ಸಿಂದಗಿ ತಾಲೂಕಿನ ಚಾಂದಕವಠೆ ಗ್ರಾಮದಲ್ಲಿ ಶ್ರೀ ಮರಡಿಸಿದ್ದೇಶ್ವರ ಜಾತ್ರಾಮಹೋತ್ಸವ

0
55

 

ಸಿಂದಗಿ : 16 ಹಾಲುಮತ ಸಮಾಜಕ್ಕೆ ಮುಖ್ಯವಾಗಿ

ಬೇಕಾಗಿರುವುದು ಶಿಕ್ಷಣ ಪಾಲಕರು ಹಾಗೂ ಊರಿನ

ಮುಖಂಡರು ಕೂಡಲೆ ಮುಂಜಾಗ್ರತೆ ವಹಿಸಿ ಸಮಾಜ

ಅಭಿವೃದ್ದಿ ಏಳಿಗೆಗೆ ಜೊತೆಗೆ ಶಿಕ್ಷಣಕ್ಕೆ ಒತ್ತು ನೀಡಬೇಕು

ಎಂದು ಜವಳಿ ಖಾತೆ ಸಚಿವ ವತೂರ ಪ್ರಕಾಶ ಅವರು ಕರೆ

ನೀಡಿದರು.

ಅವರು ಸಿಂದಗಿ ತಾಲೂಕಿನ ಚಾಂದಕವಠೆ

ಗ್ರಾಮದಲ್ಲಿನ ಶ್ರೀ ಮರಡಿಸಿದ್ದೇಶ್ವರ ಜಾತ್ರಾಮಹೋತ್ಸವದ

ಅಂಗವಾಗಿ ಏರ್ಪಡಿಸಿದ ಹಾಲುಮತ ಜಾಗೃತಿ ಸಮಾವೇಶದ

ಸಮಾರಂಭವನ್ನು ಡೊಳ್ಳು ಭಾರಿಸುವ ಮೂಲಕ ಉದ್ಘಾಟಿಸಿ

ಅವರು ಮಾತನಾಡಿದರು,

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ರಮೇಶ

ಭೂಸನೂರ ಅವರು ಮಾತನಾಡಿ, ಸರಳತೆ, ಮುಗ್ದತೆಗೆ

ಹೆಸರು ಪಡೆದಿರುವ ಹಾಲುಮತ ಸಮಾಜ ಮುಂದಿನ

ದಿನಗಳಲ್ಲಿ ಸಮಾಜದ ಅಭಿವೃದ್ದಿಯನ್ನು ಮುಂದಿಟ್ಟುಕೊಂಡು

ಮಕ್ಕಳಿಗೆ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಕರೆ ನೀಡಿದರು.

ಸಮಾವೇಶದ ಸಮುದಾಯ ಭವನದ ಉದ್ಘಾಟನೆಯನ್ನು

ನೇರೆವೆರಿಸಿದ ಶ್ರೀ ಅಭಿನವ ಪುಂಡಲಿಂಗ ಮಹಾರಾಜ

ಅವರು ಮಾತನಾಡಿ, ಕನಕದಾಸರಂತಹ ಮಹಾನ್

ವ್ಯಕ್ತಿಯನ್ನು ನೀಡಿದ ಹಾಲುಮತ ಸಮಾಜ ಇಂದಿಗೂ

ಅವಕಾಶ ವಂಚಿತ ಪಂಗಡವಾಗಿದ್ದು ಕೂಡಲೆ ಅಭಿವೃದ್ದಿ

ಕಲ್ಪಿಸುವ ವಾತಾವರಣವನ್ನು ಸೃಷ್ಟಿಸಲು ಸಮಾಜ

ವಂದುಗೂಡಬೇಕು ಎಂದು ಆಶಿರ್ವಚನ ನೀಡಿದರು.

ಮಾಜಿ ಸಚಿವ ಎಂ.ಸಿ. ಮನಗೂಳಿ ಅವರು

ಮಾತನಾಡಿ, ಹಾಲುಮತ ಸಮಾಜದ ಜನರು ಶಿಕ್ಷಣದಿಂದ

ಹಿಂದುಳಿದಿರುತ್ತಾರೆ ಪಾಲಕರು ತಮ್ಮ ಮಕ್ಕಳಿಗೆ ವಿದ್ಯೆಯೊಂದಿಗೆ

ಸಂಸ್ಕಾರವನ್ನು ನೀಡಿ ಅವರನ್ನು ಸನ್ಮಾರ್ಗದತ್ತ ನಡೆಸಬೇಕು

ಎಂದು ಹೇಳಿದರು. ಅಂಜುಮನ್ ಕಾಲೇಜಿನ ಪ್ರೊ,

ರಾ.ಶಿ.ವಾಡೇದ ಅವರು ಹಾಲುಮತ ಸಮಾಜದ ಕುರಿತು

ಅತಿಥಿ ಉಪನ್ಯಾಸವನ್ನು ನೀಡಿದರು. ಮುಖ್ಯ ಅತಿಥಿಗಳಾಗಿ

ತಮ್ಮಣ್ಣ ಸುಣಗಾರ. ಜಿ.ಪಂ.ಸದಸ್ಯೆ ಸಾವಿತ್ರಿಬಾಯಿ ಅಂಗಡಿ.

ಈರಗಂಟೆಪ್ಪ ಮಾಗಣಗೇರಿ. ತಾಪಂ ಸದಸ್ಯ ಸುರೇಶ

ಪೂಜಾರಿ. ಬೈಲಪ್ಪ ನೇಲೊಗಿ, ಜಗದೀಶ ಪಾಟೀಲ. ಪ್ರಭು

ಶಾಸ್ತ್ತ್ರಿ ಮತ್ತು ವಿಶಇಂಷಂ ಆಮಂತ್ರಿತರಾಗಿ ಡಿ.ಜಿ.ಪಾಟೀಲ.

ಎಚ್.ಎಂ.ಯಡಗಿ(ಪಾಟೀಲ). ಬಿ.ಕೆ.ಗೊಬ್ಬೂರ. ಗುರಪ್ಪ

ಯಂಕಂಚಿ. ಪಿ.ಟಿ.ಪಾಟೀಲ. ಶರಣಗೌಡ.ಎಸ್.ಪಾಟೀಲ.

ಎಸ್.ಕೆ.ಪೂಜಾರಿ. ಎಂ.ಎನ್.ಕಿರಣರಾಜ. ಕೆ.ಡಿ.ಪೂಜಾರಿ.

ಭಾಗಮ್ಮ ಸೊನ್ನದ. ಅಕ್ಬರ ಚಟ್ಟರಕಿ ವೇದಿಕೆ ಮೇಲೆ ಇದ್ದರು.

ಗಂಗಾಧರ ಮಲ್ಯಾಡ ಸ್ವಾಗತಿಸಿದರು. ಪ್ರೊ, ಎ.ಆರ್.

ಹೆಗ್ಗನದೊಡ್ಡಿ ನಿರೂಪಿಸಿದರು.

ಬೆಳಗಿನ 4 ಕ್ಕೆ 5 ಗ್ರಾಮಗಳ ಪಲ್ಲಕ್ಕಿಯ ಗಂಗಸ್ಥಳ

ಮತ್ತು ಸಕಲ ವಾದ್ಯ ವೈಭವಗಳ ಮೂಲಕ ಪಲ್ಲಕ್ಕಿ ಮೆರವಣಿಗೆ

ಮಾಡಲಾಯಿತು. ಇದೇ ಸಂದರ್ಭದಲ್ಲಿ ಸಚಿವ ವರ್ತೂರ

ಪ್ರಕಾಶ ತಮ್ಮ ವಯಕ್ತಿಕವಾಗಿ ಶ್ರೀ ಮರಡಿಸಿದ್ದೇಶ್ವರ

ದೇವಸ್ಥಾನದ ಜೀರ್ಣೋದ್ದಾರಕ್ಕಾಗಿ 1 ಲಕ್ಷ ರೂಪಾಯಿಯನ್ನು

ದೇಣಿಗೆ ನೀಡಿದರು

loading...

LEAVE A REPLY

Please enter your comment!
Please enter your name here