ ರೈತರು, ಸಚಿವರು ಎಲ್ಲಿಯೇ ಇರಲಿ, ಘೇರಾವ್ ಹಾಕುತ್ತೇವೆ, ಕಾಯ್ದೆಯನ್ನು ಹಿಂದಕ್ಕೆ ಪಡೆಯುವವರೆಗೆ ಹೋರಾಟ ಮುಂದುವರಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ರದ್ದುಪಡಿಸಬೇಕು ಎಂದು ಗೋಕಾಕ ಬಸವೇಶ್ವರ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿದ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಸೇರಿದಂತೆ ವಿವಿಧ ರೈತ ಸಂಘಟನೆಗಳ ರೈತರು ಅಲ್ಲಿಂದ ಸಚಿವ ರಮೇಶ ಜಾರಕಿಹೊಳಿ ಅವರ ಗೃಹ ಕಚೇರಿಯತ್ತ ಹೊರಟರು. ಸಚಿವರ ಮನೆಯತ್ತ ಧಾವಿಸುತ್ತಿದ್ದ ನೂರಾರು ರೈತರನ್ನು ಪೊಲೀಸರು ತಡೆದರು. ಈ ಸಂದರ್ಭದಲ್ಲಿ ರೈತರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆಯಿತು.ಪೊಲೀಸರು ಸಚಿವ ರಮೇಶ ಜಾರಕಿಹೊಳಿ ಮನೆಯ ಸುತ್ತ ಬಿಗಿ ಭದ್ರತೆ ಕೈಗೊಂಡಿದ್ದಾರೆ.
ಪಾಂಡುರಂಗ ಬೀರನಗಡ್ಡಿ, ವಿ ಎಮ್ ಸಸಾಲಟ್ಟಿ, ಪ್ರಕಾಶ ತೇರದಾಳ, ಅಶೋಕ ಮಾಚಕನೂರ, ವೆಂಕಪ್ಪಾ ಅವರಾದಿ, ಲಕ್ಷ್ಮಣ ತೋಳಮರ್ಡಿ, ಸಕ್ರೆಪ್ಪಾ ತೋಳಮರ್ಡಿ, ಸುಭಾಸ ಸಾರಾಪೂರ, ಮಲ್ಲಪ್ಪಾ ಕುರಿ, ಯಮನಪ್ಪ ಚಿಂಚನೂರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

loading...