ಸಿಂದಗಿ ಕ್ಷೆÃತ್ರ ತುಂಬಿದ ಬಿಂದಿಗೆ: ಮನಗೂಳಿ

0
13

ಸಿಂದಗಿ: ತಾಲೂಕು ಜಿಲ್ಲೆಯಲ್ಲಿಯೆ ಸಾಂಸ್ಕೃತಿಕÀ ಕ್ಷೆÃತ್ರದಲ್ಲಿ ಅನೇಕ ಸಾಧನೆ ಮಾಡುತ್ತಲೆ ಬಂದಿದೆ. ಸಿಂದಗಿ ಕ್ಷೆÃತ್ರ ಕಲೆ ಸಾಹಿತ್ಯ, ಶೈಕ್ಷಣಿಕ, ಕೃಷಿ ಕ್ಷೆÃತ್ರಗಳಲ್ಲಿ ಒಂದು ತುಂಬಿದ ಬಿಂದಿಗೆ ಎಂದು ಪಟ್ಟಣದ ಖ್ಯಾತ ವೈದ್ಯ ಶಾಂತವೀರ ಮನಗೂಳಿ ಹೇಳಿದರು.
ಅವರು ಪಟ್ಟಣದ ಎಬಿಸಿಡಿ ಡ್ಯಾನ್ಸ್ ತರಬೇತಿ ಶಾಲೆಯವತಿಯಿಂದ ನವಂಬರ ೧೮ರಂದು ಪಟ್ಟಣದ ತಾಲೂಕಾ ಕ್ರಿÃಡಾಂಗಣದಲ್ಲಿ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯ ಸಮಾರಂಭದ ಪೂರ್ವ ಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ನೃತ್ಯಗಳು ಮನರಂಜನೆಯನ್ನು ನೀಡುವುದರ ಜೊತೆಗೆ ಉತ್ತಮ ಆರೋಗ್ಯವನ್ನು ನೀಡುತ್ತವೆ. ಕರ್ನಾಟಕದಲ್ಲಿ ಈ ನೃತ್ಯ ಕಲೆಗೆ ವ್ಯಾಪಕ ಬೇಡಿಕೆ ಇದೆ. ಅನೇಕ ಕನ್ನಡ, ಹಿಂದಿ, ಮರಾಠಿ ಚಲನಚಿತ್ರಗಳಲ್ಲಿ ವಿಜಯಪುರ ಜಿಲ್ಲೆಯಿಂದ ಅನೇಕ ಕಲಾವಿದರು ಭಾಗವಹಿಸಿ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಸಿಂದಗಿಯಲ್ಲಿ ನಡೆಯುವ ಯಾವುದೇ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಗಳಿಗೆ ಮನಗೂಳಿ ಕುಟುಂಬ ಸದಾ ಬೆನ್ನೆಲುಬಾಗಿ ಕಾರ್ಯ ಮಾಡುತ್ತದೆ. ಸಂಘಟಕರು ಉತ್ತಮ ಪ್ರಯತ್ನದಿಂದ ಈ ರಾಜ್ಯ ಮಟ್ಟದ ನೃತ್ಯ ಸ್ಪಧÉðಯನ್ನು ಆಯೋಜಿಸಿರುವುದು ಹೆಮ್ಮೆಯ ಸಂಗತಿ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ ಹಿರಿಯ ಪತ್ರಕರ್ತ ಶಾಂತೂ ಹಿರೇಮಠ ಮಾತನಾಡಿ, ಅನೇಕ ವರ್ಷಗಳಿಂದಲೂ ಸಿಂದಗಿ ಸಾಂಸ್ಕೃತಿಕವಾಗಿ ತನ್ನ ಶಿರಿವಂತಿಕೆಯನ್ನು ಉಳಿಸಿಕೊಂಡು ಬರುತ್ತಿದೆ. ನವಂಬರ ೧೮ ರಂದು ಪಟ್ಟಣದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಗೆ ನಮ್ಮ ಎಲ್ಲ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

loading...